ಕುಂಬ್ಳೆ ಹುಟ್ಟುಹಬ್ಬ: ಕರ್ನಾಟಕದ ಕಲಿ ಬಗ್ಗೆ ವಿಶೇಷ ಸಂಗತಿಗಳು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 17: ಕ್ರಿಕೆಟ್ ಲೋಕ ಕಂಡ ಅದ್ಭುತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಗೆ ಇಂದು(ಅಕ್ಟೋಬರ್ 17) ಜನ್ಮದಿನದ ಸಂಭ್ರಮ. ಕರ್ನಾಟಕದ ಹೆಮ್ಮೆಯ ಪುತ್ರ ಅನಿಲ್ ಕುಂಬ್ಳೆ ಅವರ 46ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಅವರಿಗೆ ಶುಭಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

ಕರ್ನಾಟಕ ಅನಿಲ್ ಕುಂಬ್ಳೆ ಅವರು ಭಾರತ ಪರ ಲೆಗ್ ಸ್ಪಿನ್ನರ್ ಆಗಿ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಅತ್ಯಧಿಕ ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ.[46ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ!]

2014ರಲ್ಲಿ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಕುಂಬ್ಳೆ ಅವರು ತಮಗೆ 'ಜಂಬೋ' ಎಂಬ ಹೆಸರು ಯಾರು ನೀಡಿದರು ಎಂಬುದನ್ನು ಬಹಿರಂಗ ಪಡಿಸಿದರು. ಇರಾನಿ ಟ್ರೋಫಿ ಪಂದ್ಯದ ವೇಳೆ ನವಜ್ಯೋತ್ ಸಿಂಗ್ ಸಿಧು ಅವರು ಕುಂಬ್ಳೆ ಅವರ ಎಸೆತಗಳನ್ನು ನೋಡಿ ಈ ಆಪ್ತ ಹೆಸರು ಕೊಟ್ಟಿದ್ದಂತೆ.

18 ವರ್ಷಗಳ ವೃತ್ತಿ ಬದುಕಿನಲ್ಲಿ 619 ಟೆಸ್ಟ್ ಹಾಗೂ 337 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ವಿಕೆಟ್ ಗಳನ್ನು ಗಳಿಸಿದ್ದಾರೆ. ಸದ್ಯ ಟೀಂ ಇಂಡಿಯಾದ ಕೋಚ್ ಆಗಿ ಹೊಸ ಇನ್ನಿಂಗ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳಿಸಿದ ಕುಂಬ್ಳೆ ಕುರಿತ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ...

ಕ್ರಿಕೆಟ್‌ ಜಗತ್ತಿಗೆ ಅನಿಲ್ ಕುಂಬ್ಳೆ ಎಂಟ್ರಿ

ಕ್ರಿಕೆಟ್‌ ಜಗತ್ತಿಗೆ ಅನಿಲ್ ಕುಂಬ್ಳೆ ಎಂಟ್ರಿ

ಅಕ್ಟೋಬರ್ 17, 1970 ಜನಿಸಿದ ಕುಂಬ್ಳೆ ಅವರು. ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕುಂಬ್ಳೆ ಎಂಟ್ರಿ ಮಾಡಿದ್ದು ಏಪ್ರಿಲ್ 25, 1990ರಂದು ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ನಲ್ಲಿ, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಆದರೆ, ಕುಂಬ್ಳೆ ಎಂಟ್ರಿ ಅದ್ಭುತವಾಗಿರಲಿಲ್ಲ.

ಎರಡನೇ ಪ್ರಯತ್ನದಲ್ಲಿ ಯಶಸ್ಸು

ಎರಡನೇ ಪ್ರಯತ್ನದಲ್ಲಿ ಯಶಸ್ಸು

ಕುಂಬ್ಳೆ ಅವರು ತಂಡದಿಂದ ಹೊರಕ್ಕೆ ಹೊರ ಬಂದ ನಂತರ ದೇಸಿ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಆಯ್ಕೆ ದಾರರ ಗಮನ ಸೆಳೆದರು. ರೆಸ್ಟ್ ಆಫ್ ಇಂಡಿಯಾ ವಿರುದ್ಧ 13/138 ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲೇ ಇಲ್ಲ. 18 ವರ್ಷಗಳ ಕಾಲ ವೃತ್ತಿ ಬದುಕು ಕಂಡುಕೊಂಡರು.

