ಬಾಂಗ್ಲಾ ಮಣಿಸಿ, 6ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ

Posted By:
Subscribe to Oneindia Kannada

ಮೀರ್ ಪುರ್ (ಬಾಂಗ್ಲಾದೇಶ), ಮಾರ್ಚ್ 06: ಮಳೆಯಿಂದ ಅಡ್ಡಿಯುಂಟಾಗಿ 15 ಓವರ್ ಗಳಿಗೆ ಸೀಮಿತವಾದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಏಷ್ಯಾಕಪ್ ಗೆದ್ದುಕೊಂಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಬಾಂಗ್ಲಾದೇಶಕ್ಕೆ ಅವಕಾಶ ಸಿಕ್ಕಿತು. ಪಂದ್ಯ ಗೆಲ್ಲಲು ಟೀಂ ಇಂಡಿಯಾಕ್ಕೆ 121 ರನ್ ಟಾರ್ಗೆಟ್ ನೀಡಲಾಗಿತ್ತು. ಭಾರತ ಆರಂಭಿಕ ಆಘಾತ ಅನುಭವಿಸಿ, ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡಿತು.

Bumrah

ಆದರೆ, ಶಿಖರ್ ಧವನ್ 60 ರನ್ ಹಾಗೂ ವಿರಾಟ್ ಕೊಹ್ಲಿ 41 ರನ್ ಗಳಿಸಿ ಗೆಲುವಿನೆಡೆಗೆ ತಂಡವನ್ನು ಕೊಂಡೊಯ್ದರು. ಧವನ್ ಔಟಾದ ಬಳಿಕ ಬಂದ ನಾಯಕ ಧೋನಿ 6 ಎಸೆತಗಳಲ್ಲಿ 20 ರನ್ ಚೆಚ್ಚಿ ಪಂದ್ಯವನ್ನು ಜಯದೊಂದಿಗೆ ಮುಗಿಸಿದರು. ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಧೋನಿ ಪಡೆ ವಿಜಯೋತ್ಸವ ಆಚರಿಸಿತು. [ಏಷ್ಯಾಕಪ್ 1984-2014 ಗೆದ್ದವರು, ಬಿದ್ದವರು]

ಲೈವ್ ಸ್ಕೋರ್ ಕಾರ್ಡ್

ಬಾಂಗ್ಲಾ ಇನ್ನಿಂಗ್ಸ್ : ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 15 ಓವರ್ ಗಳಲ್ಲಿ 120/5 ಸ್ಕೋರ್ ಮಾಡಿತು.
* ತಮೀಮ್ ಇಕ್ಬಾಲ್ 13, ಸೌಮ್ಯ ಸರ್ಕಾರ್ 14 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.
* ಸಬೀರ್ ರಹ್ಮಾನ್ 29 ಎಸೆತಗಳಲ್ಲಿ 32 ರನ್, ಶಕೀಲ್ ಅಲ್ ಹಸನ್ 16 ಎಸೆತಗಳಲ್ಲಿ 21 ರನ್ ಗಳಿಸಿ ರನ್ ಗಳಿಕೆ ಹೆಚ್ಚಿಸಿದರು.
* ಕೊನೆಯಲ್ಲಿ ಮೊಹಮುದುಲ್ಲಾ 13 ಎಸೆತಗಳಲ್ಲಿ 33 ರನ್ ಚೆಚ್ಚಿ ಎಲ್ಲರನ್ನು ರಂಜಿಸಿದರು.
* ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಬಿಟ್ಟರೆ ಅಶ್ವಿನ್, ಬೂಮ್ರಾ, ನೆಹ್ರಾ, ಜಡೇಜ ತಲಾ ಒಂದು ವಿಕೆಟ್ ಪಡೆದರು.


ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯವನ್ನು 15 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.

