ವಿಶ್ವ ಟಿ20 ಬಳಿಕ ಕ್ರಿಕೆಟ್ಟಿಗೆ ಶೇನ್ ವಾಟ್ಸನ್ ವಿದಾಯ

Posted By:
Subscribe to Oneindia Kannada

ಮೊಹಾಲಿ, ಮಾರ್ಚ್ 24: ಆಸ್ಟ್ರೇಲಿಯಾ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ. ಆದರೆ, ದೇಶಿ ಟ್ವೆಂಟಿ20 ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದಾಗಿ ಘೋಷಿಸಿದ್ದಾರೆ.


ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಡ್ರಾಪ್ ಆದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಆಸೆಯನ್ನು ವಾಟ್ಸನ್ ಕೈಬಿಟ್ಟಿದ್ದರು. ಆದರೆ, ಬಿಗ್ ಬಾಷ್ ಲೀಗ್ ನಲ್ಲಿ ವಾಟ್ಸನ್ ಆಟ ಮುಂದುವರೆಸಿದ್ದರು. [ಟೆಸ್ಟ್ ಕ್ರಿಕೆಟ್ ಗೆ ಆಲ್ ರೌಂಡರ್ ಶೇನ್ ವಾಟ್ಸನ್ ಗುಡ್ ಬೈ]

Australia's Shane Watson to retire after World T20

34 ವರ್ಷ ವಯಸ್ಸಿನ ವಾಟ್ಸನ್ ಅವರು ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. ಐಪಿಎಲ್ 2016ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಹಾಗೂ ಬಿಗ್ ಬಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.

2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಬಲಗೈ ಬ್ಯಾಟ್ಸ್ ಮನ್ ಕಮ್ ಮಧ್ಯಮ ವೇಗಿ ಶೇನ್ ವಾಟ್ಸನ್ ಅವರು ಆಸ್ಟ್ರೇಲಿಯಾ ಪರ 59 ಟೆಸ್ಟ್‌ ಆಡಿ 35.19ರ ಸರಾಸರಿಯಲ್ಲಿ 3731 ರನ್‌ ಗಳಿಸಿದ್ದರು. ಅಲ್ಲದೇ 75 ವಿಕೆಟ್‌ ಉರುಳಿಸಿದ್ದಾರೆ. ಸೆಪ್ಟೆಂಬರ್ 6, 2015ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು. 190 ಏಕದಿನ ಕ್ರಿಕೆಟ್ ಹಾಗೂ 56 ಟಿ20ಐ ಪಂದ್ಯಗಳನ್ನಾಡಿದ್ದಾರೆ.

ವೃತ್ತಿಯ ಮುಖ್ಯಾಂಶಗಳು:
#ಆಸ್ಟ್ರೇಲಿಯಾದ 44ನೇ ನಾಯಕ
# ಎರಡು ಬಾರಿ ಅಲಾನ್ ಬಾರ್ಡರ್ ಪದಕ ಗೆದ್ದಿದ್ದಾರೆ
# ಮೂರು ವಿಶ್ವ ಕಪ್ ಆಡಿದ್ದು, 2007 ಹಾಗೂ 2015ರಲ್ಲಿ ಗೆಲುವು ದಾಖಲಿಸಿದ್ದಾರೆ.
# ಎಲ್ಲಾ 6 ವಿಶ್ವ ಟಿ20 ಆಡಿರುವ ಶೇನ್ ವಾಟ್ಸನ್ 2012ರಲ್ಲಿ ಟೂರ್ನಮೆಂಟ್ ನ ಆಟಗಾರ ಎನಿಸಿಕೊಂಡಿದ್ದರು.
# 17 ಬಾರಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ನಾಲ್ಕು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian all-rounder Shane Watson today announced that he will retire from international cricket after the ongoing ICC World Twenty20 tournament. However, he will continue to play in domestic Twenty20s including the Indian Premier League (IPL).
Please Wait while comments are loading...