ಚಿಗುರಿತೇ ಪ್ರೇಮ! ಕೊಹ್ಲಿ ಜತೆ ಅನುಷ್ಕಾ ಸೀಕ್ರೆಟ್ ಡಿನ್ನರ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 07 : ಸಾಮಾಜಿಕ ಜಾಲ ತಾಣಗಳಲ್ಲಿ ಒಬ್ಬರಿಗೊಬ್ಬರು ಅನ್ ಫ್ರೆಂಡ್ ಮಾಡಿಕೊಂಡು ನಾನೊಂದು ತೀರಾ.. ನೀನೊಂದು ತೀರಾವಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಗೆಳತಿ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮ ಮತ್ತೆ ಜೊತೆ ಜೊತೆಯಲಿ ಪ್ರೀತಿ ಜೊತೆಯಲ್ಲಿ ಎಂದು ಚೈತ್ರದ ಚಿಗುರೊಡೆದ ಮಾಮರದಲ್ಲಿ ಕುಳಿತ ಪ್ರಣಯ ಪಕ್ಷಿಗಳಂತೆ ವಿಹರಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮುಂಬೈನ ಬಾಂದ್ರಾದಲ್ಲಿರುವ ಹಾಕ್ಸನ್ ಕ್ಲಬ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ಆಗಿದ್ದ ಲವ್ ಮತ್ತೆ ಚಿಗುರಿತೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ. ಪ್ರಣಯ ಪಕ್ಷಿಗಳ ಚಿತ್ರ ತೆಗೆದ ಉತ್ಸಾಹಿಗಳು ಮೈತುಂಬಾ ಬ್ಯಾಂಡೇಜ್ ಹಾಕುವಂತೆ ಸಿಕ್ಕಿದ ಕಡೆ ಎಲ್ಲಾ ಕಾಪಿರೈಟ್ ವಾಟರ್ ಮಾರ್ಕ್ ಮೆತ್ತಿದ್ದಾರೆ. [ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]

Anushka Sharma enjoys late night Secret dinner with boyfriend Virat Kohli

ಹೌದು ಹಲವು ದಿನಗಳಿಂದ ಈ ಜೋಡಿಯ ಮಧ್ಯೆ ಬಿರುಕು ಕಾಣಿಸಿಕೊಂಡು ದೂರ ದೂರವಾಗಿದ್ದ ಈ ಪ್ರಣಯ ಪಕ್ಷಿಗಳು ಮತ್ತೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. [ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!]

ಅನುಷ್ಕಾ ಮತ್ತು ವಿರಾಟ್ ಲವ್ ಬ್ರೇಕಪ್ ಆಗಿದೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಜೋಡಿ ಒಂದಾಗಲು ಸಾಧ್ಯವೇ ಇಲ್ಲ ಎಂದು ಹಬ್ಬಿದ್ದ ಗಾಸಿಪ್ ಸುದ್ದಿಗಳಿಗೆ ಬಾಂದ್ರಾದಲ್ಲಿರುವ ಹಾಕ್ಸನ್ ಕ್ಲಬ್ ನಲ್ಲಿ ಕಷ್ಟ-ಸುಖಗಳನ್ನು ಮಾತನಾಡುತ್ತ ಒಟ್ಟಾಗಿ ಡಿನ್ನರ್ ಮಾಡುವ ಮೂಲಕ ತೆರೆ ಎಳೆದಿದ್ದಾರೆ.[ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]

ವಿಶ್ವ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿಗೆ ಗೆಳತಿ ಅನುಷ್ಕಾ ದೂರವಾಣಿ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾಳೆಂಬ ಸುದ್ದಿ ಹರಡಿತ್ತು, ಅಷ್ಟೇ ಅಲ್ಲದೇ ಸಮೀಸ್ ನಲ್ಲಿ ವಿಂಡೀಸ್ ವಿರುದ್ಧ ಪರಭಾವಗೊಂಡ ಹಿನ್ನಲೆಯಲ್ಲಿ ಹತಾಶೆಗೆ ಒಳಗಾಗಿದ್ದ ವಿರಾಟ್ ಗೆ ಫೋನ್ ಮೂಲಕ ಸಮಾಧಾನ ಹೇಳಿದ್ದಾಳಂತೆ.

ಹೀಗೆ ಕದ್ದುಮುಚ್ಚಿ ಒಟ್ಟಿಗೆ ಡಿನ್ನರ್, ಲಂಚ್ ಅಂತ ಕಾಣಿಸಿಕೊಳ್ಳುತ್ತಿರುವ ಈ ಪ್ರಣಯ ಪಕ್ಷಿಗಳ ನಡೆ ಇನ್ನು ನಿಗೂಢವಾಗಿದೆ. ಅದು ಏನೇ ಆಗಲಿ ಇಬ್ಬರು ಒಂದಾಗಲಿ ಎಂಬ ಆಶಯ ಅಭಿಮಾನಿಗಳದ್ದಾಗಿದೆ.

-
-
-
ಚಿಗುರಿತೇ ಪ್ರೇಮ! ಕೊಹ್ಲಿ ಜತೆ ಅನುಷ್ಕಾ ಸೀಕ್ರೆಟ್ ಡಿನ್ನರ್

ಚಿಗುರಿತೇ ಪ್ರೇಮ! ಕೊಹ್ಲಿ ಜತೆ ಅನುಷ್ಕಾ ಸೀಕ್ರೆಟ್ ಡಿನ್ನರ್

-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress Anushka Sharma, who had been busy with the shoot of her upcoming movie Sultan, was spotted enjoying a late night dinner with her boyfriend and Indian Test skipper Virat Kohli at a high end restaurant in Mumbai's upscale Bandra.
Please Wait while comments are loading...