ಬಾಂಗ್ಲಾಕ್ಕೆ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಗೆಲುವಿನ ಸಂಭ್ರಮ

Posted By:
Subscribe to Oneindia Kannada

ಮೀರ್ಪುರ, ಅಕ್ಟೋಬರ್ 31: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗೆಲುವಿನ ರುಚಿ ಕಂಡ ಬಾಂಗ್ಲಾದೇಶ ತಂಡ ಭರ್ಜರಿಯಾಗಿ ಸಂಭ್ರಮಿಸಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 108 ರನ್‌ಗಳ ಜಯ ಗಳಿಸಿ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

2000ರಲ್ಲಿ ಟೆಸ್ಟ್ ಸ್ಥಾನಮಾನ ಪಡೆದು 95 ಪಂದ್ಯಗಳ ಬಳಿಕ ಬಾಂಗ್ಲಾದೇಶ ತಂಡ ಇಂಥದ್ದೊಂದು ಗೆಲುವನ್ನು ಸಾಧಿಸಿದೆ. 2015ರಲ್ಲಿ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿದಾಗ ಕಂಡ ಸಂಭ್ರಮಾಚರಣೆ ಮತ್ತೆ ಮರುಕಳಿಸಿತು.

Bangladesh celebrates after historic Test win against England

ಷೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 273 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ 45.3 ಓವರ್‌ಗಳಲ್ಲಿ 164 ಸ್ಕೋರಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿದೆ.

ಎರಡನೆ ಇನಿಂಗ್ಸ್‌ನಲ್ಲಿ 273 ರನ್‌ಗಳ ಸವಾಲು ಪಡೆದ ಇಂಗ್ಲೆಂಡ್‌ ತಂಡ ಸುಲಭವಾಗಿ ಜಯ ಗಳಿಸುವ ನಿರೀಕ್ಷೆಯಿತ್ತು. ಆದರೆ, ಬಾಂಗ್ಲಾದ ಮೆಹೆದಿ ಹಸನ್ ಮಿರಝ್(77ಕ್ಕೆ6), ಶಾಕಿಬ್ ಅಲ್ ಹಸನ್(49ಕ್ಕೆ4) ಇಂಗ್ಲೆಂಡ್ ತಂಡದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು.


ಇಂಗ್ಲೆಂಡಿನ ಪರ ನಾಯಕ ಅಲೆಸ್ಟೈರ್ ಕುಕ್ (59) ಮತ್ತು ಡಕೆಟ್(56) ಮೊದಲ ವಿಕೆಟ್‌ಗೆ 23.1 ಓವರ್‌ಗಳಲ್ಲಿ 100 ರನ್‌ಗಳ ಜೊತೆಯಾಟ ಸಾಧಿಸಿದರು. ಅದರೆ, ಡಕೆಟ್ ಔಟಾಗುತ್ತಿದ್ದಂತೆ ಇಂಗ್ಲೆಂಡಿನ ಕುಸಿತ ಆರಂಭವಾಯಿತು.

ರೂಟ್(1), ಬ್ಯಾಲೆನ್ಸ್(5) ಎಂ.ಎಂ.ಅಲಿ (0) ನಂತರ ನಾಯಕ್ ಕುಕ್ ಕೂಡಾ ವಿಕೆಟ್ ಒಪ್ಪಿಸಿದರು. ನಂತರ ಪೆವಿಲಿಯನ್ ಪರೇಡ್ ನಡೆದು ಇಂಗ್ಲೆಂಡ್ ಸೋಲಿನ ಹಾದಿ ಹಿಡಿಯಿತು.


19 ಹರೆಯದ ಬಾಂಗ್ಲಾದ ಆಲ್‌ರೌಂಡರ್ ಮೆಹೆದಿ ಹಸನ್ ಮಿರಾಝ್ 12 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಪಂದ್ಯದಲ್ಲಿ 7 ವಿಕೆಟ್ ಪಡೆದಿದ್ದರು. ಎರಡು ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದು ವಿಶೇಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands of people took to the streets in cities across Bangladesh as the perennial under-achievers beat England by 108 runs on Sunday (October 30) to post one of their most momentous cricketing victories.
Please Wait while comments are loading...