ಅಜರ್ ಮೆಹಮೂದ್ ಪಾಕ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್

Written By: Ramesh
Subscribe to Oneindia Kannada

ಲಾಹೋರ್, ನವೆಂಬರ್. 02: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆಟಗಾರ ಅಜರ್ ಮೆಹಮೂದ್ ಅವರು ಬುಧವಾರ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷ ಅವಧಿಗೆ ಮಾತ್ರ ಇವರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲ ಪಾಕ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಮುಸ್ತಾಕ್ ಮೊಹಮ್ಮದ್ ಅವರ ಸ್ಥಾನಕ್ಕೆ ಅಜರ್ ಮೆಹಮೂದ್ ಅವರನ್ನು ಎರಡು ವರ್ಷಗಳ ಅವಧಿಗೆ ಮಾತ್ರ ಆಯ್ಕೆ ಮಾಡಲಾಗಿದೆ. ನವೆಂಬರ್ 4 ರಿಂದ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ತಂಡದ ಪರ ಅಜರ್ ಕಾರ್ಯ ಆರಂಭಿಸಲಿದ್ದಾರೆ.

Azhar Mahmood named Pakistan's bowling coach

1996 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ 41 ವರ್ಷದ ಅಜರ್ ಅವರು ಇಂಗ್ಲೆಂಡ್, ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಮೈದಾನಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೆಚ್ಷಾಗಿ ಟಿ20 ಸ್ಪೆಷಾಲಿಸ್ಟ್ ಆಗಿದ್ದ ಅಜರ್ 2007 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

ಅಜರ್ ಅವರ ಬೌಲಿಂಗ್, ಬ್ಯಾಟಿಂಗ್, ಆಲ್ ರೌಂಡರ್ ಅನುಭವವನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಲಾಭ ಪಡೆದುಕೊಳ್ಳಲಿದೆ. ಕಿವೀಸ್ ವಿರುದ್ಧ ಪಾಕಿಸ್ತಾನ ಕ್ರಿಸ್ಟ್ ಚಚ್F ಹಾಗೂ ಹೆಮಿಲ್ಟನ್ ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Pakistan all-rounder Azhar Mahmood was on Wednesday (November 2) appointed the national cricket team's bowling coach for two years.
Please Wait while comments are loading...