ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಾಡ್ಮನ್-ವುಡ್ ಫುಲ್ ದಾಖಲೆ ಮುರಿದ ಸ್ಮಿತ್-ರೋಜರ್ಸ್

By Mahesh

ಲಾರ್ಡ್ಸ್, ಜು.17: ಆಷಸ್ ಸರಣಿಯ ಎರಡನೇ ಟೆಸ್ಟ್‌ನ ಮೊದಲ ದಿನವೇ ಸೆಟೆದು ನಿಂತ ಆಸ್ಟ್ರೇಲಿಯಾ ಕಂಡು ಇಂಗ್ಲೆಂಡ್ ಬೆಚ್ಚಿಬಿದ್ದಿದೆ. ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್‌ ಹಾಗೂ ಸ್ಟೀವನ್ ಸ್ಮಿತ್ ಅವರ ಅಜೇಯ ಶತಕದ ನೆರವಿನಿಂದ 85 ವರ್ಷ ಹಳೆದ ದಾಖಲೆ ಧೂಳಿಪಟವಾಗಿದೆ.

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದಂತ್ಯಕ್ಕೆ 90 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ. ಕ್ರಿಸ್ ರೋಜರ್ಸ್‌ ಅವರು ತಮ್ಮ ಟೆಸ್ಟ್ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯ 158ರನ್ (282ಎಸೆತ, 25 ಬೌಂಡರಿ) ಮತ್ತು ಸ್ಮಿತ್ 129 ರನ್ (217ಎ, 13x4, 1x6) ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. [ಶತಕ ಕೈತಪ್ಪಿದ್ದರೂ ವಿಶ್ವದಾಖಲೆ ಬರೆದ ಕ್ರಿಸ್]

ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು ಆಸೀಸ್ ಪಾಲಿಗೆ ವರವಾಯಿತು.. ರೋಜರ್ಸ್‌ ಮತ್ತು ವಾರ್ನರ್ ಮೊದಲ ವಿಕೆಟ್‌ಗೆ 15 ಓವರ್‌ಗಳಲ್ಲಿ 78 ರನ್ ಸೇರಿದರು. ಬಳಿಕ ಮೊದಲ ವಿಕೆಟ್ ಪತನಗೊಂಡಿತು. 38 ರನ್ ಗಳಿಸಿದ್ದ ವಾರ್ನರ್ ಅವರು ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿದರು.

Rogers and Smith break 85-year record

ದಾಖಲೆ ಜೊತೆಯಾಟ: ಎರಡನೇ ವಿಕೆಟ್‌ಗೆ ರೋಜರ್ಸ್‌ಗೆ ಸ್ಮಿತ್ ಮುರಿಯದ ಜೊತೆಯಾಟದಲ್ಲಿ 259 ರನ್ ಸೇರಿಸಿದ್ದು ಇದು ಎರಡನೇ ವಿಕೆಟ್ ಗೆ ಆಸ್ಟ್ರೇಲಿಯಾ ದಾಖಲೆಯಾಗಿದೆ. ಈ ಹಿಂದೆ ಲಾರ್ಡ್ಸ್ ನಲ್ಲಿ 231 ರನ್ ಜೊತೆಯಾಟ ಬಿಲ್ ವುಡ್ ಫುಲ್ ಹಾಗೂ ಡಾನ್ ಬ್ರಾಡ್ಮನ್ ಅವರು 1930ರಲ್ಲಿ ಗಳಿಸಿದ್ದು ದಾಖಲೆ ಎನಿಸಿತ್ತು. [ನಾಲ್ಕೇ ದಿನದಲ್ಲಿ ಆಸೀಸ್ ತಂಡವನ್ನು ಕೆಡವಿದ ಕುಕ್ ಪಡೆ]

30ನೇ ಟೆಸ್ಟ್ ಆಡುತ್ತಿರುವ ಸ್ಮಿತ್ ತಮ್ಮ 10ನೇ ಶತಕ ದಾಖಲಿಸಿದರು. 22ನೇ ಟೆಸ್ಟ್‌ನಲ್ಲಿ ರೋಜರ್ಸ್‌ 5ನೇ ಶತಕ ಬಾರಿಸಿದರು. ಇಂಗ್ಲೆಂಡ್‌ನ ಸ್ಪಿನ್ನರ್ ಮೋಯಿನ್ ಅಲಿ 82ಕ್ಕೆ 1 ವಿಕೆಟ್ ಪಡೆದರು.

1989ರಲ್ಲಿ ಟ್ರೆಂಟ್ ಬಿಜ್ ನಲ್ಲಿ ಐದನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮಾರ್ಕ್ ಟೇಲರ್ 141 ನಾಟೌಟ್ ಹಾಗೂ ಜೆಫ್ ಮಾರ್ಷ್ 125 ರನ್ ನಾಟೌಟ್ ಆಗಿ 301ರನ್ ಗಳಿಸಿದ್ದು ಇಲ್ಲಿವರೆಗಿನ ಆಸೀಸ್ ಸಾಧನೆಯಾಗಿದೆ. ಸುಮಾರು 14 ವರ್ಷಗಳ ನಂತರ ಇಂಗ್ಲೆಂಡ್ ತಂಡ ತನ್ನ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದೆ. ಕಾರ್ಡಿಫ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 169 ರನ್ ಗಳಿಂದ ಗೆದ್ದಿರುವುದು ಆಂಗ್ಲರಿಗೆ ಆನೆಬಲ ತಂದಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X