ರೋಹಿತ್, ನೆಹ್ರಾ ಬೊಂಬಾಟ್ ಆಟ, ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

Posted By:
Subscribe to Oneindia Kannada

ಮೀರ್ಪುರ (ಬಾಂಗ್ಲಾದೇಶ), ಫೆ. 24: ಪ್ರಪ್ರಥಮ ಬಾರಿಗೆ ಟ್ವೆಂಟಿ20 ಮಾದರಿಯಲ್ಲಿ ಆರಂಭಗೊಂಡ ಏಷ್ಯಾಕಪ್ ನ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 45 ರನ್ ಗಳ ಅಂತರದ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ರೋಹಿತ್ ಶರ್ಮ ಅವರ 83 ರನ್ (55 ಎಸೆತಗಳು) ನೆರವಿನಿಂದ ಬಾಂಗ್ಲಾದೇಶಕ್ಕೆ 167 ರನ್ ಟಾರ್ಗೆಟ್ ನೀಡಿತು. ಬಾಂಗ್ಲಾದೇಶ 20 ಓವರ್ ಗಳಲ್ಲಿ 121/7 ಗಳಿಸಿ ಸೊಲೊಪ್ಪಿಕೊಂಡಿತು.

ಲೈವ್ ಸ್ಕೋರ್ ಕಾರ್ಡ್

ಬಾಂಗ್ಲಾ ರನ್ ಚೇಸ್: ಉತ್ತಮ ಆರಂಭ ಸಿಕ್ಕರೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಬಾಂಗ್ಲಾ ಸೋಲು ಕಂಡಿತು.
* ಸಬ್ಬಿರ್ ರಹ್ಮಾನ್ 32 ಎಸೆತಗಳಲ್ಲಿ 44 ರನ್ ಗಳಿಕೆ.
* ಇಮ್ರುಲ್ ಕೇಯ್ಸ್ 14, ಮುಷ್ಫಿಕರ್ ರೆಹ್ಮಾನ್ 15 ರನ್ ಗಳಿಸಿದರೆ, ತಸ್ಕಿನ್ ಅಹ್ಮದ್ 14 ರನ್ ಗಳಿಸಿ ಪ್ರತಿರೋಧ ತೋರಿದರು.
* ಆಶೀಶ್ ನೆಹ್ರಾ 23/3 ಉತ್ತಮ ಬೌಲಿಂಗ್ ಪ್ರದರ್ಶನ
* ಅಶ್ವಿನ್, ಬೂಮ್ರಾ, ಪಾಂಡ್ಯಗೆ ತಲಾ ಒಂದು ವಿಕೆಟ್
* ಭಾರತಕ್ಕೆ 45 ರನ್ ಗಳ ಜಯ. ರೋಹಿತ್ ಶರ್ಮಗೆ ಪಂದ್ಯಶ್ರೇಷ್ಠ ಪ್ರಶಸ್ತಿ.

Rothith Sharma


ಏಷ್ಯಾ ಕಪ್ 2016: ತಂಡಗಳು | ವೇಳಾಪಟ್ಟಿ

ಭಾರತದ ಇನ್ನಿಂಗ್ಸ್: ರೋಹಿತ್ ಶರ್ಮ ಆಕರ್ಷಕ ಅರ್ಧಶತಕ, ಮಧ್ಯಮ ಕ್ರಮಾಂಕ ಕುಸಿತ, ಹಾರ್ದಿಕ್ ಪಾಂಡ್ಯ ಆಸರೆ,
* ರೋಹಿತ್ ಶರ್ಮ ಜೀವದಾನದ ಲಾಭ ಪಡೆದು 83 ರನ್ (55 ಎಸೆತಗಳು 7x4,3x6)
* ತೋಡೆ ತಟ್ಟಿ ಅಂಗಳಕ್ಕೆ ಬಂದ ಶಿಖರ್ ಧವನ್ 2 ರನ್ ಗಳಿಸಿ ಔಟ್ .
* ವಿರಾಟ್ ಕೊಹ್ಲಿ 8, ಸುರೇಶ್ ರೈನಾ 13, ಯುವರಾಜ್ ಸಿಂಗ್ 15 ರನ್ ಮಾತ್ರ ಗಳಿಕೆ
* ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸ್ ಇದ್ದ 31 ರನ್ ಗಳಿಸಿದ್ದು ರನ್ ಗತಿ ಹೆಚ್ಚಿಸಿತು.
* ಬಾಂಗ್ಲಾದೇಶ ಪರ ಅಲ್ ಅಮೀನ್ ಹುಸೇನ್ 37 ರನ್ನಿತ್ತು 3 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ

ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯಲ್ಲಿ ಆಡಿದ್ದ ತಂಡವನ್ನೇ ಭಾರತ ಉಳಿಸಿಕೊಂಡಿದ್ದು, ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಅವರು ಅಜಿಂಕ್ಯ ರಹಾನೆ ಬದಲಿಗೆ ತಂಡಕ್ಕೆ ಬಂದಿದ್ದಾರೆ.

Bangladesh bowl 1st against Indiaಟಾಸ್ ವರದಿ: ಬಾಂಗ್ಲಾದೇಶದ ನಾಯಕ ಮುಷ್ರಫೆ ಮೋರ್ತಜಾ ಅವರು ಬುಧವಾರ ಸಂಜೆ ಷೇರ್ ಇ ಬಾಂಗ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಗಾಯಗೊಂಡಿದ್ದ ಧೋನಿ ಫಿಟ್ ಆಗಿದ್ದು ಮೊದಲ ಪಂದ್ಯದಲ್ಲಿ ಆಡುತ್ತಿದ್ದಾರೆ. ಟಾಸ್ ಸೋತರೂ ಭಾರತ ಮೊದಲು ಬ್ಯಾಟಿಂಗ್ ಪಡೆದುಕೊಂಡಿತು.

ಪಿಚ್ ವರದಿ: ಹಸಿರಿನಿಂದ ಕೂಡಿರುವ ಪಿಚ್ ವೇಗದ ಬೌಲರ್ ಗಳಿಗೆ ಆರಂಭದಲ್ಲಿ ಅನುಕೂಲಕರವಾಗಲಿದೆ. ನಂತರ ರನ್ ಗಳಿಕೆ ಹೆಚ್ಚಬಹುದು ಎಂದು ಭಾರತದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ ಹೇಳಿದರು.

Team India

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಬಾಂಗ್ಲಾದೇಶ: ಮಶ್ರಾಫ್ ಬಿನ್ ಮುರ್ತಝಾ (ನಾಯಕ), ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಹಮ್ಮದ್ ಮಿಥುನ್, ಮಹಮುದುಲ್ಲಾ, ಮುಶ್ಫಿಕುರ್ ರಹೀಂ, ಶಬ್ಬೀರ್ ರೆಹ್ಮಾನ್, ನಾಸಿರ್ ಹುಸೇನ್, ನೂರುಲ್ ಹಸನ್, ಅರಾಫತ್ ಸನ್ನಿ, ಮುಸ್ತಾಫಿಝುರ್ ರೆಹ್ಮಾನ್, ಅಲ್-ಅಮಿನ್ ಹುಸೇನ್, ತಸ್ಕಿನ್ ಅಹ್ಮದ್ ಹಾಗೂ ಅಬೂ ಹೈದರ್ ರೋನಿ.

* ಫೆಬ್ರವರಿ 25ರಂದು ಶ್ರೀಲಂಕಾ vs ಯುಎಇ
* ಭಾರತದ ಮುಂದಿನ ಪಂದ್ಯ vs ಪಾಕಿಸ್ತಾನ ಫೆಬ್ರವರಿ 27 (ಶನಿವಾರ)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rohit Sharma struck a scintillating 83 off 55 balls under pressure to propel India to a challenging 166 for six against Bangladesh in the opening encounter of the Asia Cup Twenty20 tournament here today. India won by 45 runs.
Please Wait while comments are loading...