ಭಾರತ- ಪಾಕ್ ಪಂದ್ಯ, ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ!

Posted By:
Subscribe to Oneindia Kannada

ಮೀರ್ಪುರ್ (ಬಾಂಗ್ಲಾದೇಶ). ಫೆ. 28: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಕ್ರೀಡಾಭಿಮಾನಿಗಳ ಜೊತೆಗೆ ಅಂಕಿ ಅಂಶ ಕಲೆ ಹಾಕುವವರಿಗೂ ಹಬ್ಬವೆ ಸರಿ. ಷೇರ್ ಎ ಬಾಂಗ್ಲಾದ ಹಸಿರು ಮೈದಾನದಲ್ಲಿ ರನ್ ಹೊಳೆ ಹರಿಯದಿದ್ದರೂ ಅಲ್ಪಮೊತ್ತದ ಸ್ಕೋರ್ ಕಂಡ ಪಂದ್ಯದ ಮುಖ್ಯಾಂಶಗಳು ಇಲ್ಲಿವೆ:

ಸ್ಕೋರ್ ಕಾರ್ಡ್

ಟೀಂ ಇಂಡಿಯಾ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲಲು ವಿರಾಟ್ ಕೊಹ್ಲಿ ಹಾಗೂ ಬೌಲರ್ ಗಳ ಸಂಘಟಿತ ಶ್ರಮ ಕಾರಣ ಎನ್ನಬಹುದು. ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 17.3 ಓವರ್ ಗಳಲ್ಲಿ 83 ರನ್ ಗಳಿಗೆ ಸರ್ವಪತನ ಕಂಡಿತು. ಸುಲಭ ಸವಾಲನ್ನು ಕೊಂಚ ಪ್ರಯಾಸದಿಂದ ಭಾರತ ಸಾಧಿಸಿತು. ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ

* ಪಾಕಿಸ್ತಾನ ವಿರುದ್ಧ ಆಡಿರುವ ಏಳು ಟಿ20ಐ ಪಂದ್ಯದಲ್ಲಿ ಭಾರತ 5 ಪಂದ್ಯ ಗೆದ್ದಿದೆ. ಒಂದು ಪಂದ್ಯ ಮಾತ್ರ ಪಾಕಿಸ್ತಾನ ಗೆದ್ದಿದೆ. ಬೌಲ್ ಔಟ್ ಮೂಲಕ ಡರ್ಬನ್ ನಲ್ಲಿ ಟೈ ಆದ ಪಂದ್ಯವನ್ನು ಭಾರತ ತನ್ನದಾಗಿಸಿಕೊಂಡಿತು. [ಟ್ವೀಟ್ಸ್: ಕೊಹ್ಲಿ, ಅಮೀರ್ ಶೋಗೆ ತಲೆಬಾಗಿದ ಫ್ಯಾನ್ಸ್]

* ಟಿ20ಐ ಪಂದ್ಯದಲ್ಲಿ ಎರಡು ಮೇಡನ್ ಓವರ್ ಎಸೆದ ಜಸ್ಪ್ರೀತ್ ಬ್ರೂಮಾ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಎನಿಸಿದ್ದಾರೆ. ಈ ಮೊದಲು ಹರ್ಭಜನ್ ಸಿಂಗ್ (4-2-12-4) ಅವರು ಇಂಗ್ಲೆಂಡ್ ವಿರುದ್ಧ ಕೊಲಂಬೋ (ಸೆ.23, 2012) ದಲ್ಲಿ ಈ ಸಾಧನೆ ಮಾಡಿದ್ದರು. (ಪಿಟಿಐ)

ಉಭಯ ತಂಡಗಳಿಂದ ಸಿಕ್ಸ್ ದಾಖಲಾಗಲಿಲ್ಲ

ಉಭಯ ತಂಡಗಳಿಂದ ಸಿಕ್ಸ್ ದಾಖಲಾಗಲಿಲ್ಲ

* ಈ ಪಂದ್ಯ ಉಭಯ ತಂಡಗಳಿಂದ ಸಿಕ್ಸ್ ದಾಖಲಾಗಲಿಲ್ಲ. ಈ ರೀತಿ ಇದು ಆರನೇ ಬಾರಿಗೆ ಟಿ20ಐ ಇತಿಹಾಸದಲ್ಲಿ ನಡೆದಿದೆ. ಸಿಕ್ಸ್ ಬಾರಿಸಿದೆ ಟಿ20 ಪಂದ್ಯ ಗೆದ್ದಿದ್ದು ಕೂಡಾ ಇದೇ ಮೊದಲು.

