ಕುಂಬ್ಳೆಗೆ 'ಜಂಬೋ' ಎಂಬ ಅಡ್ಡಹೆಸರು ನೀಡಿದ್ದು ಯಾರು?

Posted By:
Subscribe to Oneindia Kannada

ಬೆಂಗಳೂರು, ಜುಲೈ 05: ಟೀಂ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರು ಸಾರ್ವಜನಿಕರು, ಫ್ಯಾನ್ ಗಳ ಪ್ರಶ್ನೆಗಳಿಗೆ ಉತ್ತರಿಸುವ ವಿನೂತನ ವಿಧಾನ #AskTheCoach ಸಕತ್ ಮಜಾ ಕೊಡುತ್ತಿದೆ. ಟೀಂ ಇಂಡಿಯಾ, ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್, ಜಡೇಜ ಅಲ್ಲದೆ ಕುಂಬ್ಳೆ ಅವರ ವೈಯಕ್ತಿಕ ಆಸಕ್ತಿಗಳ ಬಗ್ಗೆ ಕೂಡಾ ಪ್ರಶ್ನೆಗಳು ಹರಿದು ಬರುತ್ತಿವೆ.

ಮಂಗಳವಾರ (ಜುಲೈ 5) ರಂದು ಸಂಜೆ 4 ಗಂಟೆಯಿಂದ ನಿಮ್ಮ ಪ್ರಶ್ನೆಗಳನ್ನುಟ್ವಿಟ್ಟರ್ ಮೂಲಕ 'ಗೂಗ್ಲಿ' ಬೌಲರ್ ಅನಿಲ್ ಕುಂಬ್ಳೆ ಅವರತ್ತ ಎಸೆಯಬಹುದು. #AskTheCoach ಬಳಸಿ ಟ್ವೀಟ್ ಮಾಡಿ.[ಅನಿಲ್ ಕುಂಬ್ಳೆ = ಶಿಸ್ತು, ಸಂಕಲ್ಪ, ಬದ್ಧತೆ, ಹೋರಾಟ]

#AskTheCoach - Anil Kumble on nickname 'Jumbo' Twitter

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ. ಈ ವೇದಿಕೆ ಮೂಲಕ ಬಂದ ಒಂದು ಕುತೂಹಲದ ಪ್ರಶ್ನೆಗೆ ಕುಂಬ್ಳೆ ನೀಡಿದ ಉತ್ತರ ಇಲ್ಲಿದೆ.

ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಗೆ ಜಂಬೋ ಎಂದು ಎಲ್ಲರೂ ಪ್ರೀತಿಯಿಂದ ಕರೆಯುವುದು ಗೊತ್ತಿರಬಹುದು. ಆದರೆ, ಜಂಬೋ ಎಂದು ಏಕೆ ಕರೆಯಲಾಗುತ್ತದೆ? ಯಾರು ಮೊದಲಿಗೆ ಈ ಹೆಸರು ನೀಡಿದರು. ಏಕೆ ನೀಡಿದರು ಎಂಬ ಕುತೂಹಲವನ್ನು ಕುಂಬ್ಳೆ ಇಂದು ತಣಿಸಿದ್ದಾರೆ.

ಕರ್ನಾಟಕ ಮೂಲದ ಕುಂಬ್ಳೆ ಅವರು ಎಗರಿ ಬೌಲಿಂಗ್ ಶೈಲಿ ಮಾಡುವುದು ಕಾರಣ. ಕರ್ನಾಟಕದ ಆನೆಗಳಿಗೆ ಫೇಮಸ್ ಹೀಗಾಗಿ ಕುಂಬ್ಳೆಗೆ ಈ ಹೆಸರಿಟ್ಟಿರಬಹುದು ಎಂಬ ಸಾಮಾನ್ಯ ಮಾತು ಚಾಲ್ತಿಯಲ್ಲಿದೆ. ಆದರೆ, ಕುಂಬ್ಳೆಗೆ ಈ ಹೆಸರಿಟ್ಟಿದ್ದು ನವಜ್ಯೋತ್ ಸಿಂಗ್ ಸಿಧು ಅಂತೆ. ಅದು ಇರಾನಿ ಟ್ರೋಫಿ ಪಂದ್ಯವೊಂದರಲ್ಲಿ ಎಂದರೆ ನೀವು ನಂಬಲೇ ಬೇಕು. ಈ ಬಗ್ಗೆ ಕುಂಬ್ಳೆ ಉತ್ತರ ಇಲ್ಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
As India gear up for the Test series against the West Indies this month, team's new head coach Anil Kumble faced googly quesions from his fans today (July 5) in a Twitter question and answer session. During the session he revealed how he got nickname 'Jumbo'
Please Wait while comments are loading...