ವಿಶ್ವ ಟಿ20 ಸಮರಕ್ಕೆ ಸಿದ್ಧವಾದ 'ಬಾಂಗ್ಲಾ ಹುಲಿ'ಗಳು

Posted By:
Subscribe to Oneindia Kannada

ಢಾಕಾ, ಫೆ. 04: ಭಾರತದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಗಾಗಿ 15 ಸದಸ್ಯರ ಸಶಕ್ತ ಬಾಂಗ್ಲಾದೇಶ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಬುಧವಾರ ಪ್ರಕಟಿಸಿದೆ.

[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

ಬ್ಯಾಟ್ಸ್‌ಮನ್ ಮುಹಮ್ಮದ್ ಮಿಥುನ್ ಹಾಗೂ ಆಲ್‌ರೌಂಡರ್ ನಾಸಿರ್ ಹುಸೇನ್‌ ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಬು ಹೈದರ್ ರೋನಿ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನೂರುಲ್ ಹಸನ್ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.[ವಿಶ್ವ ಟಿ20: ಕಿವೀಸ್ ತಂಡಕ್ಕೆ ವಿಲಿಯಮ್ಸನ್ ಕ್ಯಾಪ್ಟನ್]

Bangladesh announce 'strong' 15-member squad for World T20

ತಂಡಕ್ಕೆ ಮರಳಿರುವ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಮಿಥುನ್ ಅವರು 2014ರಲ್ಲಿ ವಿಂಡೀಸ್‌ನ ವಿರುದ್ಧ ಕೊನೆಯ ಟ್ವೆಂಟಿ-20 ಪಂದ್ಯ ಆಡಿದ್ದರು. ನಾಸಿರ್ ಕಳೆದ ತಿಂಗಳು ನಡೆದ ಜಿಂಬಾಬ್ವೆ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದರು.[ಅಮಾನತಾಗಿರುವ ಸುನಿಲ್ ಗೆ ವಿಂಡೀಸ್ ತಂಡದಲ್ಲಿ ಸ್ಥಾನ!]

ಬಾಂಗ್ಲಾದೇಶ ತಂಡ: ಮಶ್ರಾಫ್ ಬಿನ್ ಮುರ್ತಝಾ (ನಾಯಕ), ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಹಮ್ಮದ್ ಮಿಥುನ್, ಮಹಮುದುಲ್ಲಾ, ಮುಶ್ಫಿಕುರ್ ರಹೀಂ, ಶಬ್ಬೀರ್ ರೆಹ್ಮಾನ್, ನಾಸಿರ್ ಹುಸೇನ್, ನೂರುಲ್ ಹಸನ್, ಅರಾಫತ್ ಸನ್ನಿ, ಮುಸ್ತಾಫಿಝುರ್ ರೆಹ್ಮಾನ್, ಅಲ್-ಅಮಿನ್ ಹುಸೇನ್, ತಸ್ಕಿನ್ ಅಹ್ಮದ್ ಹಾಗೂ ಅಬೂ ಹೈದರ್ ರೋನಿ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladesh have drafted young pacer Abu Haider Rony and wicketkeeper-batsman Nurul Hasan to their squad for the World Twenty20.
Please Wait while comments are loading...