ವಿರಾಟ್-ಅನುಷ್ಕಾ ಬೆಸುಗೆಗೆ ಬೆಂಗಳೂರು ಸಾಕ್ಷಿ!

Written By:
Subscribe to Oneindia Kannada

ಬೆ೦ಗಳೂರು, ಮೇ 21: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಡುವೆ ಮತ್ತೆ ಪ್ರೀತಿ ಹುಟ್ಟಿದೆಯೇ? ಎದ್ದಿದ್ದ ಎಲ್ಲ ಗೊಂದಲಗಳಿಗೆ ಮುಕ್ತಾಯ ಸಿಕ್ಕಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ.

ವಿರಾಟ್ ಮತ್ತು ಅನುಷ್ಕಾ ಭೇಟಿಗೆ ವೇದಿಕೆಯಾಗಿದ್ದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಎನ್ನುವುದು ಮತ್ತೊಂದು ವಿಶೇಷ. ಕಳೆದ ವಾರ ಗುಜರಾತ್ ಲಯನ್ಸ್ ತಂಡದ ವಿರುದ್ಧ ಆರ್ ಸಿ ಬಿ ಗೆದ್ದು ಬೀಗಿದ ನಂತರದ ಘಟನಾವಳಿಗಳು ಇಬ್ಬರ ಅಭಿಮಾನಿಗಳಲ್ಲಿ ಹೊಸ ಪುಳಕ ತಂದಿದೆ.[ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ]

cricket

ಕೊಹ್ಲಿ ಮತ್ತು ಅನುಷ್ಕಾ ಬೆ೦ಗಳೂರಿನ ಜಪಾನಿ ರೆಸ್ಟೋರೆ೦ಟ್ "ಇಡೋ'ದಲ್ಲಿ ಔತಣಕೂಟವೊಂದರಲ್ಲಿ ಪಾಲ್ಗೊ೦ಡು ಸಂಭ್ರಮ ಆಚರಿಸಿದ್ದಾರೆ ಎನ್ನುವುದು ಪಕ್ಕಾ ಸುದ್ದಿ. ಹೋಟೆಲ್ ನ ಮುಖ್ಯ ಅಡುಗೆಯವರೊಂದಿಗೆ ಜತೆಯಾಗಿ ತೆಗೆಸಿಕೊಂಡ ಫೋಟೋದಲ್ಲಿ ಇಬ್ಬರು ಜತೆಯಾಗಿದ್ದಾರೆ. ಇದೀಗ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಪ್ರೇಮಿಗಳು ಒಂದಾಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.[ವಿರಾಟ್-ಅನುಷ್ಕಾರನ್ನು ಮತ್ತೆ ಒಂದು ಮಾಡಿದ್ದು ಯಾರು?]

ಇದೆಲ್ಲದರ ನಡುವೆ ರನ್ ಸರದಾರ ಕೊಹ್ಲಿ ಇನ್ ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಅನುಷ್ಕಾರನ್ನು ಮತ್ತೆ ಫಾಲೋ ಮಾಡಲು ಆರಂಭಿಸಿರುವುದು ಹೊಸ ಹಾಡು ಗುನುಗುವಂತೆ ಮಾಡಿದೆ. ಆದರೆ ಕೊಹ್ಲಿ ಮತ್ತು ಅನುಷ್ಕಾ ಈ ಬಗ್ಗೆ ಯಾವ ಸ್ಪಷ್ಟನೆಯನ್ನು ನೀಡಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Virat Kohli is rocking the ongoing IPL season of Indian Premium League with back to back centuries. And it looks like the see-saw relationship between girlfriend Anushka Sharma and the cricketer is finally stable. After the recent win of Virat's team Royal Challengers Bangalore over Gujarat Lions on May 14th, the B-Town couple was spotted at a restaurant for a celebratory dinner. Here is the full details.
Please Wait while comments are loading...