ಅಂದು ವಿಲನ್ ಆಗಿದ್ದ ಯುವರಾಜ್ ಇಂದು ಹೀರೋ

Subscribe to Oneindia Kannada

ಮಿರ್ಪುರ, ಮಾರ್ಚ್. 02: ಸರಿಯಾಗಿ ಎರಡು ವರ್ಷದ ಹಿಂದೆ ಖಳನಾಯಕನಾಗಿ ಕಂಡಿದ್ದವ, ಇಂದು ಭಾರತಿಯರ ಎದೆಯಲ್ಲಿ ಹೊಸ ಪುಳಕ ಮೂಡಿಸಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಏಪ್ರಿಲ್ 6, 2014 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವ ಕಪ್ ಟಿ-20 ಫೈನಲ್ ನಲ್ಲಿ 21 ಚೆಂಡು ಎದುರಿಸಿ 11 ರನ್ ಗಳಿಸಿದ್ದ ಅದೇ ಯುವರಾಜ್ ಸಿಂಗ್ ಇಂದು ಹೀರೋ ಆಗಿದ್ದಾರೆ. [ಏಷ್ಯಾಕಪ್ 1984-2014 ಗೆದ್ದವರು, ಬಿದ್ದವರು]

"ಸಿಂಗ್ ಇಸ್ ಕಿಂಗ್" ಯುವರಾಜ್ ಸಿಂಗ್ ಮತ್ತೆ ತಮ್ಮ ಹಳೆ ಆಟದ ಶೈಲಿಗೆ ಮರಳಿದ್ದಾರೆ. ಅವರ ಅಪ್ಪಟ ಅಭಿಮಾನಿಗಳಿಗೆ ಹಬ್ಬದ ಸಡಗರ ತಂದರೆ ಇಡೀ ಭಾರತಿಯರಿಗೆ ಇದೊಂದು ಸಂತಸದ ಸಂಗತಿ. ಶ್ರೀಲಂಕಾ ವಿರುದ್ಧ ಸ್ಫೋಟಕ ಆಟವಾಡಿದ ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ಜತೆಗೂಡಿ ಭಾರತವನ್ನು ಏಷ್ಯಾಕಪ್ ಫೈನಲ್ ಗೆ ಏರಿಸಿದರು. ಮುಂಬರುವ ಟಿ-20 ವಿಶ್ವಕಪ್ ಪಂದ್ಯಾವಳಿ ದೃಷ್ಟಿಯಲ್ಲಿ ಭಾರತಕ್ಕೆ ಇದು ಆಶಾದಾಯಕ ಬೆಳವಣಿಗೆಯಾಗಿದೆ.
ಶ್ರೀಲಂಕಾ ವಿರುದ್ಧ ಸೋತಿದ್ದ ಪಂದ್ಯದ ಸ್ಕೋರ್ ಕಾರ್ಡ್

 3 ಸಿಕ್ಸ್ 3 ಬೌಂಡರಿ

3 ಸಿಕ್ಸ್ 3 ಬೌಂಡರಿ

ಬಹು ಮುಖ್ಯ ಘಟ್ಟದಲ್ಲಿ ಬ್ಯಾಟಿಂಗ್ ಗೆ ಇಳಿದ ಯುವರಾಜ್ 18 ಚೆಂಡು ಎದುರಿಸಿ ಗಳಿಸಿದ್ದು 35 ರನ್. ಇದು ಪಂದ್ಯವನ್ನು ಭಾರತದ ಕೈಗೆ ತಂದಿಕೊಟ್ಟಿತು.

 ವಿಶ್ವಾಸ ಮೂಡುತ್ತಿದೆ

ವಿಶ್ವಾಸ ಮೂಡುತ್ತಿದೆ

ಕ್ರೀಸ್ ನಲ್ಲಿ ಕೆಲ ಕಾಲ ನಿಂತ ಮೇಲೆ ಚೆಂಡು ಬ್ಯಾಟಿಗೆ ತಾಗಲು ಆರಂಭಿಸಿತು. ಇದು ನಿಜವಾಗಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಎಡಗೈ ದಾಂಡಿಗ ಪಂದ್ಯದ ನಂತರ ಹೇಳಿದರು.

 ಕೊಹ್ಲಿ, ಧೋನಿ ಶಹಭಾಸ್ ಅಂದ್ರು

ಕೊಹ್ಲಿ, ಧೋನಿ ಶಹಭಾಸ್ ಅಂದ್ರು

ಯುವರಾಜ್ ಜತೆ ಜತೆಯಾಟ ನಿಭಾಯಿಸಿದ ವಿರಾಟ್ ಕೊಹ್ಲಿ ಮತ್ತು ಕೊನೆಯಲ್ಲಿ ಸಿಕ್ಸರ್ ಬಾರಿಸಿದ ನಾಯಕ ಎಂಎಸ್ ಧೋನಿ ಯುವರಾಜ್ ಪ್ರದರ್ಶನವನ್ನು ಕೊಂಡಾಡಿದ್ದಾರೆ.

ಧೋನಿ ಬೈದಿದ್ದ ಯೋಗರಾಜ್ ಸಿಂಗ್

ಧೋನಿ ಬೈದಿದ್ದ ಯೋಗರಾಜ್ ಸಿಂಗ್

ಯುವರಾಜ್ ಅವರನ್ನು ಏಕದಿನ ವಿಶ್ವಕಪ್ ಗೆ ಕಡೆಗಣಿಸಿದ್ದ ವೇಳೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ನಾಯಕ ಎಂಎಸ್ ಧೊನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಎಂಎಸ್ ಧೋನಿ ಭಿಕ್ಷೆ ಬೇಡುವಂತಾಗಲಿ ಎಂದು ಹೇಳಿದ್ದು ಸುದ್ದಿಯಾಗಿತ್ತು.

ಸಾಮಾಜಿಕ ತಾಣದಲ್ಲಿ ಉಘೇ ಉಘೇ

ಯುವರಾಜ್ ಸಿಂಗ್ ಸಿಕ್ಸರಾಗಮನವನ್ನು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nearly two years ago, at the same venue, against the same opponent, Yuvraj Singh struggled with the bat in the ICC World Twenty20 2014 final. But it was time for redemption as the left-hander returned with a bang.
Please Wait while comments are loading...