ಏಷ್ಯಾಕಪ್: ಶ್ರೀಲಂಕಾ ಮಣಿಸಿ, ಫೈನಲಿಗೆ ಲಗ್ಗೆ ಇಟ್ಟ ಭಾರತ

Posted By:
Subscribe to Oneindia Kannada

ಮೀರ್ ಪುರ್ (ಬಾಂಗ್ಲಾದೇಶ), ಮಾ.01: ಶ್ರೀಲಂಕಾ ನೀಡಿದ್ದ 139 ರನ್ ಗಳ ಗುರಿ ಮುಟ್ಟಿದ ಧೋನಿ ಪಡೆ,5 ವಿಕೆಟ್ ಗಳ ಅಂತರದ ಜಯ ದಾಖಲಿಸಿ, ಏಷ್ಯಾಕಪ್ 2016 ರ ಫೈನಲ್ ತಲುಪಿದೆ. ಟೀಂ ಇಂಡಿಯಾ ಇನ್ನು ಮಾರ್ಚ್ 6 ರಂದು ಅಂತಿಮ ಹಣಾಹಣಿಗೆ ಸಿದ್ಧವಾಗಬೇಕಿದೆ.

ಸ್ಕೋರ್ ಕಾರ್ಡ್ ನೋಡಿ

ಶ್ರೀಲಂಕಾ ನೀಡಿದ್ದ 139 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಬಹುಬೇಗ ಪೆವಿಲಿಯನ್ ಸೇರಿಕೊಂಡರು. ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಮತ್ತೊಮ್ಮೆ ಭಾರತದ ಪಾಲಿಗೆ ಆಪತ್ಬಾಂಧವರಾಗಿ ಗೆಲುವಿನ ದಡ ಮುಟ್ಟಿಸಿದ್ದಲ್ಲದೆ, ತಂಡವನ್ನು ಏಷ್ಯಾಕಪ್ ಫೈನಲಿಗೆ ತಲುಪಿಸಿದರು.

ಭಾರತದ ರನ್ ಚೇಸ್: ರಹಾನೆ ಬದಲಿಗೆ ಬಂದ ಧವನ್ 1 ರನ್ ಗಳಿಸಿ ಔಟ್.
* ರೋಹಿತ್ ಶರ್ಮ ಮೂರು ಬೌಂಡರಿ ಜತೆ 15 ರನ್ ಗಳಿಸಿ ಔಟ್
* ಆರಂಭಿಕ ಬ್ಯಾಟ್ಸ್ ಮನ್ ವಿಕೆಟ್ ಕಿತ್ತ ಲಂಕಾದ ವೇಗಿ ಕುಲಶೇಖರ.
* ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 56 ರನ್ (7x4)
* ಸುರೇಶ್ ರೈನಾ 25 ರನ್ ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು.
* ಯುವರಾಜ್ ಸಿಂಗ್ 18 ಎಸೆತಗಳಲ್ಲಿ 35 ರನ್ (3x4,3x6) ಆಕರ್ಷಕ ಆಟ.
* ಶ್ರೀಲಂಕಾ ಪರ ಕುಲಶೇಖರ 2, ಪೆರೆರಾ, ಶನಕ, ಹೆರಾತ್ ತಲಾ 1 ವಿಕೆಟ್ ಪಡೆದರು.

