ಆ್ಯಷಸ್‌ : ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ

Posted By:
Subscribe to Oneindia Kannada
2ನೇ ಟೆಸ್ಟ್ ಮ್ಯಾಚ್ -2017 ಆಶಸ್ ಸೀರೀಸ್ ನ ಸಾರಾಂಶ | Oneindia Kannada

ಅಡಿಲೇಡ್, ಡಿಸೆಂಬರ್ 06: ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ತಂಡವು 120 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

353 ರನ್‌ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಕುಕ್‌ ವಿಫಲರಾದರು. 16 ರನ್‌ ಗಳಿಸಿ ಔಟಾದರೆ, ಸ್ಟೋನ್‌ಮನ್‌ 36 ರನ್‌ ಗಳಿಸಿದರು. ನಂತರ ನಾಯಕ ಜೋ ರೂಟ್‌ (67) ಕೊಂಚ ಪ್ರತಿರೋಧ ತೋರಿದರು. ಅಂತಿಮವಾಗಿ ಇಂಗ್ಲೆಂಡ್ 233 ಸ್ಕೋರಿಗೆ ಸರ್ವಪತನ ಕಂಡಿತು. ಮಿಚೆಲ್ ಸ್ಟಾಕ್ 5, ಹೇಜಲ್ ವುಡ್ ಹಾಗೂ ನಾಥನ್ ಲಿಯಾನ್ ತಲಾ 2 ವಿಕೆಟ್ ಪಡೆದರು.

Ashes, 2nd Test: Australia rip through England to win Adelaide Test

ಸ್ಕೋರ್ ಕಾರ್ಡ್

ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 442/8 ರನ್‌ ಗಳಿಸಿತ್ತು. ಶಾನ್‌ ಮಾರ್ಷ್‌ ಅಜೇಯ ಶತಕ (125) ಹಾಗೂ ಉಸ್ಮಾನ್‌ ಖವಾಜ (53), ಟಿಮ್‌ ಪೈನ್‌ (57) ಅರ್ಧ ಶತಕ ಗಳಿಸಿ ಬೃಹತ್‌ ಮೊತ್ತ ಪೇರಿಸಿದ್ದರು.

ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 227 ರನ್‌ಗಳಿಗೆ ಆಲೌಟ್‌ ಆಗಿತ್ತು. ಕ್ರೆಗ್ ಓವರ್ಟನ್ ಅಜೇಯ 41ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು. ಆಸೀಸ್‌ ಪರ ನಾಥನ್‌ ಲಿಯಾನ್‌ 4 ವಿಕೆಟ್‌, ಸ್ಟಾರ್ಕ್‌ 3 ವಿಕೆಟ್‌ ಪಡೆದು ಮಿಂಚಿದ್ದರು.

215 ರನ್‌ಗಳ ಬೃಹತ್‌ ಮುನ್ನಡೆ ಪಡೆದ ಆಸೀಸ್‌ ಎರಡನೇ ಇನ್ನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡು 58 ಓವರ್ ಗಳಲ್ಲಿ ಕೇವಲ 138 ರನ್‌ಗಳಿಗೆ ಆಲೌಟ್‌ ಆಯಿತು. ವೇಗಿ ಆಂಡರ್ಸನ್ 5 ವಿಕೆಟ್‌ ಹಾಗೂ ಕ್ರಿಸ್‌ ವೋಕ್ಸ್‌ 4 ವಿಕೆಟ್‌ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.

ಆಸೀಸ್‌ ಬ್ಯಾಟ್ಸ್ ಮನ್‌ ಪೈಕಿ ಒಬ್ಬರು ಕೂಡಾ 20 ರನ್ ಗಡಿ ದಾಟಲಾಗಲಿಲ್ಲ. ಆದರೆ, ಬೌಲರ್ ಗಳು ತೋರಿದ ಪ್ರದರ್ಶನವನ್ನು ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳು ತೋರಲಾಗದೆ ತಂಡ ಸೋಲು ಕಂಡಿತು. ಮೂರನೇ ಪಂದ್ಯ ಡಿಸೆಂಬರ್‌ 14 ರಿಂದ ಪರ್ತ್‌ನಲ್ಲಿ ನಡೆಯಲಿದ್ದು, ಈ ಪಂದ್ಯ ಇಂಗ್ಲೆಂಡ್‌ ಪಾಲಿಗೆ ನಿರ್ಣಾಯಕವೆನಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia wrapped up a 120-run win over England in the second Ashes Test after needing less than two hours on Wednesday to take six wickets in Adelaide.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