ಟೀಂ ಇಂಡಿಯಾದ ಆಟಗಾರರಿಗೆ 'ದಂಡ' ಹಾಕುವ ಕುಂಬ್ಳೆ ಮೆಷ್ಟ್ರು

Posted By:
Subscribe to Oneindia Kannada

ಬೆಂಗಳೂರು, ಜುಲೈ 13: ಟೀಂ ಇಂಡಿಯಾ ಆಟಗಾರರಿಗೆ ಗುರು ಅನಿಲ್ ಕುಂಬ್ಳೆ ಅವರಿಂದ ಶಿಸ್ತು, ಸಮಯ ಪಾಲನೆ ಪಾಠ ಸಿಗುತ್ತಿದೆ. ಮೈದಾನದ ಒಳಗೂ ಹೊರಗೂ ತಡವಾಗಿ ಬರುವ ಆಟಗಾರರಿಗೆ ದಂಡ ಕೂಡಾ ಹಾಕುತ್ತಿದ್ದಾರೆ.

ತಂಡದ ಬಸ್​ಗೆ ತಡವಾಗಿ ಬರುವವರು 50 ಡಾಲರ್ ದಂಡ ಪಾವತಿಸಬೇಕು ಎಂದು ಆಟಗಾರರಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕಂಬ್ಳೆ ಅವರು ಸೂಚಿಸಿದ್ದಾರೆ. ಕುಂಬ್ಳೆ ಅವರು ತಮ್ಮ ವೃತ್ತಿ ಬದುಕಿನಲ್ಲಿ ಎಂಥಾ ಶಿಸ್ತಿನ ಸಿಪಾಯಿ ಆಗಿದ್ದರು. ಗಾಯಗೊಂಡರೂ ಮೈದಾನಕ್ಕಿಳಿದು ಹೇಗೆ ಆಟವಾಡಿದರು ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಈಗ ಕುಂಬ್ಳೆ ಅವರು ಕೋಚ್ ಆದ ಮೇಲೆ ಹೊಸ 'ರೂಲ್ ಬುಕ್' ಸಿದ್ಧಮಾಡಿದ್ದಾರೆ.[ಕುಂಬ್ಳೆಗೆ 'ಜಂಬೋ' ಎಂಬ ಅಡ್ಡಹೆಸರು ನೀಡಿದ್ದು ಯಾರು?]

ಶಿಸ್ತಿನ ಪಾಠ :
ತಂಡದ ಅಧಿಕೃತ ಸಭೆ ನಾಲ್ಕು ದಿನಗಳಿಗೆ ಒಂದು ಸಲ ನಡೆಯುತ್ತದೆ. ತಂಡದ ಯಾವುದೇ ಆಟಗಾರ ಮಾತುಕತೆ ನಡೆಸಲು ಯಾವಾಗ ಬೇಕಾದರೂ ಬರಬಹುದು ಎಂದು ಆಟಗಾರರಿಗೆ ಸೂಚಿಸಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಯುವ ಆಟಗಾರರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವುದರ ಬಗ್ಗೆ ಮೊದಲ ಸಭೆಯಲ್ಲೇ ಪಾಠ ಸಿಕ್ಕಿದೆ.[ಕೋಚ್ ಕುಂಬ್ಳೆ ಕನ್ನಡದಲ್ಲಿ ಉತ್ತರಿಸಿದಾಗ]

'Jumbo' fine: Anil Kumble introduces $50 penalty for late-coming Team India players

ನ್ನೇ ಹೊಂದಿರುವ ಭಾರತ ತಂಡಕ್ಕೆ ಕುಂಬ್ಳೆ ತಮ್ಮ ಮೊದಲ ಸಭೆಯಲ್ಲೇ ಶಿಸ್ತಿನ ಪಾಠ ಹೇಳಿದ್ದಾರೆ. ಜತೆಗೆ ತಂಡದ ಸಹಾಯಕ ಸಿಬ್ಬಂದಿಯ ಕೆಲಸ ಕಾರ್ಯಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ಗೆ ತೆರಳುವ ಮುನ್ನ ಅನಿಲ್ ಕುಂಬ್ಳೆ ಅವರು ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಸಂದೀಪ್ ಪಾಟೀಲ್ ಮತ್ತು ವೆಂಕಟೇಶ್ ಪ್ರಸಾದ್ ಅವರ ಜೊತೆಗೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದನ್ನು ಸ್ಮರಿಸಬಹುದು. ಜುಲೈ 21ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.[ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ಕುಂಬ್ಳೆ ಹೊಗಳಿದ ಸಚಿನ್: ಲಂಡನ್ನಿನಲ್ಲಿ ಮಾತನಾಡಿದ ಸಚಿನ್, ಕುಂಬ್ಳೆ ಅವರೊಬ್ಬ ಹೋರಾಟಗಾರ, ಕಠಿಣ ಪರಿಶ್ರಮ ಅವರಲ್ಲಿ ತಕ್ಷಣಕ್ಕೆ ಗುರುತಿಸಬಹುದು. 20 ವರ್ಷಗಳ ಅನುಭವವನ್ನು ಯುವ ಕ್ರಿಕೆಟರ್ಸ್ ಗಳಿಗೆ ಧಾರೆ ಎರೆಯಲಿದ್ದಾರೆ. ಮ್ಯಾಚ್ ವಿನ್ನರ್ ಕುಂಬ್ಳೆ ಅವರು ಕ್ರಿಕೆಟ್ ನ ಪ್ರತಿಕ್ಷಣವನ್ನು ಅನಂದಿಸುತ್ತಾರೆ ಅವರಿಂದ ಹೆಚ್ಚಿನ ಯಶಸ್ಸು ನಿರೀಕ್ಷಿಸಬಹುದು ಎಂದಿದ್ದಾರೆ,[ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When Anil Kumble played the game, he had an impeccable record. He was known for his discipline on and off the field. Now as the head coach of Team India, he wants the players to follow the same principles. For that, he has his own rulebook.
Please Wait while comments are loading...