ಅಶ್ವಿನ್-ಆಂಡರ್ಸನ್ ಮಾತಿನ ಚಕಮಕಿ ಬಗ್ಗೆ ಕೊಹ್ಲಿ ಸ್ಪಷ್ಟನೆ!

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 12: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರು ಈಗ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರ ಜತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ನಾಯಕ ಕೊಹ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.

ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನವಾದ ಸೋಮವಾರ (ಡಿಸೆಂಬರ್ 12) ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಹಾಗೂ 36ರನ್ ಗಳಿಂದ ಭಾರತ ಸೋಲಿಸುವ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಂಡಿದೆ.[ಟೆಸ್ಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 3-0 ಸರಣಿ ಜಯ]

ಅಶ್ವಿನ್-ಆಂದರ್ಸನ್ ಚಕಮಕಿ: ಕೊನೆಯದಿನದ ಆಟದ ವೇಳೆ ಭಾರತ ಗೆಲ್ಲಲು 1 ವಿಕೆಟ್ ಅಗತ್ಯವಿದ್ದ ಸಂದರ್ಭದಲ್ಲಿ ಇಂಗ್ಲೆಂಡಿನ ನಂ.11 ಆಟಗಾರ ಜೇಮ್ಸ್ ಅಂಡರ್ಸನ್ ಅವರು ಕ್ರೀಸ್ ಗೆ ಬರುತ್ತಿದ್ದಂತೆ ಅಶ್ವಿನ್ ಅವರು ಏನೋ ಹೇಳಿದ್ದಾರೆ.

Ashwin-Anderson altercation in 4th Test: Virat Kohli reveals what happened

ನಂತರ ಇದಕ್ಕೆ ಪೂರಕವಾಗಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಹಾಗೂ ನಾಯಕ ಕೊಹ್ಲಿ ಅವರು ಕೂಡಾ ಮಾತು ಸೇರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಅಂಪೈರ್ ಮಾರಿಯಸ್ ಎರಾಸ್ಮಸ್ ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆಂಡರ್ಸನ್ ಅವರು ನಂತರ 2 ರನ್ನಿಗೆ ಆರ್ ಅಶ್ವಿನ್ ಅವರು ಔಟ್ ಮಾಡಿದರು.


ಕೊಹ್ಲಿ ಸ್ಪಷ್ಟನೆ: ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ಮೊದಲ ಬಾರಿಗೆ ನಾನು ಆಂಡರ್ಸನ್ ಜತೆಗಿನ ಚಕಮಕಿ ವಿಷಯದಲ್ಲಿ ಸಂಧಾನ ನಡೆಸಬೇಕಾಯಿತು ಎಂದಿದ್ದಾರೆ.

ಆಂಡರ್ಸನ್ ಅವರು ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಅಶ್ವಿನ್ ಅವರು ಆಂಡರ್ಸನ್ ಗೆ ಪಿಚ್ ಬಗ್ಗೆ ಈಗ ತಿಳಿಯುತ್ತದೆ ಎಂದಿದ್ದಾರೆ. ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿ ಬಗ್ಗೆಯೂ ಕಾಮೆಂಟ್: 28 ವರ್ಷ ವಯಸ್ಸಿನ ಕೊಹ್ಲಿ ಅವರು 2016ರಲ್ಲಿ 3ನೇ ದ್ವಿಶತಕ ಸಿಡಿಸಿದ್ದಾರೆ.ಆದರೆ, 2014ರಲ್ಲಿ ಇಂಗ್ಲೆಂಡ್ ಸರಣಿ ವೇಳೆ ಕಳಪೆ ಫಾರ್ಮ್ ನಲ್ಲಿದ್ದ ಕೊಹ್ಲಿಯನ್ನು 4ಬಾರಿ ನಾನು ಔಟ್ ಮಾಡಿದ್ದೆ ಎಂದು ಆಂಡರ್ಸನ್ ಹೇಳಿದ್ದರು. ಇಲ್ಲಿನ ಪಿಚ್ ಅವರ ಬ್ಯಾಟಿಂಗ್ ಶೈಲಿಗೆ ಹೇಳಿ ಮಾಡಿಸಿದಂತೆ ಇದೆ. ಬೌನ್ಸಿಂಗ್ ಪಿಚ್ ನಲ್ಲಿ ಆಡಬೇಕು ಎಂದಿದ್ದರು.

ಡಿಸೆಂಬರ್ 16ಕ್ಕೆ ಚೆನ್ನೈನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಿಗದಿಯಾಗಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 3-0ರಲ್ಲಿ ಗೆದ್ದುಕೊಂಡಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After making remarks on Virat Kohli's batting technique, England paceman James Anderson was targeted by offspinner Ravichandran Ashwin during the 4th Test and it required the Indian captain to "calm things down".
Please Wait while comments are loading...