Team India

ತಂಡದಲ್ಲಿ ಬದಲಾವಣೆ: ಟೀಂ ಇಂಡಿಯಾಕ್ಕೆ ಆಶೀಶ್ ನೆಹ್ರಾ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್ ಮರಳಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ ಈ ಮೂವರು ಆಡಿರಲಿಲ್ಲ. ಬಾಂಗ್ಲಾದೇಶ ತಂಡಕ್ಕೆ ಆಲ್ ರೌಂಡರ್ ನಾಸೀರ್ ಹುಸೇನ್, ಎಡಗೈ ವೇಗಿ ಅಬು ಹಿದರ್ ಸೇರ್ಪಡೆಯಾಗಿದ್ದಾರೆ.

ಆಟದ ನಿಯಮ ಬದಲಾವಣೆ:
* ತಲಾ 15 ಓವರ್ ಗಳ ಪಂದ್ಯ
* 5 ಓವರ್ ಗಳ ಪವರ್ ಪ್ಲೇ
* 5 ಬೌಲರ್ ಗಳು ಗರಿಷ್ಠ 3 ಓವರ್ ಎಸೆಯಬಹುದು.
* ಇನ್ನಿಂಗ್ಸ್ ಬ್ರೇಕ್ 10 ನಿಮಿಷಕ್ಕೆ ಸೀಮಿತ.

ಎರಡು ಗಂಟೆ ಪಂದ್ಯಕ್ಕೆ ಅಡ್ಡಿ: ಷೇರ್ ಎ ಬಾಂಗ್ಲಾ ಮೈದಾನ ಮಳೆಯಿಂದ ಒದ್ದೆ ಮುದ್ದೆಯಾಗಿದ್ದು, ಭಾರತ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಪಂದ್ಯ ವಾಷ್ ಔಟ್ ಆದರೆ, ಕಪ್ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. [ಏಷ್ಯಾಕಪ್ ಗ್ಯಾಲರಿ]

Asia Cup T20 Final: Toss delayed by rain in Mirpur

ಏಷ್ಯಾ ಟಿ20 ಫೈನಲ್ ಪಂದ್ಯಕ್ಕೆ ರಿಸರ್ವ್ ಡೇ ಎಂದು ಇರಿಸಿಲ್ಲ. ಹೀಗಾಗಿ ಇಂದು ಪಂದ್ಯ ನಡೆಯದಿದ್ದರೆ ಎಂಎಸ್ ಧೋನಿ ಹಾಗೂ ಮುರ್ತಾಜಾ ಇಬ್ಬರು ಏಷ್ಯಾಕಪ್ ಹಿಡಿದುಕೊಂಡು ಸ್ಮೈಲ್ ಮಾಡಬೇಕಾಗುತ್ತಿತ್ತು.

ಪಿಚ್ ಅಲ್ಲದೆ ಕ್ರೀಡಾಂಗಣದ ಅನೇಕ ಭಾಗಗಳನ್ನು ಕವರ್​ಗಳಿಂದ ಮುಚ್ಚಲಾಗಿದ್ದು, ಮಳೆಯಿಂದಾಗಿ ಫ್ಲಡ್​ಲೈಟ್​ಗಳು ಸಹ ಕೈಕೊಟ್ಟಿವೆ. ಮಳೆ ಏನಾದರೂ ಸಹಕರಿಸಿದರೆ ಭಾರತೀಯ ಕಾಲ ಮಾನ ಪ್ರಕಾರ 10.16ರ ಸುಮಾರಿಗೆ ಪಿಚ್ ಪರೀಕ್ಷೆ ನಡೆಸಲಾಗುತ್ತದೆ. ತಲಾ 5 ಓವರ್ ಗಳ ಪಂದ್ಯವನ್ನು ನಡೆಸಲಾಗುತ್ತದೆ ಎಂದು ಸದ್ಯಕ್ಕೆ ಮಾಹಿತಿ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India clinched the Asia Cup trophy for a record sixth time after beating hosts Bangladesh by eight wickets, riding on Shikhar Dhawan's scintillating 44-ball 60 in a rain-truncated final, here tonight (March 6).
Please Wait while comments are loading...