ಭಾರತ ಕೊಟ್ಟ ಆಘಾತದಿಂದ ಚೇತರಿಸಿಕೊಳ್ಳದ ಆಸ್ಟ್ರೇಲಿಯಾ

Posted By:
Subscribe to Oneindia Kannada

ಆಕ್ಲೆಂಡ್, ಫೆ. 03: ಪ್ರವಾಸಿ ಭಾರತ ತಂಡದ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದ ಸೋಲಿನ ಆಘಾತದಿಂದ ಆಸ್ಟ್ರೇಲಿಯಾ ಇನ್ನೂ ಹೊರ ಬಂದಿಲ್ಲ. ಸಾಂಪ್ರದಾಯಿಕ ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಬುಧವಾರ (ಫೆ. 03) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.

[ಪಂದ್ಯ ಸ್ಕೋರ್ ಕಾರ್ಡ್ ನೋಡಿ]
ನ್ಯೂಜಿಲೆಂಡ್ ತಂಡ ಒಡ್ಡಿದ್ದ 308ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 25 ಓವರ್ ಮುಗಿಯುವುದರೊಳಗೆ ಪೆವಿಲಿಯನ್ ಪೆರೇಡ್ ಮುಕ್ತಾಯಗೊಳಿಸಿದೆ. 148 ಸ್ಕೋರಿಗೆ ಆಲೌಟ್ ಆದ ಸ್ಮಿತ್ ಪಡೆ 159ರನ್ ಅಂತರದ ಭಾರಿ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಉತ್ತಮ ಆರಂಭ ಒದಗಿಸಿದರು. [ಆಸೀಸ್ -ಕಿವೀಸ್ ವೇಳಾಪಟ್ಟಿ ನೋಡಿ]

90ರನ್ ಗಳಿಸಿದ ಗಪ್ಟಿಲ್ ಗೆ ಹೆನ್ರಿ ನಿಕೊಲಸ್ 61 ಹಾಗೂ ಬ್ರೆಂಡನ್ ಮೆಕಲಮ್ 44 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. 30 ಓವರ್ ಗಳಲ್ಲಿ 200ರನ್ ಗಡಿ ದಾಟಿದ್ದ ನ್ಯೂಜಿಲೆಂಡ್ ಸ್ಲಾಗ್ ಓವರ್ ಗಳಲ್ಲಿ ರನ್ ವೇಗ ಕುಂಠಿತಗೊಂಡಿತು. [ವಿಶ್ವ ಟಿ20: ಕಿವೀಸ್ ತಂಡಕ್ಕೆ ವಿಲಿಯಮ್ಸನ್ ಕ್ಯಾಪ್ಟನ್]

ಈಡೆನ್ ಪಾರ್ಕ್ ಮೈದಾನದಲ್ಲಿ ಕಿವೀಸ್ ತಂಡವನ್ನು 307/8 ಸ್ಕೋರಿಗೆ ನಿಯಂತ್ರಿಸಿದ್ದೇ ಆಸೀಸ್ ವೇಗಿಗಳ ಸಾಧನೆ ಎನ್ನಬಹುದು.ಆಸ್ಟ್ರೇಲಿಯಾ ಬ್ಯಾಟಿಂಗ್ ಕುಸಿತದ ವಿವರ ಹಾಗೂ ಪಿಟಿಐಯಿಂದ ಪಡೆದ ಪಂದ್ಯದ ಚಿತ್ರಗಳನ್ನು ನೋಡಿ ಮುಂದೆ ಓದಿ...

ಬೌಲ್ಟ್ ಹಾಗೂ ಹೆನ್ರಿ ದಾಳಿಗೆ ಆಸೀಸ್ ತತ್ತರ

ಬೌಲ್ಟ್ ಹಾಗೂ ಹೆನ್ರಿ ದಾಳಿಗೆ ಆಸೀಸ್ ತತ್ತರ

ಬೌಲ್ಟ್ ಹಾಗೂ ಹೆನ್ರಿ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 9 ಓವರ್ ಗಳಲ್ಲಿ 41/6 ಸ್ಕೋರ್ ಮಾಡಿ ಸಂಕಷ್ಟಕ್ಕೆ ಈಡಾಯಿತು. ನಂತರ ಚೇತರಿಕೆ ಕಾಣದೆ 24.2 ಓವರ್ ಗಳಲ್ಲಿ 148 ಸ್ಕೋರಿಗೆ ಆಲೌಟ್ ಆಯಿತು. ಬೌಲ್ಟ್ 7 ಓವರ್ ಗಳಲ್ಲಿ 38/3, ಹೆನ್ರಿ 6 ಓವರ್ ಗಳಲ್ಲಿ 41/3 ಪಡೆದು ಆಸೀಸ್ ಗೆ ಆಘಾತ ಮೂಡಿಸಿದರು.