Asia Cup T20: India opt to bowl first against Sri Lanka

ಶ್ರೀಲಂಕಾದ ಇನ್ನಿಂಗ್ಸ್: ಕಪುಗೆಡೆರಾ, ಸಿರಿವರ್ದನೆ ಉತ್ತಮ ಆಟ ಪ್ರದರ್ಶನ.
* ವಿಕೆಟ್ ಕೀಪರ್ ಚಾಂಡಿಮಾಲ್ 4 ರನ್ ಗಳಿಸಿ ನೆಹ್ರಾಗೆ ಬಲಿಯಾದರು.
* ದಿಲ್ಶನ್ 18, ಮ್ಯಾಥ್ಯೂಸ್ 18, ಪೆರೆರಾ 17, ಕುಲಶೇಖರ 13 ರನ್ ಗಳಿಕೆ
* ಕಪುಗೆಡೆರಾ 32 ಎಸೆತಗಳಲ್ಲಿ 30 ರನ್(3x4), ಸಿರಿವರ್ದನೆ 17 ಎಸೆತಗಳಲ್ಲಿ 22 ರನ್.
* 20 ಓವರ್ ಗಳಲ್ಲಿ 9/138 ಸ್ಕೋರ್.
* ಭಾರತದ ಪರ ಬೂಮ್ರಾ, ಪಾಂಡ್ಯ, ಅಶ್ವಿನ್ ತಲಾ 2 ವಿಕೆಟ್, ನೆಹ್ರಾಗೆ 1.

ಭಾರತ ತನ್ನ ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದೆ. ಬಾಂಗ್ಲಾದೇಶ ವಿರುದ್ಧ 45ರನ್ ಗಳ ಅಂತರದ ಜಯ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 5 ವಿಕೆಟ್ ಗಳ ಗೆಲುವು ದಾಖಲಿಸಿದೆ. ಭಾರತ ತನ್ನ ಕೊನೆ ಲೀಗ್ ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಮಾರ್ಚ್ 03(ಗುರುವಾರ) ಆಡಲಿದೆ. ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಸಂಜೆ 7 ಗಂಟೆ ನಂತರ ಪ್ರಸಾರ ಆರಂಭ.

ಏಷ್ಯಾಕಪ್ 2016: ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ

ಯುಎಇ ವಿರುದ್ಧ ಶ್ರೀಲಂಕಾ ತಂಡ 14ರನ್ ಗಳ ಜಯ ದಾಖಲಿಸಿ, ನಂತರ ಬಾಂಗ್ಲಾದೇಶ ವಿರುದ್ಧ 23ರನ್ ಗಳಿಂದ ಸೋಲು ಕಂಡಿದೆ.

ತಂಡದಲ್ಲಿ ಬದಲಾವಣೆ:
ಟೀಂ ಇಂಡೀಯಾದಲ್ಲಿ ಅಜಿಂಕ್ಯ ರಹಾನೆ ಬದಲಿಗೆ ಶಿಖರ್ ಧವನ್ ಬಂದಿದ್ದರೆ, ಶ್ರೀಲಂಕಾದಲ್ಲಿ ಗಾಯಳುವಾಗಿರುವ ವೇಗಿ ಲಸಿತ್ ಮಾಲಿಂಗ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ.

Asia Cup T20: India beat Sri Lanka to enter final

ತಂಡಗಳು: ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್ (ಉಪ ನಾಯಕ), ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್, ನಿರೋಶನ್ ಡಿಕ್ ವಾಲ, ಶೇಹಾನ್ ಜಯಸೂರ್ಯ, ಮಿಲಿಂಡಾ ಸಿರಿವರ್ದೆನ, ದಸುನ್ ಶನಕ, ಚಮರ, ಚಮರ ಕಪುಗೆಡರ, ನುವಾನ್ ಕುಲಶೇಖರ, ದುಶ್ಮಂತಾ ಚಮೀರ, ತಿಸಾರಾ ಪೆರೆರಾ, ಸಚಿತ್ರಾ ಸೇನಾನಾಯಕೆ, ರಂಗನಾ ಹೇರಾತ್, ಜೆಫ್ರಿ ವಂಡೆರ್ಸೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Asia Cup T20: India beat Sri Lanka to enter final: Indian bowlers once again put up an impressive performance by restricting Sri Lanka to a modest 138 for nine in the third round robin encounter of the Asia Cup Twenty20 cricket tournament here tonight.
Please Wait while comments are loading...