ಬಾಂಗ್ಲಾದೇಶ ಕ್ರಿಕೆಟಿಗ ಅರಾಫತ್ ಸನ್ನಿ ಬಂಧನ

Posted By:
Subscribe to Oneindia Kannada

ಢಾಕಾ, ಜನವರಿ 23: ಬಾಂಗ್ಲಾದೇಶ ಕ್ರಿಕೆಟಿಗ ಅರಾಫತ್ ಸನ್ನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂತರ್ಜಾಲ ಕಾನೂನು ಉಲ್ಲಂಘಿಸಿ ಅರಾಫತ್ ಅವರು ತಮ್ಮಗೆಳತಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಆರೋಪ ಎದುರಿಸುತ್ತಿದ್ದಾರೆ.

'ಗೆಳತಿ ಹೆಸರಿನಲ್ಲಿ ಫೇಕ್ ಫೇಸ್​ಬುಕ್ ಖಾತೆ ತೆರೆದು, ಅದರಲ್ಲಿ ಅರೆನಗ್ನ ಚಿತ್ರಗಳನ್ನು ಹಾಕುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

Bangladeshi Cricketer Arafat Sunny arrested

ಬಾಂಗ್ಲಾ ಪರ 16 ಏಕದಿನ, 10 ಟಿ20 ಪಂದ್ಯಗಳನ್ನು ಎಡಗೈ ಸ್ಪಿನ್ನರ್ ಅರಾಫತ್ ಆಡಿದ್ದಾರೆ. ಅರಾಫತ್ ವಿರುಧ್ದ ಅವರ ಗೆಳತಿ ದೂರು ನೀಡಿದ ಬಳಿಕ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸನ್ನಿ ಅವರ ಗೆಳತಿ ಮೊಹಮ್ಮದ್ ಪುರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸನ್ನಿ ಅವರನ್ನು ಢಾಕಾ ನಗರದ ಹೊರವಲಯದಲ್ಲಿರುವ ಅಮಿನ್ ಬಜಾರ್ ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladeshi cricketer Arafat Sunny was arrested on Sunday over alleged infringement to privacy of a woman, police said
Please Wait while comments are loading...