ದೇವಧರ್ ಟ್ರೋಫಿ : ಭಾರತ ಬ್ಲೂ ತಂಡಕ್ಕೆ ರೋಹಿತ್ ನಾಯಕ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21: ಪ್ರೊಫೆಸರ್ ಡಿಬಿ ದೇವಧರ್ ಟ್ರೋಫಿ 2017ಕ್ಕಾಗಿ ಭಾರತ 'ಬ್ಲೂ' ಹಾಗೂ ಭಾರತ 'ರೆಡ್' ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆದಾರರು ಪ್ರಕಟಿಸಿದ್ದಾರೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಗೆದ್ದ ತಮಿಳುನಾಡಿನ ವಿರುದ್ಧ ಈ ಎರಡು ತಂಡಗಳು ಸೆಣಸಲಿವೆ. ವೈಜಾಗ್ ನಲ್ಲಿ ಮಾರ್ಚ್ 25 ರಿಂದ 29ರ ತನಕ ಪಂದ್ಯಾವಳಿ ನಡೆಯಲಿದೆ.

ಹಿರಿಯ ಆಟಗಾರರಾದ ರೋಹಿತ್ ಶರ್ಮ ಅವರು ಇಂಡಿಯಾ 'ಬ್ಲೂ' ತಂಡಕ್ಕೆ ನಾಯಕರಾಗಿದ್ದರೆ, ಇಂಡಿಯಾ 'ರೆಡ್' ತಂಡಕ್ಕೆ ಪಾರ್ಥೀವ್ ಪಟೇಲ್ ಕ್ಯಾಪ್ಟನ್ ಆಗಿದ್ದಾರೆ.

ಮಾರ್ಚ್ 21ರಂದು ನಡೆದ ವಿಜಯ್ ಹಜಾರೆ ಟ್ರೋಫಿ ಅಂತಿಮ ಹಣಾಹಣಿಯಲ್ಲಿ ಬೆಂಗಾಲ ತಂಡ ವಿರುದ್ಧ ತಮಿಳುನಾಡು ತಂಡ 37ರನ್ ಗಳ ಭರ್ಜರಿ ಜಯ ದಾಖಲಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರು ಭರ್ಜರಿ ಶತಕ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು.

BCCI announces India ‘Blue’ and ‘Red’ teams for Deodhar Trophy 2017

ಇಂಡಿಯಾ 'ಬ್ಲೂ' : ರೋಹಿತ್ ಶರ್ಮ (ನಾಯಕ), ಮನ್ದೀಪ್ ಸಿಂಗ್, ಶ್ರೇಯಸ್ ಐಯರ್, ಅಂಬಟಿ ರಾಯುಡು, ಮನೋಜ್ ತಿವಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹರ್ಭಜನ್ ಸಿಂಗ್, ಕೃನಾಲ್ ಪಾಂಡ್ಯ, ಶಬಾಜ್ ನದೀಂ, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಪಂಕಜ್ ರಾವ್.

ಇಂಡಿಯಾ 'ರೆಡ್' : ಪಾರ್ಥೀವ್ ಪಟೇಲ್ (ನಾಯಕ, ವಿಕೆಟ್ ಕೀಪರ್), ಶಿಖರ್ ಧವನ್, ಮನೀಶ್ ಪಾಂಡೆ, ಮಾಯಾಂಕ್ ಅಗರವಾಲ್, ಕೇದಾರ್ ಜಾಧವ್, ಇಶಾಂತ್ ಜಗ್ಗಿ, ಗುರ್ ಕೀರತ್ ಮನ್, ಅಕ್ಷರ್ ಪಟೇಲ್, ಅಕ್ಷಯ್ ಕರ್ನೆವಾರ್, ಅಶೋಕ್ ದಿಂಡಾ, ಕುಲ್ವಂತ್ ಖೆಜ್ರೊಲಿಯಾ, ಧವಳ್ ಕುಲಕರ್ಣಿ, ಗೋವಿಂದ್ ಪೊದ್ದಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The All India Senior Selection Committee have announced the players for India 'Blue' and India 'Red' squads for Professor DB Deodhar Trophy 2017.
Please Wait while comments are loading...