ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

Posted By:
Subscribe to Oneindia Kannada

ಮೆಲ್ಬೋರ್ನ್, ಜನವರಿ 15: ಟೀಂ ಇಂಡಿಯಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತನ್ನ ತಂಡವನ್ನು ಭಾನುವಾರ(ಜನವರಿ 15) ಪ್ರಕಟಿಸಿದೆ. ಸ್ಟೀವ್ ಸ್ಮಿತ್ ನಾಯಕರಾಗಿದ್ದರೆ, ಡೇವಿಡ್ ವಾರ್ನರ್ ಉಪನಾಯಕರಾಗಿದ್ದಾರೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ.

2004ರ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಸ್ಪಿನ್ನರ್ ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ರಿಕಿ ಪಾಂಟಿಂಗ್ ಪಡೆಯ ತಂತ್ರಗಾರಿಕೆಯನ್ನು ಸ್ಮಿತ್ ಮುಂದುವರೆಸಲು ಬಯಸಿದ್ದಾರೆ. ಫುಣೆಯಲ್ಲಿ ಫೆಬ್ರವರಿ 23 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವನ್ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. [ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ]

Australia announce 16-man Test squad for India tour; 4 spinners included

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಜನವರಿ 15ರಿಂದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯ ಸರಣಿ ಆಡುತ್ತಿದೆ. ಫೆ.1ರಂದು ಕೊನೆ ಟಿ20 ಪಂದ್ಯದೊಂದಿಗೆ ಇಂಗ್ಲೆಂಡ್ ಸರಣಿ ಮುಕ್ತಾಯವಾಗಲಿದೆ.

ಭಾರತ ಪ್ರವಾಸಕ್ಕೆ ಸ್ಮಿತ್ ಪಡೆ:
* ಸ್ಟೀವ್ ಸ್ಮಿತ್ (ನಾಯಕ)
* ಡೇವಿಡ್ ವಾರ್ನರ್ (ಉಪ ನಾಯಕ)
* ಆಸ್ಟನ್ ಅಗರ್ (ಎಡಗೈ ಸ್ಪಿನ್ನರ್)
* ಜಾಕ್ಸನ್ ಬರ್ಡ್ (ವೇಗಿ)
* ಪೀಟರ್ ಹ್ಯಾಂಡ್ಸ್ ಕೊಂಬ್ (ಬ್ಯಾಟ್ಸ್ ಮನ್/ವಿಕೆಟ್ ಕೀಪರ್)
* ಜೋಶ್ ಹೇಜಲ್ ವುಡ್(ವೇಗಿ)
* ಉಸ್ಮಾನ್ ಖವಾಜ (ಬ್ಯಾಟ್ಸ್ ಮನ್)
* ನಾಥನ್ ಲಿಯಾನ್ (ಆಫ್ ಸ್ಪಿನ್ನರ್)
* ಮಿಚೆಲ್ ಮಾರ್ಷ್ (ಆಲ್ ರೌಂಡರ್)
* ಶಾನ್ ಮಾರ್ಷ್ (ಎಡಗೈ ಬ್ಯಾಟ್ಸ್ ಮನ್)
* ಗ್ಲೆನ್ ಮ್ಯಾಕ್ಸ್ ವೆಲ್ (ಆಲ್ ರೌಂಡರ್)
* ಸ್ಟೀವ್ ಓ ಕೀಫೆ (ಎಡಗೈ ಸ್ಪಿನ್ನರ್)
* ಮ್ಯಾಥ್ಯೂ ರೆನ್ಶಾ (ಎಡಗೈ ಬ್ಯಾಟ್ಸ್ ಮನ್)
* ಮಿಚೆಲ್ ಸ್ಟಾರ್ಕ್ (ವೇಗಿ)
* ಮಿಚೆಲ್ ಸ್ಪೆಪ್ಸನ್ (ಲೆಗ್ ಸ್ಪಿನ್ನರ್)
* ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್)
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australia today (January 15) named 4 spinners in their 16-man Test squad for the tour of India in February and March.
Please Wait while comments are loading...