ರೈತರ ಮಗ ಬರೀಂದರ್ ಕನಸಿನ ಟಿ20 ಪ್ರವೇಶ

Posted By:
Subscribe to Oneindia Kannada

ಹರಾರೆ, ಜೂನ್ 20: ಟೀಂ ಇಂಡಿಯಾ ಸೇರುವ ಕನಸು ಹೊತ್ತುಕೊಂಡು ಅಭ್ಯಾಸ ಮಾಡುವ ಪ್ರತಿ ಕ್ರಿಕೆಟರ್ ಗಳಿಗೂ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡುವ ಕನಸಿರುತ್ತದೆ. ಅದರಂತೆ, ಬರೀಂದರ್ ಸ್ರಾನ್ ಕೂಡಾ ಮೊದಲ ಟಿ20 ಪಂದ್ಯದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೂನ್ 20ರಂದು ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 99ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಸ್ರಾನ್ ಮಹತ್ವದ ಪಾತ್ರವಹಿಸಿದರು. ಸ್ರಾನ್ ಗೆ ಬೂಮ್ರಾ ಕೂಡಾ ಸಾಥ್ ನೀಡಿದರು. ಇದರಿಂದಾಗಿ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.[ಬರಿಂದರ್, ಬಾಕ್ಸಿಂಗ್ ನಿಂದ ಕ್ರಿಕೆಟ್ ಗೆ ಎಂಟ್ರಿ]

ವೇಗಿ ಬರೀಂದರ್ 4 ಓವರ್ ಗಳಲ್ಲಿ 10ರನ್ನಿತ್ತು 4 ವಿಕೆಟ್ ಗಳಿಸುವ ಮೂಲಕ ಭಾರತದ ಪರ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡರು. ಈ ಮುಂಚೆ ಈ ಸಾಧನೆಯನ್ನು ಸ್ಪಿನ್ನರ್ ಪ್ರಗ್ನಾನ್ ಓಜಾ ಅವರು 4/21 ಗಳಿಸಿದ್ದು ಸಾಧನೆಯಾಗಿತ್ತು.

Barinder Sran finishes with best bowling figures for India on T20I debut

ಆದರೆ, ವಿಶ್ವ ಮಟ್ಟದಲ್ಲಿ ಟಿ20ಐ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ಬಾಂಗ್ಲಾದೇಶದ ಬೌಲರ್ ಎಲಿಯಾಸ್ ಸನ್ನಿ ಹೆಸರಿನಲ್ಲಿದೆ. ಸನ್ನಿ ಅವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೆಲ್ ಫಾಸ್ಟ್ ನಲ್ಲಿ ಜುಲೈ 18, 2012ರಂದು 5/13 ವಿಕೆಟ್ ಪಡೆದು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಸ್ರಾನ್ ಅವರ ಸಾಧನೆ ಎರಡನೇ ಶ್ರೇಷ್ಠ ಪ್ರದರ್ಶನವಾಗಿದೆ. [2ನೇ ಟಿ20: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸುಲಭ ಜಯ]

ಹರ್ಯಾಣ ಮೂಲದ ರೈತರೊಬ್ಬರ ಮಗ ಸ್ರಾನ್ ಅವರು ಬಾಕ್ಸಿಂಗ್ ಕಲಿತು ಬಾಕ್ಸರ್ ಆಗುವ ಕನಸು ಹೊತ್ತಿದ್ದರು. ನಂತರ ವೇಗದ ಬೌಲರ್ ಆಗಿ ಬದಲಾದ ಸ್ರಾನ್ ಅವರು ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ಏಕದಿನ ಕ್ರಿಕೆಟ್ ಆಡುವ ಅವಕಾಶ ಪಡೆದುಕೊಂಡರು.

ರಾಹುಲ್ ದ್ರಾವಿಡ್ ಅವರು ನಾಯಕರಾಗಿ ನಂತರ ಕೋಚ್ ಆಗಿದ್ದ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುವ ಬರಿಂದರ್ ಸ್ರಾನ್ ಅವರ ಬಗ್ಗೆ ಎದುರಾಳಿ ನಾಯಕ ಸ್ಟೀವ್ ಸ್ಮಿತ್ ಕೂಡಾ ಮೆಚ್ಚುಗೆ ಮಾತುಗಳನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Left-arm seamer Barinder Sran had a sensational T20 International debut as he finished with best bowling figures for India in the second T20 match against Zimbabwe here at Harare on June 20.
Please Wait while comments are loading...