* ಮೊಹಮ್ಮದ್ ಅಮಿರ್ (3/18) ಭಾರತದ ವಿರುದ್ಧ ಹಾಗೂ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಈ ಮುಂಚೆ ಆಸ್ಟ್ರೇಲಿಯಾ ವಿರುದ್ಧ 3/23 ಗಳಿಸಿದ್ದರು.

* ಟಿ20ಐಗಳಲ್ಲಿ ನಾಯಕ ಶಹೀದ್ ಅಫ್ರಿದಿ ಅವರು ಮೂರನೇ ಬಾರಿಗೆ ರನ್ ಔಟ್ ಆಗಿದ್ದಾರೆ.

ಆರಂಭಿಕ ಬ್ಯಾಟ್ಸ್ ಮನ್ ಗಳು ಡಕ್ ಔಟ್ ಆಗಿದ್ದು

ಆರಂಭಿಕ ಬ್ಯಾಟ್ಸ್ ಮನ್ ಗಳು ಡಕ್ ಔಟ್ ಆಗಿದ್ದು

* ಟಿ20 ಯಲ್ಲಿ ರೋಹಿತ್ ಶರ್ಮ 3ನೇ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಗಳು ಡಕ್ ಔಟ್ ಆಗಿದ್ದು ಇದೇ ಮೊದಲ ಬಾರಿ.

* ಅಜಿಂಕ್ಯ ರಹಾನೆ ಅವರು ವೃತ್ತಿ ಬದುಕಿನ 2ನೇ ಡಕ್ ಔಟ್ ದಾಖಲಿಸಿದರು. ಈ ಮುಂಚೆ ಇಂಗ್ಲೆಂಡ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು.

* ವಿರಾಟ್ ಕೊಹ್ಲಿ ಅವರು ಟಿ20ಐನಲ್ಲಿ ಒಟ್ಟಾರೆ 6ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಎರಡು ಬಾರಿ ಪ್ರಶಸ್ತಿ ಪಡೆದಿದ್ದಾರೆ.

ಪಾಕಿಸ್ತಾನದ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಇರಲಿಲ್ಲ

ಪಾಕಿಸ್ತಾನದ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಇರಲಿಲ್ಲ

* 10 ಓವರ್ ಗಳ ಅಂತರದಲ್ಲಿ ಪಾಕಿಸ್ತಾನದ 6 ವಿಕೆಟ್ ಗಳನ್ನು ಟೀಂ ಇಂಡಿಯಾ ಬೌಲರ್ಸ್ ಉದುರಿಸಿದರು. ವಿಶ್ವ ಕ್ರಿಕೆಟ್ ನಲ್ಲಿ ಭಾರತ 3 ನೇ ಭಾರಿ ಈ ಸಾಧನೆ ಮಾಡಿದೆ.

* ಪಾಕಿಸ್ತಾನದ ಇನ್ನಿಂಗ್ಸ್ ನಲ್ಲಿ ಒಂದೇ ಒಂದು ಡಕ್ ಔಟ್ ಇರಲಿಲ್ಲ. 83ಕ್ಕಿಂತ ಕಡಿಮೆ ಮೊತ್ತದ ಅನ್ ಗಳಿಸಿದ ಪಂದ್ಯದಲ್ಲಿ ಈ ಮುಂಚೆ ಶ್ರೀಲಂಕಾ ವಿರುದ್ಧ ಈ ಸಾಧನೆ ಕಂಡು ಬಂದಿತ್ತು.

ಹೆಚ್ಚು ಡಾಟ್ ಬಾಲ್ ಗಳನ್ನು ಹಾಕಿದ ಸಾಧನೆ

ಹೆಚ್ಚು ಡಾಟ್ ಬಾಲ್ ಗಳನ್ನು ಹಾಕಿದ ಸಾಧನೆ

* ಭಾರತದ ಜಸ್ ಪ್ರೀತ್ ಬುಮ್ರಾ ಅವರು 18 ಡಾಟ್ ಬಾಲ್ ಗಳನ್ನು ಎಸೆದು ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಹಾಕಿದ ಸಾಧನೆ ಮಾಡಿದ್ದಾರೆ.
* ಪಾಕಿಸ್ತಾನ ಗಳಿಸಿದ 83ರನ್ ಭಾರತದ ವಿರುದ್ಧ ಕನಿಷ್ಷ ಮೊತ್ತವಾಗಿದೆ. 2012ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ 128 ರನ್ ಗಳಿಸಿದ್ದು ಕನಿಷ್ಠ ಮೊತ್ತವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Asia Cup 2016: India-Pak. T20i : statistical highlights: Team India rode on a strong bowling performance to beat arch-rivals Pakistan by five wickets in their Twenty20 International clash of the Asia Cup at the Sher-e-Bangla National Stadium here on Saturday evening
Please Wait while comments are loading...