ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾದಿಂದ ವಿಶ್ವ ದಾಖಲೆ

Posted By:
Subscribe to Oneindia Kannada

ಕ್ಯಾನ್ ಬೆರಾ, ಜ. 20: ಪ್ರವಾಸಿ ಭಾರತದ ವಿರುದ್ಧದ ಸತತ ನಾಲ್ಕು ಗೆಲುವು ಸಾಧಿಸಿದ ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಬುಧವಾರ (ಜನವರಿ 20) ಹೊಸ ವಿಶ್ವ ದಾಖಲೆ ಬರೆದಿದೆ. ಮನುಕಾ ಓವಲ್ ಮೈದಾನದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ತಂಡ 25ರನ್ ಗಳಿಂದ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಬಹುಕಾಲದಿಂದ ಉಳಿಸಿಕೊಂಡಿದ್ದ ದಾಖಲೆಯನ್ನು ಆಸ್ಟ್ರೇಲಿಯಾ ಅಳಿಸಿ ಹಾಕಿದೆ. ವೆಸ್ಟ್ ಇಂಡೀಸ್ ತಂಡ ತನ್ನ ನೆಲದಲ್ಲಿ ಸತತ 18 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಸ್ಥಾಪಿಸಿತ್ತು. [ಕ್ಯಾನ್ ಬೆರಾ ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ]

Australia defeat India in Canberra ODI to set world record

ಕ್ಯಾನ್ ಬೆರಾದಲ್ಲಿ ಧೋನಿ ನೇತೃತ್ವದ ಭಾರತ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತನ್ನ ನೆಲದಲ್ಲಿ ಸತತ 19 ಗೆಲುವು ದಾಖಲಿಸಿ ಹೊಸ ವಿಶ್ವದಾಖಲೆ ಬರೆದಿದೆ. ನವೆಂಬರ್ 19, 2014 ರಿಂದ ಜನವರಿ 20, 2016 ರ ತನಕ ಆಸ್ಟ್ರೇಲಿಯಾ ಸೋಲಿನ ಕಹಿ ಉಂಡಿಲ್ಲ. [ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]

ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಐಸಿಸಿ ವಿಶ್ವಕಪ್ 2015 ಗೆದ್ದುಕೊಂಡ ಬಳಿಕ ಶುರುವಾದ ಗೆಲುವಿನ ಅಭಿಯಾನ ಇಲ್ಲಿ ತನಕ ಮುಂದುವರೆದಿದೆ. ಕ್ಯಾನ್ ಬೆರಾದಲ್ಲಿ ಅರೋನ್ ಫಿಂಚ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ 348/8 ಸ್ಕೋರ್ ಮಾಡಿತು. ಭಾರತದ ಪರ ಶಿಖರ್ ಧವನ್ 126ರನ್ ಹಾಗೂ ವಿರಾಟ್ ಕೊಹ್ಲಿ 106 ಗಳಿಸಿದರು. 277/1 ಸ್ಕೋರ್ ಮಾಡಿದ್ದ ಭಾರತ ಕೊನೆಗೆ 323 ಸ್ಕೋರಿಗೆ ಆಲೌಟ್ ಆಯಿತು.

ತವರು ನೆಲದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳು
* 19- ಆಸ್ಟ್ರೇಲಿಯಾ (ನವೆಂಬರ್ 19, 2014 ರಿಂದ ಜನವರಿ 20, 2016)
* 17- ಶ್ರೀಲಂಕಾ (ಫೆಬ್ರವರಿ 21, 1996 ರಿಂದ ಜನವರಿ 26, 1998)
* 16- ದಕ್ಷಿಣ ಆಫ್ರಿಕಾ (ಫೆಬ್ರವರಿ 2, 2005 ರಿಂದ ಮಾರ್ಚ್ 3, 2006)
* 14-ದಕ್ಷಿಣ ಆಫ್ರಿಕಾ (ಜನವರಿ 13, 1996 ರಿಂದ ಮಾರ್ಚ್ 29, 1997)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Steve Smith captained Australia today (January 20) defeated India by 25 runs in the 4th One Day International to set a world record.
Please Wait while comments are loading...