ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್ ಗೆ ಭಾರತ ತಂಡ ಇಂತಿದೆ

Posted By:
Subscribe to Oneindia Kannada

ನವದೆಹಲಿ, ಮೇ 16 : ಇದೇ ಜೂನ್ 24 ರಿಂದ ಜುಲೈ 23ರ ವರಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ 2017 ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆ ಭಾರತದ ಮಹಿಳಾ 15 ಸದಸ್ಯರ ತಂಡವನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿ)ಪ್ರಕಟಿಸಿದೆ.

ಕೇವಲ ಒಂದು ಬದಲಾವಣೆ ಮಾಡಿದ್ದನ್ನು ಹೊರತು ಪಡಿಸಿದರೆ ಉಳಿದಂತೆ ಪ್ರಸಕ್ತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಆಡುತ್ತಿರುವ ಆಟಗಾರರನ್ನೇ ಬಿಸಿಸಿಐ ಆಯ್ಕೆ ಮಾಡಿದೆ. [ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2017 ವೇಳಾಪಟ್ಟಿ]

BCCI announced Indian squad for 2017 ICC Women's World Cup

ಸಧ್ಯ ದಕ್ಷಿಣ ಆಫ್ರಿಕಾದ ಆಡುತ್ತಿರುವ ದೇವಿಕಾ ವೈದ್ಯ ಅವರ ಬದಲಾಗಿ ಸ್ಮೃತಿ ಮಂದಾನ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇನ್ನುಳಿದಂತೆ ಮಿಥಾಲಿ ರಾಜ್‌ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿದೆ.

ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಬಿಗ್ ಬ್ಯಾಷ್ 2016 ಲೀಗ್ ನಿಂದ ಹೊರಗುಳಿದಿದ್ದ 20 ವರ್ಷದ ಸ್ಮೃತಿ ಮಂದಾನ 15ರ ಬಳಗದಲ್ಲಿ ಸ್ಥಾನ ಪಡೆದು ಅಶ್ಚರ್ಯ ಮೂಡಿಸಿದ್ದಾರೆ.

ತಂಡ ಇಂತಿದೆ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಮ್, ಪೂನಂ ರಾವತ್‌, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಶ್ಟ್, ಸುಶ್ಮಾ ವರ್ಮಾ, ಮಾನಸಿ ಜೋಶಿ, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್‌, ಸ್ಮೃತಿ ಮಂದಾನ, ನುಷತ್ ಪರ್ವೀನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian squad for the 2017 ICC Women’s World Cup to be held in England was announced on Monday with no real surprises as Mithali Raj was named skipper of the squad comprising of 15 members.
Please Wait while comments are loading...