ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವುದೇ?

Posted By:
Subscribe to Oneindia Kannada

ಸಿಡ್ನಿ, ಜ. 24: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸದಾವಕಾಶ ಸಿಕ್ಕಿದೆ. ಆಸೀಸ್ ವಿರುದ್ಧ ಮೂರು ಟಿ20 ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಬೇಕಿದೆ. ಧೋನಿ ನೇತೃತ್ವದ ತಂಡ ಕ್ಲೀನ್ ಸ್ವೀಪ್ ಮಾಡಿ, ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳಬೇಕಿದೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಏಕದಿನ ಸರಣಿಯನ್ನು 1-4 ಅಂತರದಿಂದ ಸೋತಿದೆ. ಈಗ ಜನವರಿ 26ರಿಂದ ಆರಂಭವಾಗಲಿರುವ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆದ್ದರೆ ಅಗ್ರಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಕೆಳಗಿಳಿಸಬಹುದು. ಅಲ್ಲದೆ, ಆಸ್ಟ್ರೇಲಿಯಾ ತಂಡವನ್ನು ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ದೂಡಬಹುದಾಗಿದೆ. [ದಯವಿಟ್ಟು ಮಾಸ್ಟರ್ ಬ್ಲಾಸ್ಟರ್ ಗೆ ಹೋಲಿಸಬೇಡಿ: ಕೊಹ್ಲಿ]

Australia tour: Chance for India to become No. 1 in T20Is

ವೆಸ್ಟ್ ಇಂಡೀಸ್ ತಂಡ ಸದ್ಯ 118 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಫಲಿತಾಂಶ ಬಂದರೆ ವೆಸ್ಟ್ ಇಂಡೀಸ್ ಸ್ಥಾನಕ್ಕೆ ಕುತ್ತುಂಟಾಗಲಿದೆ. ಒಂದು ವೇಳೆ ಆಸ್ಟ್ರೇಲಿಯಾ ತಂಡ 3-0 ಅಂತರದ ಗೆಲುವು ದಾಖಲಿಸಿದರೆ ಟೀಂ ಇಂಡಿಯಾ 8ನೇ ಸ್ಥಾನಕ್ಕೆ ಕುಸಿಯಲಿದೆ. [ಕಾಂಗರೂಗಳನ್ನು ಸೋಲಿಸಲು ಲಕ್ಷ್ಮಣ್ ಡ್ರೀಂ ಟೀಮ್]

ಒಂದು ವೇಳೆ ಭಾರತ ಸರಣಿಯನ್ನು 2-1 ರಿಂದ ಗೆದ್ದಲ್ಲಿ ಆಸ್ಟ್ರೇಲಿಯಾ 6ನೇ ಸ್ಥಾನಕ್ಕೆ ಜಾರಲಿದ್ದರೆ, ಭಾರತ 7ನೇ ಸ್ಥಾನ ಪಡೆಯಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ 2-1 ರಿಂದ ಸರಣಿ ಗೆದ್ದಲ್ಲಿ ಅಗ್ರಸ್ಥಾನ ಪಡೆಯಲಿದೆ. ಭಾರತ ಯಾವುದೇ ಅಂತರದಿಂದ ಸೋತರೂ 8ನೇ ಸ್ಥಾನದಲ್ಲೇ ಉಳಿಯಲಿದೆ.

ಜನವರಿ 23, 2016ರ ಅನ್ವಯ ಐಸಿಸಿ ಟಿ20ಐ ಶ್ರೇಯಾಂಕ ಪಟ್ಟಿ:
1. ವೆಸ್ಟ್ ಇಂಡೀಸ್ (118 ಅಂಕಗಳು)
2. ಆಸ್ಟ್ರೇಲಿಯಾ (118)
3. ಶ್ರೀಲಂಕಾ (118)
4. ಇಂಗ್ಲೆಂಡ್ (117)
5. ನ್ಯೂಜಿಲೆಂಡ್ (116)
6. ದಕ್ಷಿಣ ಆಫ್ರಿಕಾ (115)
7. ಪಾಕಿಸ್ತಾನ (113)
8. ಭಾರತ (110)
9. ಆಫ್ಘಾನಿಸ್ತಾನ (80)
10. ಸ್ಕಾಟ್ಲೆಂಡ್(66)
11. ಬಾಂಗ್ಲಾದೇಶ (64)
12. ಹಾಂಗ್ ಕಾಂಗ್ (61)
13. ನೆದರ್ಲೆಂಡ್ (61)
14. ಜಿಂಬಾಬ್ವೆ (54)
15. ಐರ್ಲೆಂಡ್ (42)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India can return to the top of the Twenty20 Internationals' rankings in the ICC table if they make a clean sweep of the three-match series against Australia starting in Adelaide on January 26 (Tuesday).
Please Wait while comments are loading...