ಮುಂಬೈ ಅಂಡರ್ 19 ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಆಯ್ಕೆ

Posted By:
Subscribe to Oneindia Kannada

ಮುಂಬೈ, ಸೆ. 11:ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಪ್ರತಿಭೆ ಬಗ್ಗೆ ಇದ್ದ ಅನುಮಾನಗಳು ಈಗ ಪರಿಹಾರವಾಗಿವೆ. ಅಪ್ಪನ ಹೆಸರು ಹೇಳಿ ತಂಡಕ್ಕೆ ಶಿಫಾರಸ್ಸಿನ ಮೇಲೆ ಆಯ್ಕೆಯಾಗುತ್ತಿದ್ದಾರೆ ಎಂಬ ಆರೋಪದಿಂದ ಅರ್ಜುನ್ ಹೊರ ಬಂದಿದ್ದಾರೆ.

ಸಚಿನ್ ಪುತ್ರ ಅರ್ಜುನ್ ಎಸೆತಕ್ಕೆ ಬೆಚ್ಚಿದ ಆಂಗ್ಲರುǃ

ಮುಂಬೈನ ಅಂಡರ್ 19 ತಂಡಕ್ಕೆ ಅರ್ಜುನ್ ಆಯ್ಕೆಯಾಗಲು ಅವರು ಇಂಗ್ಲೆಂಡಿನಲ್ಲಿ ತೋರಿದ ಪ್ರತಿಭಾ ಪ್ರದರ್ಶನವೇ ಕಾರಣ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಅಂಡರ್ 14, 16 ತಂಡದಲ್ಲಿದ್ದ ಅರ್ಜುನ್ ಈಗ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಜೆವೈ ಲೆಲೆ ಅಖಿಲ ಭಾರತ ಅಂಡರ್ 19 ಆಹ್ವಾನಿತ ಏಕದಿನ ಟೂರ್ನಮೆಂಟ್ ನಲ್ಲಿ ಅರ್ಜುನ್ ಆಡಲಿದ್ದಾರೆ.

Arjun Tendulkar named in Mumbai's U-19 squad for one-day tournament

ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 23ರ ತನಕ ಗುಜರಾತಿನಲ್ಲಿ ಟೂರ್ನಮೆಂಟ್ ನಡೆಯಲಿದೆ. 2013ರಲ್ಲಿ ಸಚಿನ್ ಅವರ ಕೊನೆ ಟೆಸ್ಟ್ ಪಂದ್ಯದಲ್ಲಿ ಬಾಲ್ ಬಾಯ್ ರೂಪದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ಈಗ ಎಡಗೈ ವೇಗಿಯಾಗಿ ರೂಪುಗೊಳ್ಳುತ್ತಿದ್ದಾರೆ.

ತೆಂಡೂಲ್ಕರ್ ಪುತ್ರನ ಬಗ್ಗೆ ವಾಸೀಂ ಅಕ್ರಂ ಹೇಳಿದ್ದೇನು?

ಇಂಗ್ಲೆಂಡಿನಲ್ಲಿ ತರಬೇತಿ ಪಡೆಯುವ ವೇಳೆ, ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈಸ್ಟೋ ಅವರು ಗಾಯಗೊಳ್ಳುವಂತೆ ಚೆಂಡು ಎಸೆದ ಅರ್ಜುನ್ ಸುದ್ದಿಯಾಗಿದ್ದರು. ಇದಲ್ಲದೆ, ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರರಿಗೂ ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಅರ್ಜುನ್ ಬೌಲಿಂಗ್ ಮಾಡಿದ್ದರು. ಈಗ ಅರ್ಜುನ್ ಗೆ ಮುಂಬೈ ಪರ ಆಡಲು ಉತ್ತಮ ಅವಕಾಶ ಲಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Batting legend and former India captain Sachin Tendulkar's son Arjun has been picked up in the Mumbai squad for an under-19 one-day tournament in Baroda.
Please Wait while comments are loading...