ನಾಲ್ಕು ದಿನಗಳ ಪಂದ್ಯ, ಆಸೀಸ್ ವಿರುದ್ಧ ಭಾರತಕ್ಕೆ ಸೋಲು

Posted By:
Subscribe to Oneindia Kannada

ಬ್ರಿಸ್ಬೇನ್, ಸೆ. 12: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ ಭಾರತ ಎ ತಂಡಕ್ಕೆ ನಿರಾಶೆಯಾಗಿದೆ. ಭಾರತದ ಕೈಯಿಂದ ಗೆಲುವನ್ನು ಆಸ್ಟ್ರೇಲಿಯಾ ಎ ತಂಡ ಕಸಿದುಕೊಂಡಿದೆ. ಎಬಿ ಫೀಲ್ಡ್ ನಲ್ಲಿ ನಡೆದ ಪಂದ್ಯದ ಕೊನೆ ದಿನದಲ್ಲಿ ಆಸೀಸ್ ತಂಡ 3 ವಿಕೆಟ್‌ಗಳಿಂದ ಜಯ ದಾಖಲಿಸಿದೆ.

ನಮನ್ ಓಜಾ ನೇತೃತ್ವದ ತಂಡ ನೀಡಿದ್ದ 159 ರನ್ ಸವಾಲನ್ನು ಆಸೀಸ್ ಚೇಸ್ ಮಾಡಿತು. ಕ್ಯಾಮರೋನ್ ಬ್ಯಾನ್‌ಕ್ರಾಫ ಅಜೇಯ 58 ಅರ್ಧಶತಕದ ನೆರವಿನಿಂದ 7ವಿಕೆಟ್‌ಗೆ 161ರನ್ ಗಳಿಸಿ ಗೆಲುವು ಸಾಧಿಸಿತು.

Australia A beat India A in the 1st four-day game

ಜೇಕಬ್ ವೆಬ್‌ಸ್ಟರ್(30) 5ನೇ ವಿಕೆಟ್‌ಗೆ ಬ್ಯಾನ್‌ಕ್ರಾಫ ಜತೆ ಅಮೂಲ್ಯ 57 ರನ್ ಜತೆಯಾಟವಾಡಿದ್ದು ನಿರ್ಣಾಯಕವಾಯಿತು. ಭಾರತದ ಪರ ವೇಗಿ ಶಾರ್ದೂಲ್ ಠಾಕೂರ್(42ಕ್ಕೆ3) ಹಾಗೂ ಮತ್ತು ವರುಣ್ ಆರೊನ್(52ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಅಂತಿಮ ದಿನ ವಿಫಲರಾದರು.

ಭಾರತ ಎ: 230 ಮತ್ತು 156, ಆಸ್ಟ್ರೇಲಿಯಾ ಎ: 228ಮತ್ತು 57.3 ಓವರ್‌ಗಳಲ್ಲಿ 7ವಿಕೆಟ್‌ಗೆ 161(ಬ್ಯಾನ್‌ಕ್ರಾಫ 58, ವೆಬ್‌ಸ್ಟರ್ 30, ಹ್ಯಾಂಡ್ಸ್‌ಕೊಂಬ್ 24, ಶಾರ್ದೂಲ್ 42ಕ್ಕೆ3, ವರುಣ್ 52ಕ್ಕೆ 2, ಹಾರ್ದಿಕ್ ಪಾಂಡ್ಯ 30ಕ್ಕೆ 1, ಜಯಂತ್ ಯಾದವ್ 19ಕ್ಕೆ 1).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian bowlers' efforts at making a match of it went in vain as Australia A pulled off a three-wicket win in a tight chase on the fourth and final day of the first four-day Quadrangular A series game at the AB Field here.
Please Wait while comments are loading...