ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಡೇವಿಡ್ ಹಸ್ಸಿ

Posted By:
Subscribe to Oneindia Kannada

ಮೆಲ್ಬೋರ್ನ್, ಜನವರಿ 26: ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ಹಸ್ಸಿ ಅವರು ಬುಧವಾರ(ಜನವರಿ 25)ದಂದು ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ನ ಸೆಮಿಫೈನಲ್ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡ ಸೋಲು ಅನುಭವಿಸಿದ ಬಳಿಕ ಈ ನಿರ್ಣಯ ಕೈಗೊಂಡಿದ್ದಾರೆ.

39 ವರ್ಷ ವಯಸ್ಸಿನ ಡೇವಿಡ್ ಹಸ್ಸಿ ಅವರು ಬಿಬಿಎಲ್ ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದು, ಪರ್ತ್ ಸ್ಕಾಚರ್ಸ್ ವಿರುದ್ಧದ ಸೋಲಿನ ನಂತರ ಟ್ವೀಟ್ ಮಾಡಿ ತಮ್ಮ ನಿರ್ಣಯ ಪ್ರಕಟಿಸಿದ್ದಾರೆ. ಇದು ಸ್ವಲ್ಪ ಭಾವನಾತ್ಮಕ ಸಂದರ್ಭ, ನೋಡೋಣ ಮುಂದೇನಾಗುತ್ತದೆಯೋ ಎಂದು ಹೇಳಿದ್ದಾರೆ.

Australian batsman David Hussey announces retirement


ಬಿಬಿಎಲ್ ಸ್ಟಾರ್: 2011ರಿಂದ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡುತ್ತಿರುವ ಡೇವಿಡ್ ಹಸ್ಸಿ ಅವರು 48 ಪಂದ್ಯಗಳಿಂದ 26.71 ರನ್ ಸರಾಸರಿಯಲ್ಲಿ 855ರನ್ ಗಳಿಸಿದ್ದಾರೆ. ಆರು ಸೀಸನ್ ಗಳಲ್ಲೂ ಆಡಿದ್ದಾರೆ.

ಬ್ಯಾಟ್ಸ್ ಮನ್, ಆಫ್ ಸ್ಪಿನ್ನರ್ ಹಾಗೂ ಉತ್ತಮ ಫೀಲ್ಡರ್ ಆಗಿ 267ಕ್ಕೂ ಅಧಿಕ ಟ್ವೆಂಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

103 ಅಂತಾರಾಷ್ಟ್ರೀಯ ಪಂದ್ಯ(69 ಒಡಿಐ ಹಾಗೂ 39 ಟಿ20) ಗಳನ್ನಾಡಿ 17 ಅರ್ಧಶತಕ ಹಾಗೂ ಒಂದು ಶತಕ ಗಳಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ 52.50 ರನ್ ಸರಾಸರಿಯಂತೆ 45 ಶತಕ ಹಾಗೂ 275 ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ್ದರೂ ಆಸ್ಟ್ರೇಲಿಯಾದ ಟೆಸ್ಟ್ ತಂಡ ಸೇರಲು ಆಗಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australia batsman David Hussey announced his retirement from cricket on Wednesday (January 25) following Melbourne Stars defeat in the Big Bash League (BBL) semi-final.
Please Wait while comments are loading...