ಮಾರ್ಟಿನ್ ಗಪ್ಟಿಲ್ ಅದ್ಭುತ ಬ್ಯಾಟಿಂಗ್

ಮಾರ್ಟಿನ್ ಗಪ್ಟಿಲ್ ಅದ್ಭುತ ಬ್ಯಾಟಿಂಗ್

ಮಾರ್ಟಿನ್ ಗಪ್ಟಿಲ್ 90ರನ್ (76ಎಸೆತ, 8X4, 5X6), ಮೆಕಲಮ್ 44ರನ್ (29 ಎಸೆತ, 5x4,3x6), ನಿಕೋಲಸ್ 61ರನ್ ಗಳಿಸಿ ತಂಡದ ಮೊತ್ತವನ್ನು 50 ಓವರ್ ಗಳಲ್ಲಿ 307/8 ಮಾಡಿದರು. ಆಸೀಸ್ ಪರ ಫಾಲ್ಕ್ನರ್ 67/2 ಹಾಗೂ ಹೇಜಲ್ ವುಡ್ 68/2 ವಿಕೆಟ್ ಪಡೆದರು, ಹೇಸ್ಟಿಂಗ್ಸ್ 10 ಓವರ್ ಗಳಲ್ಲಿ 39/1 ಪಡೆದು ಮಿತವ್ಯಯಿ ಎನಿಸಿದರು.

ರನ್ ಚೇಸ್ ನಲ್ಲಿ ಆಸ್ಟ್ರೇಲಿಯಾ ಕುಸಿತ

ರನ್ ಚೇಸ್ ನಲ್ಲಿ ಆಸ್ಟ್ರೇಲಿಯಾ ಕುಸಿತ

ಆರಂಭಿಕ ಆಟಗಾರರಾದ ಮಾರ್ಷ್ 5ರನ್ ಹಾಗೂ ವಾರ್ನರ್ 12ರನ್ ಗಳಿಸಿ ಔಟಾದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್ 18, ಬೈಲಿ 2, ಮ್ಯಾಕ್ಸ್ ವೆಲ್ ಹಾಗೂ ಎಂ ಮಾರ್ಷ್ ಸೊನ್ನೆ ಗಳಿಸಿದರು 41/6ಸ್ಕೋರ್ ಆಗಿದ್ದಾಗ ಪಂದ್ಯ ನ್ಯೂಜಿಲೆಂಡ್ ಕಡೆಗೆ ವಾಲಿತು.

ಕೊನೆ ಗಳಿಗೆಯಲ್ಲಿ ಆಸೀಸ್ ಹೋರಾಟ ವ್ಯರ್ಥ

ಕೊನೆ ಗಳಿಗೆಯಲ್ಲಿ ಆಸೀಸ್ ಹೋರಾಟ ವ್ಯರ್ಥ

ಕೊನೆ ಗಳಿಗೆಯಲ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ 37ರನ್, ಜೇಮ್ಸ್ ಪಾಲ್ಕ್ನರ್ 36 ರನ್, ಕೇನ್ ರಿಚರ್ಡ್ಸನ್ 19ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಪರಿಸ್ಥಿತಿ ಕೈ ಮೀರಿತ್ತು. ಸ್ನಾತ್ನರ್ ತಮ್ಮ ಬೌಲಿಂಗ್ ನ ಮೊದಲೆರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಆಸೀಸ್ ಇನ್ನಿಂಗ್ಸ್ ಗೆ ಮುಕ್ತಾಯ ಹಾಡಿದರು.

ಸಾಂಪ್ರದಾಯಿಕ ವೈರಿಗಳ ಐದು ಏಕದಿನ ಪಂದ್ಯ

ಸಾಂಪ್ರದಾಯಿಕ ವೈರಿಗಳ ಐದು ಏಕದಿನ ಪಂದ್ಯ

ಸಾಂಪ್ರದಾಯಿಕ ವೈರಿಗಳ ಐದು ಏಕದಿನ ಪಂದ್ಯಗಳ ಸರಣಿ ಫೆಬ್ರವರಿ 03ರಂದು ಆಕ್ಲೆಂಡ್ ನಲ್ಲಿ ಆರಂಭವಾಗಿದೆ. ಫೆ. 6, ಫೆ. 8, ಫೆ. 12 ಹಾಗೂ ಫೆ. 20ರಂದು ಉಳಿದ ಪಂದ್ಯಗಳು ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After a 3-0 whitewash against India in the T20 series, Australia lost the first ODI against New Zealand by a whopping margin of 159 runs.
Please Wait while comments are loading...