ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 01: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತದ ಏಕೈಕ ಟೆಸ್ಟ್ ಪಂದ್ಯ ಫೆಬ್ರವರಿ 9ರಂದು ನಡೆಯಲಿದೆ. ಫೆ.2 ರಿಂದ ಫೆ 14ರ ತನಕ ಬಾಂಗ್ಲಾದೇಶ ತಂಡ ಭಾರತದಲ್ಲಿರಲಿದೆ. ಈ ಪಂದ್ಯಕ್ಕೆ ಬಾಂಗ್ಲಾದೇಶ ತಂಡ ಪ್ರಕಟಿಸಲಾಗಿದೆ.

ಭಾರತ ಎ ತಂಡದ ಜತೆಗೆ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಬಾಂಗ್ಲಾದೇಶ ಆಡಲಿದೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಷ್ಫಿಕರ್ ರಹೀಮ್ ಅವರು ಬಾಂಗ್ಲಾದೇಶವನ್ನು ಮುನ್ನಡೆಸಲಿದ್ದಾರೆ. ಟೀಂ ಇಂಡಿಯಾ ಹಾಗೂ ಭಾರತ ಎ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. [ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟ, ಪಾರ್ಥೀವ್ ಪಟೇಲ್ ಔಟ್]

Bangladesh announce 15-man squad for one-off India Test in Hyderabad

ನೆರೆ ರಾಷ್ಟ್ರ ಬಾಂಗ್ಲಾದೇಶದ ಕ್ರಿಕೆಟ್ ತಂಡ ಇಲ್ಲಿ ತನಕ ನಾಲ್ಕು ಬಾರಿ ಭಾರತ ಪ್ರವಾಸ ಕೈಗೊಂಡಿದೆ. 1990,1998,2006 ಹಾಗೂ 2016 ಆದರೆ, ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಲು ಭಾರತಕ್ಕೆ ಆಗಮಿಸಲಿದೆ.

ತಂಡ: ಮುಷ್ಪಿಕರ್ ರಹೀಮ್ (ನಾಯಕ ಹಾಗೂ ವಿಕೆಟ್ ಕೀಪರ್), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮಹ್ಮುದುಲ್ಲಾ, ಶಕೀಬ್ ಅಲ್ ಹಸನ್, ಮೆಹೆದಿ ಹಸನ್ ಮಿರಾಜ್ಜ್, ಇಮ್ರುಲ್ ಕೇಯಸ್, ಮೊಮಿನುಲ್ ಹಕ್, ಶಬ್ಬಿರ್ ರಹ್ಮನ್, ಲಿಟನ್ ದಾಸ್ (ವಿಕೆಟ್ ಕೀಪರ್), ತಸ್ಕಿನ್ ಅಹ್ಮದ್, ಶುವಶಿಶ್ ರಾಯ್, ತೈಜುಲ್ ಇಸ್ಲಾಮ್, ಕಮ್ರುಲ್ ಇಸ್ಲಾಮ್ ರಬ್ಬಿ, ಶಾಫಿಯುಲ್ ಇಸ್ಲಾಮ್(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladesh today (February 1) announced a 15-man squad to face India in a one-off Test this month in Hyderabad. Young left-arm paceman Mustafizur Rahman was dropped.
Please Wait while comments are loading...