ಟೆಸ್ಟ್ : ವಿಶಿಷ್ಟ ದಾಖಲೆ ಬರೆದ ಅಶ್ವಿನ್- ಜಡೇಜ-ಜಯಂತ್ ಜೋಡಿ

Posted By:
Subscribe to Oneindia Kannada

ಮೊಹಾಲಿ, ನವೆಂಬರ್ 28: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಟೀಂ ಇಂಡಿಯಾದ ಆಟಗಾರರಾದ ಆರ್ ಅಶ್ವಿನ್ , ರವೀಂದ್ರ ಜಡೇಜ ಹಾಗೂ ಜಯಂತ್ ಯಾದವ್ ಅವರು ವಿಶಿಷ್ಟ ದಾಖಲೆ ಬರೆದಿದ್ದಾರೆ. ಇಬ್ಬರು ಅರ್ಧಶತಕ ಬಾರಿಸಿ ಟೀಂ ಇಂಡಿಯಾದ ಮೊತ್ತ ಏರಿಸಿದರು.

ಐಎಸ್ ಬಿಂದ್ರಾ ಮೈದಾನದಲ್ಲಿ ಅಶ್ವಿನ್, ಜಡೇಜ ಹಾಗೂ ಯಾದವ್ ಅವರ ಅರ್ಧಶತಕಗಳ ನೆರವಿನಿಂದ ಟೀಂಇಂಡಿಯಾ 134ರನ್ ಮುನ್ನಡೆಯೊಂದಿಗೆ 138.2 ಓವರ್ ಗಳಲ್ಲಿ 417ರನ್ ಗಳಿಸಿ ಆಲ್ ಔಟ್ ಆಗಿದೆ. [ಭಾರತ vs ಇಂಗ್ಲೆಂಡ್ ; 3ನೇ ಟೆಸ್ಟ್, ಮೂರನೇ ದಿನದಾಟದ ವರದಿ]

1st time in 84 years: Ashwin, Jadeja and Jayant set new Indian record in 3rd Test


84ವರ್ಷಗಳ ನಂತರ ಇದೇ ಮೊದಲು: 84 ವರ್ಷಗಳ ನಂತರ ಭಾರತೀಯ ಟೆಸ್ಟ್ ಇತಿಹಾಸದಲ್ಲೇ ಬಾಲಂಗೋಚಿಗಳು ಅರ್ಧಶತಕ ಗಳಿಸಿದ್ದು ಸಾಧನೆಯಾಗಿದೆ. 7,8 ಹಾಗೂ 9ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕ್ರಮವಾಗಿ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಸಾಧನೆ.

7ನೇ ಕ್ರಮಾಂಕದಲ್ಲಿ ಆಡಿದ ಆರ್ ಅಶ್ವಿನ್ ಅವರು ಆಲ್ ರೌಂಡರ್ ಆಟ ಪ್ರದರ್ಶಿಸಿ 72ರನ್ ಗಳಿಸಿ ಔಟಾದರು. 8ನೇ ಕ್ರಮಾಂಕದಲ್ಲಿ ಆಡಿದ ಜಡೇಜ ಅವರು 10ರನ್ ಗಳಿಂದ ಅರ್ಹ ಶತಕದಿಂದ ವಂಚಿತರಾಗಿ 90ರನ್ ಗಳಿಸಿದರು. ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರು ತಮ್ಮ ಸೊಗಸಾದ ಬ್ಯಾಟಿಂಗ್ ಎಲ್ಲರನ್ನು ಅಚ್ಚರಿಗೆ ದೂಡಿದ್ದಲ್ಲದೆ, ಚೊಚ್ಚಲ ಅರ್ಧಶತಕ ಸಿಡಿಸಿ 55ರನ್ ಗಳಿಸಿದರು.

ಅಂಕಿ ಅಂಶ ಕಲೆಹಾಕುವವರ ಮಾಹಿತಿ ಪ್ರಕಾರ ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ 7,8 ಹಾಗೂ 9ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಅರ್ಧಶತಕ ಬಾರಿಸಿದ್ದು 7 ಬಾರಿ ಸಂಭವಿಸಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's spin trio of Ravichandran Ashwin, Ravindra Jadeja and Jayant Yadav, known for their bowling skills, today (November 28) set a new batting record on the 3rd day of the 3rd Test against England at IS Bindra Stadium.
Please Wait while comments are loading...