ಟಿ20: ಭಾರತ vs ಪಾಕಿಸ್ತಾನ ಡಬ್ಬಲ್ ಧಮಾಕ

Posted By:
Subscribe to Oneindia Kannada

ಬೆಂಗಳೂರು, ಜ.27: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ಸಮರಕ್ಕೆ ವೇದಿಕೆ ಸಜ್ಜಾಗುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ಎರಡೆರೆಡು ಬಾರಿ ಉಭಯ ದೇಶಗಳು ಮುಖಾಮುಖಿಯಾಗಲಿವೆ. ವಿಶ್ವಟಿ20 ಕಪ್ ಹಾಗೂ ಏಷ್ಯಾಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾದಾಟ ನೋಡುವ ಅವಕಾಶ ಅಭಿಮಾನಿಗಳಿಗೆ ಲಭ್ಯವಾಗಲಿದೆ.

ವಿಶ್ವ ಟಿ20 ಸಂಪೂರ್ಣ ವೇಳಾಪಟ್ಟಿ

ಈ ಬಾರಿಯ ಏಷ್ಯಾಕಪ್ ಕೂಡಾ ಟ್ವೆಂಟಿ20 ಮಾದರಿಯಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಢಾಕಾದಲ್ಲಿ ಫೆಬ್ರವರಿ 27 (ಶನಿವಾರ) ನಡೆಯಲಿದೆ. ಈ ಟೂರ್ನಿಯ ನಂತರ ಐಸಿಸಿ ವಿಶ್ವಟಿ20ಯಲ್ಲಿ ಮಾರ್ಚ್ 19ರಂದು ಸೆಣಸಾಡಲಿವೆ. ಸೂಪರ್ 10 ಸ್ಟೇಜ್ ತನಕ ಎರಡು ತಂಡಗಳು ಬಿ ಗುಂಪಿನಲ್ಲಿರುವುದರಿಂದ ಲೀಗ್ ಹಂತದಲ್ಲಿ ಪರಸ್ಪರ ಕಾದಾಡಬೇಕಿದೆ.

Asia Cup T20 2016: India to face Pakistan on February 27

ಏಷ್ಯಾ ಕಪ್ ಈ ಬಾರಿ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದ್ದು 5 ತಂಡಗಳು ಕಣದಲ್ಲಿವೆ. ಫೆಬ್ರವರಿ 24ರಂದು ಆರಂಭವಾಗುವ ಸರಣಿ ಮಾರ್ಚ್ 6 (ಭಾನುವಾರ) ಕೊನೆಗೊಳ್ಳಲಿದೆ.
ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಆರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡವೊಂದು ಲೀಗ್ ಹಂತದಲ್ಲಿ ಆಡಲಿವೆ. ಅಫ್ಘಾನಿಸ್ತಾನ, ಹಾಂಗ್ ಕಾಂಗ್, ಒಮಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಅರ್ಹತಾ ಸುತ್ತಿನ ನಂತರ ಮುಂದಿನ ಸುತ್ತು ತಲುಪಬಹುದಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಾರ ಏಷ್ಯಾ ಕಪ್ ಮೊದಲ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ ವಿರುದ್ಧ ಭಾರತ ಫೆಬ್ರವರಿ 24ರಂದು ಸೆಣಸಲಿದೆ.

ಎಲ್ಲಾ ಪಂದ್ಯಗಳು ಮೀರ್ ಪುರದ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, 7 PM IST ಗೆ ಆರಂಭವಾಗಲಿದೆ.

ಭಾರತದ ಪಂದ್ಯಗಳು

* ಫೆಬ್ರವರಿ 24 (ಬುಧವಾರ) vs ಬಾಂಗ್ಲಾದೇಶ
* ಫೆಬ್ರವರಿ 27 (ಬುಧವಾರ) vs ಪಾಕಿಸ್ತಾನ
* ಮಾರ್ಚ್ 01 (ಮಂಗಳವಾರ) vs ಶ್ರೀಲಂಕಾ
* ಮಾರ್ಚ್ 03 (ಗುರುವಾರ) vs ಅರ್ಹತಾ ಸುತ್ತಿನ ವಿಜೇತರು

ಸೂಚನೆ: ಬಿಸಿಸಿಐ ವೆಬ್ ಸೈಟ್ ಮಾಹಿತಿಯಂತೆ ವೇಳಾಪಟ್ಟಿ ನೀಡಲಾಗಿದೆ. ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India and Pakistan will face off twice in 2 months in Twenty20 Internationals, first in Asia Cup and next in World T20 2016.
Please Wait while comments are loading...