ಸುಶಿಕ್ಷಿತ, ಸಂಭಾವಿತ ಕ್ರಿಕೆಟರ್

ಸುಶಿಕ್ಷಿತ, ಸಂಭಾವಿತ ಕ್ರಿಕೆಟರ್

ಸಭ್ಯರ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ ನಲ್ಲಿ ಉತ್ತಮ ಪ್ರತಿಭೆ ಜತೆಗೆ ವಿದ್ಯೆಯ ಬಲ ಇರುವವರು ತೀರಾ ಕಡಿಮೆ. ಆದರೆ, ಕುಂಬ್ಳೆ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ. ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಕುಂಬ್ಳೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ದಾರಿ, ಐಸಿಸಿ ಕ್ರಿಕೆಟ್ ಕಮಿಟಿ ಕ್ರಿಕೆಟ್ ಸಮಿತಿಯ ಚೇರ್ಮನ್ ಆಗಿ ಸಮರ್ಥರಾಗಿ ಕಾರ್ಯನಿರ್ವಹಿಸಿದ್ದರು.

10 ವಿಕೆಟ್ ಕಿತ್ತ ಮೊದಲ ಭಾರತೀಯ

10 ವಿಕೆಟ್ ಕಿತ್ತ ಮೊದಲ ಭಾರತೀಯ

ಫೆಬ್ರವರಿ 7, 1999ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 26.3-9-74-10 ಅದ್ಭುತ ಸ್ಪೆಲ್ ಮಾಡಿ ಭಾರತಕ್ಕೆ 212ರನ್ ಗಳ ಬೃಹತ್ ಜಯ ತಂದಿತ್ತಿದ್ದರು. ಈ ರೀತಿ ಅದ್ಭುತವೊಂದು ಕ್ರಿಕೆಟ್ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ನಡೆದಿದ್ದು, ಈ ಹಿಂದೆ ಇಂಗ್ಲೆಂಡಿನ ಜಿಮ್ ಲೇಕರ್ ಅವರು ಈ ಸಾಧನೆ ಮಾಡಿದ್ದರು.

2000ರನ್ ಹಾಗು 500 ಪ್ಲಸ್ ವಿಕೆಟ್

2000ರನ್ ಹಾಗು 500 ಪ್ಲಸ್ ವಿಕೆಟ್

ಆಸ್ಟ್ರೇಲಿಯಾದ ಶೇನ್ ವಾರ್ನ್ ಬಿಟ್ಟರೆ 2000 ಟೆಸ್ಟ್ ರನ್ ಹಾಗೂ 500 ಪ್ಲಸ್ ವಿಕೆಟ್ ಹೊಂದಿರುವ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. 132 ಪಂದ್ಯಗಳಿಂದ 619 ವಿಕೆಟ್ ಕಿತ್ತಿದ್ದಾರೆ.ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ಮೂರನೆಯವರು.

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್

ಭಾರತದ ಪರ 271 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 337 ವಿಕೆಟ್ ಗಳನ್ನು ಪಡೆದಿರುವ ಕುಂಬ್ಳೆ ಅವರು ಹೊಸ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 6/12 ಇವರ ಶ್ರೇಷ್ಠ ಬೌಲಿಂಗ್. ಇತ್ತೀಚೆಗೆ ಈ ಸಾಧನೆಯನ್ನು ಸ್ಟುವರ್ಟ್ ಬಿನ್ನಿ ಸರಿಗಟ್ಟಿದ್ದರು.

1999- ಕುಂಬ್ಳೆ ಪಾಲಿಗೆ ಸಂತಸ ವರ್ಷ 88 ವಿಕೆಟ್ ಗಳಿಸಿದರು. ಶೇನ್ ವಾರ್ನ್, ಗ್ಲೆನ್ ಮೆಗ್ರಾ ಅವರ ನಂತರ ಈ ಸಾಧನೆ ಮಾಡಿದವರು ಕುಂಬ್ಳೆ

ಅತಿ ಹೆಚ್ಚು ಕಾಟ್ ಅಂಡ್ ಬೌಲ್ಡ್ ಪಡೆದ ಬೌಲರ್

ಅತಿ ಹೆಚ್ಚು ಕಾಟ್ ಅಂಡ್ ಬೌಲ್ಡ್ ಪಡೆದ ಬೌಲರ್

ಕಾಟ್ ಅಂಡ್ ಬೌಲ್ಡ್ 35 ಹಾಗೂ ಎಲ್ ಬಿ ಮೂಲಕ ಹೆಚ್ಚು ವಿಕೆಟ್ ಪಡೆದ ಸಾಧನೆ ಕುಂಬ್ಳೆ ಅವರದ್ದು, ಶಾರ್ಜಾ ಮೈದಾನದಲ್ಲಿ 56 ವಿಕೆಟ್ ಪಡೆದಿದ್ದು, ಇದು ಮೈದಾನವೊಂದರಲ್ಲಿ ಬೌಲರ್ ಒಬ್ಬರ ದೊಡ್ಡ ಸಾಧನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
As legendary India spinner and former captain Anil Kumble is celebrating his 46th birthday on Monday (October 17), several former India cricketers greeted him
Please Wait while comments are loading...