ನೋಕಿಯಾ ಫೋನ್ ಮಾತ್ರ ಇದೆ ಎಂದ ನೆಹ್ರಾ ಕಿಚಾಯಿಸಿದ್ರು!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 23: ಟೀಂ ಇಂಡಿಯಾ ವೇಗಿ ಆಶೀಶ್ ನೆಹ್ರಾ ಅವರು ಮಂಗಳವಾರ (ಮಾರ್ಚ್ 22) ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಆಗಿ ಟ್ರಾಲ್ ಆಗಿಬಿಟ್ಟರು. ಸಾಮಾಜಿಕ ಜಾಲ ತಾಣಗಳು ನನಗೆ ತಿಳಿದಿಲ್ಲ, ನಾನಿನ್ನೂ ನೋಕಿಯಾ ಫೋನ್ ಬಳಸುತ್ತಿದ್ದೇನೆ ಎಂದು ನೆಹ್ರಾ ಹೇಳಿದ್ದು ಚರ್ಚೆಯ ವಿಷಯವಾಗಿತ್ತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

'ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಾನು ಬಳಸುತ್ತಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ನಾನು ಯಾವುದೇ ಖಾತೆ ಹೊಂದಿಲ್ಲ. ನಾನು ನೋಕಿಯಾ ಫೋನ್ ಬಳಸುತ್ತಿದ್ದೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

Ashish Nehra trolled for 'using old Nokia phone' comment

'ಬಹುಶಃ ನೀವು ತಪ್ಪಾದ ವ್ಯಕ್ತಿಗೆ ಈ ಪ್ರಶ್ನೆ ಕೇಳುತ್ತಿದ್ದೀರಿ, ನನ್ನ ಹಳೆ ನೋಕಿಯಾ ಫೋನಿನಲ್ಲಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಮ್ ಬಳಸಲು ಆಗುವುದಿಲ್ಲ. ನಾನು ದಿನ ಪತ್ರಿಕೆ ಕೂಡಾ ಓದುವುದಿಲ್ಲ. ನಾನು ಸ್ವಲ್ಪ ಹಳೆಪೈಕಿ ಎಂದು ನಿಮಗೆ ಅನಿಸಿದರೂ ತೊಂದರೆಯಿಲ್ಲ ' ಎನ್ನುತ್ತಾ ಎಂದಿನ ನಗೆ ಚೆಲ್ಲಿದರು.

ವಿಶ್ವ ಟಿ20 ಟೂರ್ನಿಯಲ್ಲಿ ಮಾರ್ಚ್ 23ರಂದು ಸಂಜೆ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ಆಶೀಶ್ ನೆಹ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian pacer Ashish Nehra was today (March 22) trolled for his comments that he is still "using his old phone" and doesn't have social media accounts like Facebook and Twitter.
Please Wait while comments are loading...