ರಾಜ್‌ಕೋಟ್‌ನಲ್ಲಿ ವಿರಾಟ್ ಜೊತೆ ಮನದನ್ನೆ ಅನುಷ್ಕಾ!

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 05 : ಭಾರತದ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ಮತ್ತು ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಇನ್ನೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರಾ ಅಥವಾ ಮುನಿಸಿಕೊಂಡು ಬೇರೆಬೇರೆಯಾಗಿದ್ದಾರಾ ಎಂಬೆರಡು ಪ್ರಶ್ನೆಗಳಿಗೆ ಡೈಜೆಸ್ಟಿನಲ್ಲಿಯೂ ಉತ್ತರ ಸಿಗುವುದಿಲ್ಲ.

ಯಾವುದೊ ಒಂದು ಸಂದರ್ಭದಲ್ಲಿ ಒಬ್ಬರಿಗೊಬ್ಬರು ಐಸ್ ಕ್ರೀಂ ತಿನ್ನಿಸುತ್ತಿರುವ ಚಿತ್ರ ಪ್ರಕಟವಾದರೆ, ಮತ್ತೊಂದು ಸಂದರ್ಭದಲ್ಲಿ, 'ದಯವಿಟ್ಟು ನಮ್ಮಿಬ್ಬರ ಸಂಬಂಧದ ಪ್ರಶ್ನೆ ಕೇಳಬೇಡಿ, ಇದು ವೈಯಕ್ತಿಕವಾದದ್ದು' ಎಂದು ಇಬ್ಬರಲ್ಲೊಬ್ಬರು ಹೇಳಿಕೆ ನೀಡಿರುತ್ತಾರೆ. ಏನೋ ಒಟ್ಟಿನಲ್ಲಿ ಪ್ರೀತಿಪ್ರೇಮದ ವಿಷಯದಲ್ಲಿ ಇದೆಲ್ಲ ಇದ್ದದ್ದೆ ಬಿಡಿ.

ಇವರಿಬ್ಬರ ಸಂಬಂಧದ ಬಗ್ಗೆ ಅಭಿಮಾನಿಗಳು ನವೆಂಬರ್ 5ರಂದು ಮತ್ತೆ ಗುಸುಗುಸು ಮಾತನಾಡುವಂತಾಗಿದೆ. ಏಕೆಂದರೆ, ಬರ್ತಡೇ ಬಾಯ್ ವಿರಾಟ್ ಕೊಹ್ಲಿಗೆ ಶುಭಾಶಯ ಹೇಳಲು ರಾಜ್ ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂಗೆ ಬಂದಿದ್ದು ಮತ್ತಾರೂ ಅಲ್ಲ, ಅವರ ಮನದನ್ನೆ ಅನುಷ್ಕಾ ಶರ್ಮಾ! [28ರ ಚೆಲುವ ವಿರಾಟ್ ಗೆ ಬರ್ತಡೇ ವಿಷ್ ಮಾಡಿದ್ರಾ?]

Anushka Sharma appears with Virat Kohli at Rajkot

ಇಬ್ಬರಲ್ಲಿಯೂ ಪ್ರೀತಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ ಎಂದು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಗೆ 28ನೇ ಹುಟ್ಟುಹಬ್ಬಕ್ಕೆ ಅದೇನು ಗಿಫ್ಟ್ ಕೊಟ್ಟರು, ಪ್ರತಿಯಾಗಿ ವಿರಾಟ್ ಅನುಷ್ಕಾಗೇನು ಕೊಟ್ಟರು ಇನ್ನೂ ತಿಳಿದುಬಂದಿಲ್ಲ. ಅದು ಅಭಿಮಾನಿಗಳ ಊಹೆಗೆ ಬಿಟ್ಟಿದ್ದು. ನೀರಿನಲ್ಲಿ ಅಲೆಯ ಉಂಗುರ....

ಅಂದ ಹಾಗೆ, ವಿರಾಟ್ ಕೊಹ್ಲಿ ಅವರ ಪ್ರೇಯಸಿಯ ಹೆಸರೇನು, ಬಿಟ್ಟಸ್ಥಳ ತುಂಬಿರಿ ಎಂಬ ಅಪರೂಪದ ಪ್ರಶ್ನೆಯೊಂದನ್ನು ಮಹಾರಾಷ್ಟ್ರದ ಚಾಚಾ ನೆಹರೂ ಹಿಂದಿ ಪ್ರೌಢ ಶಾಲೆ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತಂತೆ. ಪಡ್ಡೆ ಹೈಕ್ಳುಗಳು ಏನು ಉತ್ತರ ಬರೆದರೋ? [ಕೊಹ್ಲಿ ಗರ್ಲ್ ಫ್ರೆಂಡ್ ಯಾರು? ಹೀಗೆಂದು 9ನೇ ಕ್ಲಾಸ್ ಪರೀಕ್ಷೆಯಲ್ಲಿ ಪ್ರಶ್ನೆ]

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ರಾಜ್ ಕೋಟ್ ನಲ್ಲಿ ನವೆಂಬರ್ 9ರಿಂದ ಆರಂಭವಾಗುತ್ತಿದೆ. ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿರುವ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವ ಹುಮ್ಮಸ್ಸಿನಲ್ಲಿದೆ. [ಪ್ರೇಗ್ ನಲ್ಲಿ ಇದೇನಿದು ಕೊಹ್ಲಿ ಪಕ್ಕದಲ್ಲಿ ಅನುಷ್ಕಾ ಇಲ್ಲ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood actress Anushka Sharma has appeared with cricketer, Indian test team captain Virat Kohli at Rajkot cricket stadium. What gift did Anushka give to Virat on his 28th birthday? What Virat give to Anushka in return? Guess...
Please Wait while comments are loading...