ಪಂದ್ಯದ ವೇಳೆ ಆಸ್ಟ್ರೇಲಿಯಾದ ಕ್ರಿಕೆಟರ್ ತಲೆಗೆ ಪೆಟ್ಟು

Posted By:
Subscribe to Oneindia Kannada

ಸಿಡ್ನಿ, ನವೆಂಬರ್ 17: ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಆಡಂ ವೋಜಸ್ ಅವರು ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ವಾಕಾ ಮೈದಾನದಲ್ಲಿ ನಡೆದಿದೆ.

ಶೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಬೌನ್ಸರ್ ಎದುರಿಸುತ್ತಿದ್ದ ಆಡಂ ಅವರ ತಲೆಗೆ ಚೆಂಡು ಬಲವಾಗಿ ಬಡಿದಿದೆ. ತಕ್ಷಣವೇ ಕುಸಿದು ಬಿದ್ದ ವೋಜಸ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಸ್ಮೇನಿಯಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

Australia's Adam Voges suffers head injury by bouncer to helmet

ಇಎಸ್ ಪಿನ್ ಕ್ರಿಕ್ ಇನ್ಫೋ ವರದಿ ಪ್ರಕಾರ 16 ರನ್ ಗಳಿಸಿ ಆಡುತ್ತಿದ್ದ ವೋಜಸ್ ಅವರು ವೇಗಿ ಕ್ಯಾಮರೂನ್ ಸ್ಟೆವನ್ಸನ್ ಅವರ ಬೌನ್ಸರ್ ಎದುರಿಸಲು ಹೋದಾಗ ಚೆಂಡು ಹೆಲ್ಮಟ್ ಗೆ ಬಡಿದಿದೆ. ಪಶ್ಚಿಮ ಆಸ್ಟ್ರೇಲಿಯಾ ತಂಡದ ನಾಯಕರೂ ಆಗಿರುವ ವೋಜಸ್ ಅವರಿಗೆ ಮೈದಾನದಲ್ಲೇ ತಕ್ಷಣಕ್ಕೆ ಚಿಕಿತ್ಸೆ ನೀಡಲಾಗಿದೆ ನಂತರ ಡ್ರೆಸ್ಸಿಂಗ್ ರೂಮ್ ಗೆ ಕರೆದೊಯ್ಯಲಾಗಿದೆ. ಆಮೇಲೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಆಡಂ ವೋಜಸ್ ಅವರು ಆಸ್ಟ್ರೇಲಿಯಾ ಪರ 20 ಟೆಸ್ಟ್, 31 ಏಕದಿನ ಪಂದ್ಯ ಹಾಗೂ 7 ಟಿ20 ಪಂದ್ಯಗಳನ್ನು ಆಡಿಗ್ಗು, ಟೆಸ್ಟ್ ನಲ್ಲಿ 61.87 ದಾಖಲೆ ರನ್ ಸರಾಸರಿ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಟೆಸ್ಟ್ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ತಲೆಗೆ ಚೆಂಡು ಬಡಿದು ನವೆಂಬರ್ 27, 2014 ಮೃತಪಟ್ಟ ಘಟನೆ ಕ್ರಿಕೆಟ್ ಪ್ರೇಮಿಗಳು ಮರೆಯುವಂತಿಲ್ಲ. ಆದರೆ, ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದರೂ ಈ ರೀತಿ ಘಟನೆಗಳು ಮರುಕಳಿಸುತ್ತಲೇ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia batsman Adam Voges on Thursday (Nov 17) suffered an injury in his head after being hit by a bouncer in Sheffield Shield match at the WACA.
Please Wait while comments are loading...