ಸೆಮಿಫೈನಲ್ ಗೂ ಮುನ್ನ ಭಾರತಕ್ಕೆ ಅವಮಾನ ಮಾಡಿದ ಬಾಂಗ್ಲಾ

Posted By:
Subscribe to Oneindia Kannada

ಲಂಡನ್, ಜೂನ್ 14: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜೂನ್ 14ರಂದು ಬಾಂಗ್ಲಾ ಮತ್ತು ಭಾರತ ಮುಖಾಮುಖಿಯಾಗಲಿವೆ.

ಇದಕ್ಕೂ ಮುನ್ನ ಬಾಂಗ್ಲಾದ ಕೆಲ ಕ್ರಿಕೆಟ್ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂಥ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು

ಹುಲಿಗೆ ಬಾಂಗ್ಲಾದೇಶದ ಬಾವುಟ ಹೊದಿಸಿ, ನಾಯಿಯೊಂದಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಹೊಂದಿಸಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ

ಬಾಂಗ್ಲಾ ಹುಲಿಗಳ ಕೈಯಲ್ಲಿ ಭಾರತಕ್ಕೆ ಸೋಲು, ಅದ್ಭುತ ಮ್ಯಾಚಿನ ನಿರೀಕ್ಷೆಯಿದೆ ಎಂದು ಬಾಂಗ್ಲಾದೇಶದ ಅಭಿಮಾನಿಯೊಬ್ಬ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾನೆ.

ಭಾರತ ವಿರುದ್ಧ ಬಾಂಗ್ಲಾದೇಶದ ಕುಹಕಿಗಳು ಈ ಸಾಮಾಜಕ ಜಾಲ ತಾಣಗಳಲ್ಲಿ ಕೆಟ್ಟ ಪೋಸ್ಟ್ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015ರಲ್ಲಿ ಬಾಂಗ್ಲಾ ಜತೆ ದ್ವಿ ಪಕ್ಷೀಯ ಸರಣಿ, ಏಷ್ಯಾಕಪ್ ಫೈನಲ್ ಸಂದರ್ಭದಲ್ಲೂ ಇಂಥ ಕೆಟ್ಟ ಮನಃಸ್ಥಿತಿಯ ಪೋಸ್ಟ್ ಗಳು ಕಾಣಿಸಿಕೊಂಡಿದ್ದವು.

ಫೋಟೋಶಾಪ್ ಮಾಡಿದ ಚಿತ್ರ

ಫೋಟೋಶಾಪ್ ಮಾಡಿದ ಚಿತ್ರ

ಫೋಟೋಶಾಪ್ ಬಳಸಿ ವಿರೂಪಗೊಳಿಸಿದ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಾಗುತ್ತಿವೆ. ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ಚಿತ್ರಕ್ಕೆ ಒಳ್ಳೆ ಗ್ರೇಟ್ ಮ್ಯಾಚ್ ನಿರೀಕ್ಷೆಯಿದೆ ಎಂದು ಹಾಕಲಾಗಿದೆ.

ಏಷ್ಯಾಕಪ್ ಫೈನಲ್

ಏಷ್ಯಾಕಪ್ ಫೈನಲ್

2016ರ ಏಷ್ಯಾಕಪ್ ಫೈನಲ್ ಗೂ ಮುನ್ನ ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈಯಲ್ಲಿ ಅಂದಿನ ನಾಯಕ ಎಂಎಸ್ ಧೋನಿ ರುಂಡವನ್ನು ಹಿಡಿದಂತೆ ಚಿತ್ರಿಸಲಾಗಿತ್ತು. ಈ ಗ್ರಾಫಿಕ್ ಇಮೇಜ್ ಸಾಮಾಜಿಕ ತಾಣಗಳಲ್ಲೂ ಓಡಾಡಿತ್ತು. ನಂತರ ಬಾಂಗ್ಲಾ ಸೋಲಿನ ನಂತರ ಇದಕ್ಕೆ ವಿರುದ್ಧವಾದ ಚಿತ್ರಗಳು ಹರಿದಾಡತೊಡಗಿತು.

ಅರ್ಧ ತಲೆ ಬೋಳಿಸಿದ ಚಿತ್ರ

ಅರ್ಧ ತಲೆ ಬೋಳಿಸಿದ ಚಿತ್ರ

ಬಾಂಗ್ಲಾದೇಶದ ಪ್ರತಿಕೆಯೊಂದು ಎಂಎಸ್ ಧೋನಿ ಹಾಗೂ ಟೀಂ ಇಂಡಿಯಾದ ಪ್ರಮುಖ ಆಟಗಾರರ ಅರ್ಧ ತಲೆ ಬೋಳಿಸಿದ ಚಿತ್ರವನ್ನು ಹಾಕಿ ವಿವಾದ ಎಬ್ಬಿಸಿತ್ತು. ಮುಸ್ತಫಿಜುರ್ ಅವರು 3 ಪಂದ್ಯಗಳಿಂದ 13 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನಲುಬು ಮುರಿದಿದ್ದರು. ಇದನ್ನು ಬಳಸಿಕೊಂಡು ಜಾಹೀರಾತು ವಿನ್ಯಾಸಗೊಳಿಸುವ ಪತ್ರಿಕೆ ಮುಸ್ತಫಿಜುರ್ ಕೈಲಿ ಕಟರ್ ನೀಡಿದ ಚಿತ್ರವಿತ್ತು.

ಸಚಿನ್ ಅಭಿಮಾನಿ ಮೇಲೂ ಹಲ್ಲೆ

ಸಚಿನ್ ಅಭಿಮಾನಿ ಮೇಲೂ ಹಲ್ಲೆ

ಬಾಂಗ್ಲಾದಲ್ಲಿ ಭಾರತ ಸರಣಿ ಸೋತಾಗ ಬ್ಯಾಟಿಂಗ್ ದಿಗ್ಗಜ ಸಚಿನ್ ಅಭಿಮಾಣಿ ಸುಧೀರ್ ಗೌತಮ್ ಮೇಲೆ ಬಾಂಗ್ಲಾದೇಶದಲ್ಲಿ ಹಲ್ಲೆಯಾಗಿತ್ತು. ಸ್ಟೇಡಿಯಂ ಬಿಟ್ಟು ಹೊರ ನಡೆಯುತ್ತಿದ್ದಂತೆ ಅವರ ಮೇಲೆ ಬಾಂಗ್ಲಾದ ಕಿಡಿಗೇಡಿ ಅಭಿಮಾನಿಗಳು ದಾಳಿ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahead of the India-Bangladesh clash in the semi-finals of the ongoing Champions Trophy an over enthusiastic Bangladeshi fan has insulted the Indian National Flag on social media.
Please Wait while comments are loading...