ಕುಂಬ್ಳೆ ಹಾಗೂ ಕ್ರಿಕೆಟರ್ಸ್ ಜೂನ್ ಸಂಬಳ ವಿವರ ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಜುಲೈ 18:ಜೂನ್ ತಿಂಗಳಿನಲ್ಲಿ ಟೀಂ ಇಂಡಿಯಾದ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳು ಪಡೆದ ವೇತನದ ವಿವರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ(ಜುಲೈ 18) ಪ್ರಕಟಿಸಿದೆ.

ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರಿಗೆ 48 ಲಕ್ಷ ರು ಹಾಗೂ ರೋಹಿತ್ ಶರ್ಮ ಗೆ 1.12 ಕೋಟಿ ರು ಲಭಿಸಿದೆ. ಆಟಗಾರರು ಹಾಗೂ ಸಿಬ್ಬಂದಿಗೆ ಜೂನ್ 2017ರಲ್ಲಿ ನೀಡಲಾದ ವೇತನ ವಿವರ(25 ಲಕ್ಷರುಗೂ ಮೇಲ್ಪಟ್ಟ) ಎಂಬ ಶೀರ್ಷಿಕೆಯಡಿಯಲ್ಲಿ ವೆಬ್ ಸೈಟ್ ನಲ್ಲಿ ಬಿಸಿಸಿಐ ವಿವರಗಳನ್ನು ನೀಡಿದೆ.

ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರಿಗೆ 4,875,000 ರು ನೀಡಲಾಗಿದೆ. ಇದು ಏಪ್ರಿಲ್ ತಿಂಗಳ ವೇತನವಾಗಿದೆ. ಒಂದು ವರ್ಷಗಳ ಕಾಲ ಕೋಚ್ ಆಗಿ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, 6.25 ಕೋಟಿ ರು ಸರಾಸರಿಯಂತೆ ಸಂಬಳ ನೀಡಲಾಗುತ್ತಿತ್ತು ಎಂದು ಬಿಸಿಸಿಐ ಹೇಳಿದೆ. ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಹಾಗೂ ಅರ್ ಅಶ್ವಿನ್ ಅವರು ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ.

ರೋಹಿತ್, ಅಜಿಂಕ್ಯಗೆ

ರೋಹಿತ್, ಅಜಿಂಕ್ಯಗೆ

ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಅವರು 1.12 ಕೋಟಿ ರು ಒಟ್ಟಾರೆ ಮೊತ್ತ ಸಿಕ್ಕಿದೆ. 2015-16ರ ಬಾಕಿ ಮೊತ್ತ ಈಗ ಲಭಿಸಿದೆ. ಇದೆಲ್ಲವೂ ವಿದೇಶದಲ್ಲಿ ಭಾರತದ ಪರ ಆಡಿದ್ದಕ್ಕೆ ಸಿಕ್ಕಿರುವ ವೇತನವಾಗಿದೆ.

ಇದೇ ಅವಧಿಗೆ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಅವರಿಗೆ 1.10 ಕೋಟಿ ರು ನಿವ್ವಳ ಆದಾಯ ಹಾಗೂ ರವಿಚಂದ್ರನ್ ಅಶ್ವಿನ್ ಗೆ 1.01 ಕೋಟಿ ರು ಲಭಿಸಿದೆ.

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ : Rs 4,875,000
ಮನೀಶ್ ಪಾಂಡೆ: Rs 2,970,112 : ಭಾರತದಲ್ಲಿ ಹಾಗೂ ವಿದೇಶದಲ್ಲಿ
2015-16 ಅವಧಿಯಲ್ಲಿ ಆಡಿದ್ದಕ್ಕೆ ಸಿಕ್ಕಿರುವ ವೇತನ.
ಸುರೇಶ್ ರೈನಾ: Rs 3,282,757 - ನಿವ್ವಳ ಆದಾಯದ ಪಾಲು
ಅಮಿತ್ ಮಿಶ್ರಾ: Rs 4,220,689 - ನಿವ್ವಳ ಆದಾಯದ ಪಾಲು

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಮಿಶ್ರಾ : Rs 3,212,059 - Taxable portion
ಭುವನೇಶ್ವರ್: Rs 2,865,659 - Taxable portion of ICC & BCCI Test Ranking prize money
ಭುವನೇಶ್ವರ್ ಕುಮಾರ್ : Rs 6,799,997 - Share of gross revenue
ರೋಹಿತ್ ಶರ್ಮ: Rs 11,255,167 - Share of gross revenue
ಉಮೇಶ್ ಯಾದವ್: Rs 8,363,214 - Share of gross revenue

Finally Anil Kumble Quits Team India Head Coach | Oneindia Kannada
ಆರ್ ಅಶ್ವಿನ್

ಆರ್ ಅಶ್ವಿನ್

ರವಿಚಂದ್ರನ್ ಅಶ್ವಿನ್: - 3,479,729 - Taxable portion
ಮುರಳಿ ವಿಜಯ್ : 3,479,729 - Taxable portion
ಅಶ್ವಿನ್: Rs 10,160,915 - Share of gross revenue
ಕೆಎಲ್ ರಾಹುಲ್: Rs 4,220,689 - Share of gross revenue
ಅಜಿಂಕ್ಯ ರಹಾನೆ: Rs 11,098,846 - Share of gross revenue

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) has today (July 18) put out the details of payments made to cricketers and others during the month of June, 2017.
Please Wait while comments are loading...