ಫೈನಲ್ ನಲ್ಲಿ ಭಾರತ ವಿರುದ್ಧ ಕಾದಾಡುವಾಸೆ: ಶೋಯಬ್

By: ರಮೇಶ್ ಬಿ
Subscribe to Oneindia Kannada

ಮೀರ್ ಪುರ್ (ಬಾಂಗ್ಲಾದೇಶ), ಮಾ. 01. ಪಾಕಿಸ್ತಾನದ ಅನುಭವಿ ಆಲ್ ರೌಂಡರ್ ಆಟಗಾರ ಶೋಯಬ್ ಮಲ್ಲಿಕ್ ಸಿಡಿಸಿದ 63 ರನ್ ಗಳ ನೆರವಿನಿಂದ ಯುಎಇ ವಿರುದ್ಧ ಏಷ್ಯಾ ಕಪ್ ಟುರ್ನಿಯಲ್ಲಿ ಮೊದಲ ಜಯಗಳಿಸಿದೆ.

ಪಂದ್ಯದ ಬಳಿಕ ಮಾತನಾಡಿದ ಮಲ್ಲಿಕ್, ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯದಿಂದ ಸೋಲು ಅನುಭವಿಸಿ ಅವಮಾನವಾಗಿದೆ. ಇನ್ನುಳಿದ ಪಂದ್ಯಗಳಲ್ಲಿ ಗೆದ್ದು ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಪ್ರತ್ಯುತ್ತರ ನೀಡಲಿದ್ದೇವೆ ಎಂದರು.

Shoaib Malik keen to face India in the finals to settle scores

ಭಾರತ ವಿರುದ್ಧ ಶೇರ್-ಇ-ಬಾಂಗ್ಲಾ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯಕ್ಕೂ ಮೊದಲು ಪಿಚ್ ವರದಿಯ ನೀತಿ ನಿಯಮಗಳನ್ನು ನಾವು ಸರಿಯಾಗಿ ಗಮನಿಸಿಲ್ಲ. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ಸ್ ಮನ್ ಗಳು ಕ್ಲಿಕ್ ಆಗಲಿಲ್ಲ. ಆದರೂ ಉತ್ತಮ ಪ್ರಯತ್ನ ದಾಖಲಿಸಿದೆವು ಎಂದು ಶೋಯಬ್ ಮಲ್ಲಿಕ್ ಹೇಳಿದರು.

ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ

ಭಾರತದ ವಿರುದ್ಧ ಸೋತಿದ್ದಕ್ಕೆ ನಮಗೆ ಮತ್ತು ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯನ್ನುಂಟು ಮಾಡಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್ ಅಮಿರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಟೂರ್ನಿಯಲ್ಲಿ ಬೌಲರ್ಸ್ ಗಳು ಫಾರ್ಮ್ ನಲ್ಲಿದ್ದಾರೆ. ಬ್ಯಾಟ್ಸ್ ಮನ್ ಗಳು ಲಯಕ್ಕೆ ಮರಳಿದರೆ ಉತ್ತಮ ಫೈಟ್ ನೀಡಬಹುದು. ಹಾಗಾಗಿ ಮುಂದಿನ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಲಿದ್ದೇವೆ ಎಂದರು.

ಈ ಸುದ್ದಿಯನ್ನು ಪೋಡ್ ಕಾಸ್ಟ್ ಮೂಲಕ ಕೇಳಿಸಿಕೊಳ್ಳಿ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan's most experienced batting all-rounder Shoaib Malik's unbeaten 63-run-knock helped his side register its first victory in the Asia Cup T20 tournament.
Please Wait while comments are loading...