ಸ್ಫೋಟಕ ಬ್ಯಾಟ್ಸ್ ಮನ್ ವಾರ್ನರ್ ಅವರ ಮುದ್ದಾದ ಕೂಸು ನೋಡಿ

Posted By:
Subscribe to Oneindia Kannada

ಸಿಡ್ನಿ, ಜ.14: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರು ಸಾಮಾಜಿಕ ಜಾಲ ತಾಣ ಇನ್ಸ್ಟಾಗ್ರಾಮ್ ಮೂಲಕ ತಮ್ಮ ಮುದ್ದಾದ ಕೂಸಿನ ಚಿತ್ರವನ್ನು ಹಾಕಿದ್ದಾರೆ.

ಕ್ಯಾಂಡಿಸ್ ಹಾಗೂ ವಾರ್ನರ್ ದಂಪತಿಯ ಎರಡನೇ ಮಗು ಚಿತ್ರವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಇಂಡಿ ರೇ ಎಂದು ಹೆಸರಿಟ್ಟಿದ್ದಾರೆ. ವಾರ್ನರ್ ಹಾಗೂ ಕ್ಯಾಂಡಿಸ್ ಅವರಿಗೆ 16 ತಿಂಗಳ ಹೆಣ್ಣು ಮಗುವಿದ್ದು ಐವಿ ಮೇ ಎಂದು ಹೆಸರಿಡಲಾಗಿದೆ.

Australia batsman David Warner blessed with a baby girl

ಪ್ರವಾಸಿ ಭಾರತ ವಿರುದ್ಧದ ಎರಡನೇ ಹಾಗೂ ಮೂರನೇ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಅವರು ಅಲಭ್ಯರಾಗಲಿದ್ದು, ನಾಲ್ಕನೇ ಪಂದ್ಯಕ್ಕೆ ತಂಡವನ್ನು ಸೇರಲಿದ್ದಾರೆ.

ಅಲ್ಲಿ ತನಕ ಎಡಗೈ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಬದಲಿಗೆ ಉಸ್ಮಾನ್ ಖ್ವಾಜಾ ಅವರು ಆಡಲಿದ್ದಾರೆ. ಬಿಗ್ ಬ್ಯಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ಸ್ ಪರ ಉಸ್ಮಾನ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dashing Australian opener David Warner today took to instagram to announce the birth of his second child, a daughter with wife Candice.
Please Wait while comments are loading...