ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್: ಮೂರನೇ ದಿನ ವಿಜಯ್ 150, ರಹಾನೆ 98

By Mahesh

ಫಾತುಲ್ಲಾ (ಬಾಂಗ್ಲಾದೇಶ), ಜೂ.12: ಬಾಂಗ್ಲಾದೇಶ ವಿರುದ್ದದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಮೂರನೇ ದಿನ ಭಾರತ ಚಹಾ ವಿರಾಮದ ವೇಳೆಗೆ 103.3 ಓವರ್ ಗಳಲ್ಲಿ 462/6 ಸ್ಕೋರ್ ಮಾಡಿದೆ. ದಿನದ ಅಂತ್ಯಕ್ಕೆ ಆರ್ ಅಶ್ವಿನ್ 2 ಹಾಗೂ ಹರ್ಭಜನ್ ಸಿಂಗ್ 7 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಮೂರನೇ ದಿನದಂದು ಮುರಳಿ ವಿಜಯ್ ಭರ್ಜರಿ ಶತಕ 150 ರನ್ (272 ಎಸೆತ, 12x4, 1x6) ದಾಖಲಿಸಿದರೆ, ಶಿಖರ್ ಧವನ್, ರೋಹಿತ್ ಶರ್ಮ ಹಾಗೂ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಗಳು ಬೇಗನೇ ಉದುರಿಬಿತ್ತು.

One-off Test: India lose 2 wickets after Vijay's ton


74 ಓವರ್ ಗಳಲ್ಲಿ ಭಾರತ 300 ರನ್ ಗಡಿ ದಾಟಿತು. ಅಜಿಂಕ್ಯ ರಹಾನೆ ಅಮೋಘ ಅರ್ಧ ಶತಕ ದಾಖಲಿಸಿ, ಶತಕ ಗಳಿಸುವ ಹೊಸ್ತಿಲಲ್ಲಿ ಎಡವಿ 98 ರನ್ನಿಗೆ ವಿಕೆಟ್ ಒಪ್ಪಿಸಿದರು. ರಹಾನೆ 98 ರನ್ (103 ಎಸೆತ, 14x4), ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 6 ರನ್ ಗಳಿಸಿ ಜುಬೈರ್ ಗೆ ಬೋಲ್ಡ್ ಆದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 4 ವಿಕೆಟ್ ಹಾಗೂ ಜುಬೈರ್ ಹುಸೇನ್ 2 ವಿಕೆಟ್ ಪಡೆದರು.

ಖಾನ್ ಶಾಹೆಬ್ ಒಸ್ಮನ್ ಅಲಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಎರಡನೇ ದಿನದ ಅಂತ್ಯಕ್ಕೆ ಭಾರತ 56 ಓವರ್ ಗಳಲ್ಲಿ 239/0 ಸ್ಕೋರ್ ಮಾಡಿದೆ. ಮುರಳಿ ವಿಜಯ್ 89 ರನ್ ಹಾಗೂ ಶಿಖರ್ ಧವನ್ 150 ರನ್ ಗಳಿಸಿ ಔಟಾಗದೆ ಉಳಿದಿದ್ದರು.

| ಚಿತ್ರಗಳು | ಪಂದ್ಯದ 1ನೇ ದಿನದ ವರದಿ

ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಾಭ ಪಡೆದ ಶಿಖರ್ ಧವನ್ ಆಕರ್ಷಕ ಶತಕ ದಾಖಲಿಸಿ 173 ರನ್ (195 ಎ, 23X4) ಗಳಿಸಿ ಔಟಾದರು.

Rahane


ರೋಹಿತ್ ಶರ್ಮ 6 ರನ್ ಗಳಿಸಿ ಶಕೀಬ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿ ಔಟಾದರೆ, ನಾಯಕ ಕೊಹ್ಲಿ 14 ರನ್ ಗಳಿಸಿ ಜುಬೈರ್ ಎಸೆತದಲ್ಲಿ ಇನ್ ಸೈಡ್ ಎಡ್ಜ್ ಮಾಡಿಕೊಂಡು ಬೋಲ್ಡ್ ಆದರು.ಮುರಳಿ ವಿಜಯ್ ಅವರು ತಮ್ಮ ವೃತ್ತಿ ಬದುಕಿನ 6ನೇ ಶತಕ ದಾಖಲಿಸಿ ಆಡುತ್ತಿದ್ದಾರೆ.

ಶುಕ್ರವಾರ ನಿಗದಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ದಿನದ ಆಟ ಆರಂಭಗೊಂಡಿತು ಮೂರನೇ ದಿನದ ಮೊದಲ ಅವಧಿಯಲ್ಲಿ ಬಿದ್ದ ಎರಡು ವಿಕೆಟ್ ಗಳು ಶಕೀಬ್ ಅಲ್ ಹಸನ್ ಪಾಲಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X