ಗಾಯಾಳು ಶಮಿ ಹೊರಕ್ಕೆ, ಭುವನೇಶ್ವರ ಕುಮಾರ್ ಒಳಕ್ಕೆ

Subscribe to Oneindia Kannada

ಪರ್ತ್, ಜನವರಿ, 09: ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದಿದ್ದಾರೆ ಶಮಿ ಬದಲು ಉತ್ತರ ಪ್ರದೇಶದ ವೇಗಿ ಭುವನೇಶ್ವರ ಕುಮಾರ್ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಶುಕ್ರವಾರ ಪಶ್ಚಿಮ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಟಿ20 ಅಭ್ಯಾಸದ ವೇಳೆ ಗಾಯಗೊಂಡಿದ್ದ ಶಮಿ ಬೌಲಿಂಗ್ ಮಾಡಿರಲಿಲ್ಲ. ಶಮಿ ಗಾಯ ಸ್ವಲ್ಪ ಮಟ್ಟಿಗೆ ಗಂಭೀರವಾಗಿದ್ದು, ಕನಿಷ್ಟ 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿದೆ.[ಟೀಂ ಇಂಡಿಯಾ ಸೇರಿರುವ ಹೊಸ ವೇಗಿ ಬರೀಂದರ್]

cricket

ಗಾಯದ ಸಮಸ್ಯೆಯಿಂದಾಗಿ ಮೊಹಮದ್ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಲಾಗಿದೆ ಎಂದು ಶನಿವಾರ ಬಿಸಿಸಿಐ ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ.[ಭಾರತ ತಂಡದಲ್ಲಿ ಯಾರ್ಯಾರಿದ್ದಾರೆ?]

2015ರ ವಿಶ್ವಕಪ್ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಶಮಿ, ಮಾರ್ಚ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುದೀರ್ಘ ವಿಶ್ರಾಂತಿಯ ಬಳಿಕ ಡಿಸೆಂಬರ್​ನಲ್ಲಿ ವಿಜಯ್ ಹಜಾರೆ ದೇಶೀಯ ಏಕದಿನ ಟೂರ್ನಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂದಿರುಗಿದ್ದರು. ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pacer Mohammed Shami was today ruled out of India's limited-overs cricket series against Australia due to a hamstring injury and Bhuvneshwar Kumar will replace him for the ODIs and Twenty20s starting here on January 12.
Please Wait while comments are loading...