ಎಂಎಸ್ ಧೋನಿ ಈಗ 9000ರನ್ ಗಳ ಸರದಾರ

Posted By:
Subscribe to Oneindia Kannada

ಮೊಹಾಲಿ, ಅಕ್ಟೋಬರ್ 24: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ಧೋನಿ ಅವರು ವೃತ್ತಿ ಬದುಕಿನಲ್ಲಿ 9,000ರನ್ ಗಡಿ ದಾಟಿದರು. ಈ ಮೂಲಕ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡರು.

ನ್ಯೂಜಿಲೆಂಡ್ ತಂಡದ ವಿರುದ್ಧ ಅಕ್ಟೋಬರ್ 23ರಂದು ನಡೆದ ಪಂದ್ಯದಲ್ಲಿ ಮಿಚೆಲ್ ಸಾಂಟ್ನರ್ ಅವರ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ 9,000 ರನ್ ಗಡಿ ದಾಟಿದರು. 35 ವರ್ಷ ವಯಸ್ಸಿನ ಧೋನಿ ಅವರು ಈ ಪಂದ್ಯಕ್ಕೂ ಮುನ್ನ 22ರನ್ ಗಳಿಸಿದ್ದರೆ ಸಾಕಿತ್ತು.[ಸಚಿನ್ 'ಸಿಕ್ಸರ್' ದಾಖಲೆ ಮುರಿದ ಕ್ಯಾಪ್ಟನ್ ಎಂಎಸ್ ಧೋನಿ]

ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಧೋನಿ ಅವರು 280 ಏಕದಿನ ಪಂದ್ಯಗಳಲ್ಲಿ 8978ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಅದ್ಭುತ ಆಟ ಪ್ರದರ್ಶಿಸಿದರು. 9 ಶತಕ ಹಾಗೂ 60 ಅರ್ಧಶತಕ ಬಾರಿಸಿದ್ದಾರೆ.[ಕೊಹ್ಲಿ ಭರ್ಜರಿ ಶತಕ, ಧೋನಿ ಜತೆಯಾಟಕ್ಕೆ ಶರಣಾದ ಕಿವೀಸ್]

Another milestone: MS Dhoni completes 9,000 ODI runs

ವಿಕೆಟ್ ಕೀಪರ್ ಬ್ಯಾಟ್ಸ್ ಮನ್: ಕುಮಾರ್ ಸಂಗಕ್ಕಾರ (13,341 ರನ್) ಹಾಗೂ ಆಡಂ ಗಿಲ್ ಕ್ರಿಸ್ಟ್ (9410 ರನ್) ನಂತರದ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ.[ಕೊಹ್ಲಿ ಭರ್ಜರಿ ಶತಕ, ಧೋನಿ ಜತೆಯಾಟಕ್ಕೆ ಶರಣಾದ ಕಿವೀಸ್]

ನಾಯಕನಾಗಿ ಸಿಕ್ಸರ್ : 124ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ನಾಯಕನಾಗಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ್ದ ರಿಕಿ ಪಾಂಟಿಂಗ್ (123) ದಾಖಲೆ ಮುರಿದರು.[ವಿಶ್ವದಾಖಲೆ ಬರೆದ ಧೋನಿ 'ಮಿಂಚಿನ ಸ್ಟಂಪಿಂಗ್' ಸೂಪರ್ !]

ಡಿಸೆಂಬರ್ 23, 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್ ನಲ್ಲಿ ಏಕದಿನ ಕ್ರಿಕೆಟ್ ವೃತ್ತಿ ಬದುಕು ಆರಂಭಿಸಿದ ಧೋನಿ ಅವರು ಮೊದಲ ಪಂದ್ಯದಲ್ಲಿ 1 ರನ್ ಗಳಿಸಿ ರನೌಟ್ ಆಗಿದ್ದರು.[ಸ್ಟಾರ್ ಕ್ರಿಕೆಟರ್ಸ್ ನಿಂದ ಅಮ್ಮನಿಗಾಗಿ ವಿಡಿಯೋ]

ಭಾರತದ ಪರ 9,000ಕ್ಕೂ ಅಧಿಕ ರನ್ ಗಳಿಸಿದವರು: ಸಚಿನ್ ತೆಂಡೂಲ್ಕರ್ , ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ಮೊಹಮ್ಮದ್ ಅಜರುದ್ದೀನ್. ಒಟ್ಟಾರೆ ಈ ಗಡಿ ದಾಟಿದ ವಿಶ್ವದ 17ನೇ ಬ್ಯಾಟ್ಸ್ ಮನ್ ಎಂಬ ಗರಿಮೆ ಧೋನಿಗೆ ಸಂದಿದೆ.

ಟಾಪ್ 5 ಭಾರತೀಯ ಬ್ಯಾಟ್ಸ್ ಮನ್ ಗಳು []

1. ಸಚಿನ್ ತೆಂಡೂಲ್ಕರ್ 18,426 ರನ್ ಗಳು (463 ಪಂದ್ಯಗಳು)
2. ಸೌರವ್ ಗಂಗೂಲಿ- 11,363(311)[ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್']
3. ರಾಹುಲ್ ದ್ರಾವಿಡ್- 10,889(344)
4.ಮೊಹಮ್ಮದ್ ಅಜರುದ್ದೀನ್ -9,378(334)
5. ಎಂಎಸ್ ಧೋನಿ-9,002(281)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's limited overs captain Mahendra Singh Dhoni achieved another major milestone in One Day Internationals on Sunday (October 23) against New Zealand at the IS Bindra Stadium in Mohali.
Please Wait while comments are loading...