ಕೇವಲ 4 ಎಸೆತಗಳಲ್ಲಿ 92ರನ್ ಹೊಡೆಸಿಕೊಂಡ ಬೌಲರ್!

Posted By:
Subscribe to Oneindia Kannada

ಢಾಕಾ, ಏಪ್ರಿಲ್ 12: ಅಂಪೈರ್ ವಿರುದ್ಧ ಇದ್ದ ದ್ವೇಷವನ್ನು ತೀರಿಸಿಕೊಳ್ಳಲು ಬಾಂಗ್ಲಾದೇಶ ಕ್ರಿಕೆಟರ್ ರೊಬ್ಬರು, ಕೇವಲ 4 ಎಸೆತಗಳಲ್ಲಿ 92ರನ್ ಹೊಡೆಸಿಕೊಂಡು ಬೇಕಂತಲೇ ಪಂದ್ಯವನ್ನು ಸೋಲುವಂತೆ ಮಾಡಿದ್ದಾರೆ.

ಏಪ್ರಿಲ್ 11ರದು ನಡೆದ ಢಾಕಾದ ಸೆಕೆಂಡ್ ಡಿವಿಷನ್ ಲೀಗ್ ಪಂದ್ಯ50 ಓವರ್ ಗಳ ಪಂದ್ಯದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಲಾಲ್ಮಾತಿಯಾ ಕ್ಲಬ್ ತಂಡ 14 ಓವರ್ ಗಳಲ್ಲಿ ಕೇವಲ 88ರನ್ ಗಳಿಗೆ ಆಲೌಟ್ ಆಗಿತ್ತು. ಎದುರಾಳಿ ತಂಡ ಆಕ್ಸಿಯಾಮ್ ಕ್ರಿಕೆಟರ್ಸ್ ವಿಕೆಟ್ ನಷ್ಟವಿಲ್ಲದೆ ಕೇವಲ 4 ಎಸೆತಗಳಲ್ಲಿ 92ರನ್ ಗಳಿಸಿ ವಿಜಯೋತ್ಸವ ಆಚರಿಸಿದೆ.

Bangladeshi bowler concedes 92 runs off just 4 balls!

ಲಾಲ್ಮಾತಿಯಾ ಕ್ಲಬಿನ ಓಪನಿಂಗ್ ಬೌಲರ್ ಸುಜೋನ್ ಮಹಮ್ಮದ್ ಅವರು ತಮ್ಮ ಓವರ್ ನಲ್ಲಿ 13 ವೈಡ್ ಗಳು ಹಾಗೂ ಮೂರು ನೋಬಾಲ್ ಎಸೆದರು. ಎಲ್ಲವೂ ಬೌಂಡೈ ಸೇರಿದ್ದರಿಂದ ಸ್ಕೋರ್ 80ಕ್ಕೇರಿತ್ತು.

ಆಕ್ಸಿಯಾಮ್ ಓಪನರ್ ಮುಷ್ತಫಿಜುರ್ ರಹ್ಮಾನ್ ಅವರು 3 ಬೌಂಡರಿ ಸಹಿತ ತಂಡಕ್ಕೆ 10 ವಿಕೆಟ್ ಗಳ ಜಯ ತಂದಿತ್ತಿದ್ದಾರೆ. ಸಿಟಿ ಕ್ಲಬ್ ಮೈದಾನದಲ್ಲಿ ಜಯಭೇರಿ ಬಾರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Bangladeshi cricket team conceded 92 runs in just four balls to deliberately lose a match in what they called a protest over biased umpiring in their league
Please Wait while comments are loading...