ಆಶೀಶ್ ನೆಹ್ರಾ-ಟೀಂ ಇಂಡಿಯಾದ ಬೌಲಿಂಗ್ ಕೋಚ್?

Posted By:
Subscribe to Oneindia Kannada

ನವದೆಹಲಿ, ಮೇ 08: ಟೀಂ ಇಂಡಿಯಾದ ಹಿರಿಯ ಎಡಗೈ ವೇಗಿ ಆಶೀಶ್ ನೆಹ್ರಾ ಅವರು ತಂಡ ಬೌಲಿಂಗ್ ಕೋಚ್ ಅಗುವ ಸಾಧ್ಯತೆ ಕಂಡು ಬಂದಿದೆ. ಬೌಲಿಂಗ್ ಕೋಚ್ ಸ್ಥಾನಕ್ಕೆ ವೇಗಿ ಜಹೀರ್ ಖಾನ್ ಹಾಗೂ ನೆಹ್ರಾ ಹೆಸರು ಕೇಳಿ ಬಂದಿದ್ದು, ನೆಹ್ರಾ ಹೆಸರು ಮುಂಚೂಣಿಯಲ್ಲಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ದೆಹಲಿಯ 37 ವರ್ಷ ವಯಸ್ಸಿನ ಆಶಿಶ್ ನೆಹ್ರಾ ಅವರು ಇತ್ತೀಚೆಗೆ ಭಾರತ ಟಿ20 ತಂಡಕ್ಕೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ 9ರಲ್ಲೂ ನೆಹ್ರಾ ಆಡುತ್ತಿದ್ದಾರೆ.

ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಆಗಿ ನೆಹ್ರಾ ಆಯ್ಕೆ ಬಹುತೇಕ ಖಚಿತ ಎಂದು ವರದಿಗಳು ಹೇಳಿವೆ. [ನೋಕಿಯಾ ಫೋನ್ ಮಾತ್ರ ಇದೆ ಎಂದ ನೆಹ್ರಾ ಕಿಚಾಯಿಸಿದ್ರು!]

Ashish Nehra likely to be bowling coach Team India

ಜಿಂಬಾಂಬ್ವೆ ಪ್ರವಾಸಕ್ಕೆ ತೆರಳುವ ಮುನ್ನ ಮುಖ್ಯ ಕೋಚ್, ಸಹಾಯಕ ಕೋಚ್ ಮತ್ತು ಇತರ ಸಿಬ್ಬಂದಿಯ ಗುತ್ತಿಗೆ ನವೀಕರಿಸಬೇಕಿದೆ. ಹೀಗಾಗಿ ಕೆಲವರ ಸ್ಥಾನ ಪಲ್ಲಟ, ಹೊಸಬರ ಸೇರ್ಪಡೆ ಅನಿವಾರ್ಯವಾಗಿದೆ. [ಟೀಂ ಇಂಡಿಯಾ ಕೋಚ್ ಆಗುವ ಬಗ್ಗೆ ದ್ರಾವಿಡ್]

ಆದರೆ, ಟೆಸ್ಟ್, ಏಕದಿನ ಕ್ರಿಕೆಟ್​ನಿಂದ ದೂರ ಉಳಿದಿರುವ ನೆಹ್ರಾ ಅವರು ಇತ್ತೀಚೆಗೆ ಟಿ20 ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. [ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ ವೇಳಾಪಟ್ಟಿ]

ನೆಹ್ರಾ ಅವರು ಬೌಲರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವುದು ಕಷ್ಟ ಎಂದು ತಜ್ಞರ ಅಭಿಪ್ರಾಯ. ಕೇವಲ ಟಿ20 ಕ್ರಿಕೆಟ್​ಗೆ ಸೀಮಿತವಾಗುವ ಬದಲು ಕೋಚಿಂಗ್ ಮಾಡಲಿ ಎಂದು ಬಿಸಿಸಿಐ ಬಯಸಿದೆ.

ನೆಹ್ರಾ ಅವರು ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯರಿಗೆ ಸೂಕ್ತ ಸಲಹೆ ನೀಡಿ, ತಿದ್ದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಕೂಡಾ ನೆಹ್ರಾ ಅವರ ಬಗ್ಗೆ ಹೊಗಳೀಕೆ ಮಾತಾಡಿದ್ದಾರೆ.

ಹೀಗಾಗಿ ಯುವ ವೇಗಿಗಳಿಗೆ ನೆಹ್ರಾ ಕೋಚಿಂಗ್ ಅಗತ್ಯವಿದೆ ಎಂದು ಬಿಸಿಸಿಐ ಪರಿಗಣಿಸಬಹುದು. ಆದರೆ, ಹಾಲಿ ಕೋಚ್ ಅರುಣ್ ಅವರು ಏಕದಿನ ವಿಶ್ವಕಪ್ ನಿಂದ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior left-arm fast bowler Ashish Nehra is the top contender for the job of India's bowling coach as reported by the Hindu. The 37-year old, who recently returned to the national side as a part of the T20I team
Please Wait while comments are loading...