ಆಸ್ಟ್ರೇಲಿಯಾ ತಂಡಕ್ಕೆ ಮರಳಿದ ವೇಗಿ ಮಿಚೆಲ್ ಸ್ಟಾರ್ಕ್

Posted By:
Subscribe to Oneindia Kannada

ಸಿಡ್ನಿ, ಮೇ 24 : ಗಾಯಾಳುವಾಗಿ ಐಪಿಎಲ್ 9ರಿಂದ ಹೊರಗುಳಿದಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಆಸ್ಟ್ರೇಲಿಯಾದ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಲ್ ರೌಂಡರ್ ಮೊಸೆಸ್ ಹೆನ್ರಿಕ್ಯೂಸ್ ಅವರು ಮಂಗಳವಾರ ಅಚ್ಚರಿಯೆಂಬಂತೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮುಂಬರುವ ಶ್ರೀಲಂಕಾ ಸರಣಿಗೆ ಗಾಯಾಳು ಜೇಮ್ಸ್ ಪ್ಯಾಟಿಸನ್ ಪರಿಗಣಿಸಿಲ್ಲ, ಸ್ಟೀಫನ್ ಓ ಕೀಫೆ ಎರಡನೇ ಸ್ಪಿನ್ನರ್ ಆಗಿ ತಂಡ ಸೇರಿದ್ದಾರೆ. ಐದು ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಪ್ರವಾಸ ಕೈಗೊಳ್ಳುತ್ತಿದ್ದು, ಐದು ಏಕದಿನ ಕ್ರಿಕೆಟ್ ಪಂದ್ಯ, 2 ಟಿ20ಐ ಪಂದ್ಯಗಳನ್ನಾಡಲಿದೆ. [ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಎಸೆತ ಹಾಕಿದ ಮಿಚೆಲ್ ಸ್ಟಾರ್ಕ್]

Australia Test squad named for Sri Lanka tour; Mitchell Starc returns


ಜುಲೈ 26ರಂದು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ನಡೆಯಲಿದ್ದು, ಕ್ಯಾಂಡಿ, ಗಾಲೆ, ಕೊಲಂಬೋದಲ್ಲಿ ಪಂದ್ಯ ನಡೆಯಲಿದೆ. ಲಿಯಾನ್ ಹಾಗೂ ಖವಾಜ ಇಬ್ಬರಿಗೆ ಮಾತ್ರ ಶ್ರೀಲಂಕಾದಲ್ಲಿ ಐದು ದಿನಗಳ ಪಂದ್ಯವಾಡಿದ ಅನುಭವವಿದೆ. 2011ರಲ್ಲಿ ಮೈಕಲ್ ಕ್ಲಾರ್ಕ್ ಪಡೆ 1-0 ಅಂತರದ ಜಯ ದಾಖಲಿಸಿತ್ತು. [ಆರ್ ಸಿಬಿಗೆ ಮಿಚಲ್ ಸ್ಟಾರ್ಕ್ ಬದಲಿಗೆ ಕ್ರಿಸ್ ಜೋರ್ಡನ್!]

ಶ್ರೀಲಂಕಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ : ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜಾಕ್ಸನ್ ಬರ್ಡ್, ಜೋ ಬರ್ನ್ಸ್, ನಾಥನ್ ಕೌಲ್ಟರ್ ನೈಲ್, ಜೋಶ್ ಹೇಜಲ್ ವುಡ್, ಮೋಯಿಸ್ ಹೆನ್ರಿಕ್Yಊಸ್, ಉಸ್ಮಾನ್ ಖವಾಜ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಪೀಟರ್ ನೆವಿಲ್, ಸ್ಟೀಫನ್ ಓ ಕೀಫೆ, ಮಿಚೆಲ್ ಸ್ಟಾರ್ಕ್, ಆಡಂ ವೋಗಸ್ (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All-rounder Moises Henriques earned a surprise recall Tuesday (May 24) to Australia's Test squad for Sri Lanka after James Pattinson was ruled out injured, with Stephen O'Keefe included as a second spinner.
Please Wait while comments are loading...