ಅನಿಲ್ ಕುಂಬ್ಳೆ = ಶಿಸ್ತು, ಸಂಕಲ್ಪ, ಬದ್ಧತೆ, ಹೋರಾಟ

Written By:
Subscribe to Oneindia Kannada

ಬೆಂಗಳೂರು, ಜೂನ್ 23: ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಭಾರತ ತಂಡಕ್ಕೆ ಇನ್ನು ಮುಂದೆ ಮೇಸ್ಟ್ರು. ಕೀಟಲೆ ಮಾಡುವ ಹುಡುಗರನ್ನು ಸರಿದಾರಿಗೆ ತಂದು ತಂಡಕ್ಕೆ ಜಯದ ಉತ್ಸಾಹವನ್ನು ಸದಾ ನೀಡುವ ಜವಾಬ್ದಾರಿ ಕುಂಬ್ಳೆ ಹೇಗಲೇರಿದೆ.

ಕ್ರಿಕೆಟ್ ತಂಡದ ಹನ್ನೊಂದು ಜನರೊಂದಿಗೆ ದೇಶದ ನೂರಾರು ಕೋಟಿ ಜನರ ಭಾವನೆಗಳ ಪ್ರತೀಕವಾಗಿ ಕುಂಬ್ಳೆ ನಿಲ್ಲುತ್ತಾರೆ. ಅನಿಲ್ ಕುಂಬ್ಳೆ ಎಂದ ತಕ್ಷಣ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಕಿತ್ತ ಸಾಧನೆ, ತಲೆಗೆ ಬ್ಯಾಂಡೇಜ್ ಸುತ್ತಿಕೊಂಡು ವೆಸ್ಟ್ ಇಂಡೀಸ್ ವಿರುದ್ಧ ನಿರಂತರ ಬೌಲ್ ಎಸೆದ ಸ್ಪಿನ್ ಮೋಡಿ, ಗೂಗ್ಲಿ ... ಕಣ್ಣ ಮುಂದೆ ಬಂದು ನಿಲ್ಲುತ್ತವೆ.[ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ಆದರೆ ಇಂದು ಕುಂಬ್ಳೆ ಅಂಗಣದಲ್ಲಿ ಇರಲ್ಲ. ಬದಲಾಗಿ ಅಂಗಣದ ಹೊರಕ್ಕೆ ನಿಂತು ಆಟಗಾರಿಗೆ ತರಬೇತಿ ನೀಡಲಿದ್ದಾರೆ. ಟೀಂ ಇಂಡಿಯಾದ ಮತ್ತೊಮ್ಮೆ ಹಳೆ ಯುಗ ಪ್ರವೇಶ ಮಾಡುವಂತೆ ಕಾಣುತ್ತಿದೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಅತ್ಯುತ್ತಮ ನಾಯಕ ಸೌರವ್ ಗಂಗೂಲಿ, ಗೋಡೆ ರಾಹುಲ್ ದ್ರಾವಿಡ್, ಕಲಾತ್ಮಕತೆಯ ಮತ್ತೊಂದು ಹೆಸರು ವಿವಿಎಸ್ ಲಕ್ಷಣ್ ಜತೆಗೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಇನ್ನು ಮುಂದೆ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ನಿಲ್ಲಲಿದ್ದಾರೆ.[ಎಬಿ ಡಿವಿಲಿಯರ್ಸ್ ಬಗ್ಗೆ ಗೊತ್ತಿಲ್ಲದ ಸಂಗತಿಗಳಿವು]

ಕನ್ನಡಿಗ ಅನಿಲ್ ಕುಂಬ್ಳೆ ಕ್ರಿಕೆಟ್ ಲೋಕದ ಸಾಧನೆ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಆದರೂ ಈ 5 ಅಂಶಗಳನ್ನು ಒಮ್ಮೆ ಮೆಲುಕು ಹಾಕಿದರೆ ಕ್ರಿಕೆಟ್ ಪ್ರೇಮಿಗೆ ಪುಳಕ ಸಿಗುವುದರಲ್ಲಿ ಅನುಮಾನವಿಲ್ಲ.

ಹತ್ತಕ್ಕೆ ಹತ್ತು

ಹತ್ತಕ್ಕೆ ಹತ್ತು

ದೆಹಲಿಯ ಫೀರೋಜ್ ಷಾ ಕೊಟ್ಲಾ ಮೈದಾನದಲ್ಲಿ ಫೆಬ್ರವರಿ 7, 1999 ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಾಖಲೆ ನಿರ್ಮಾಣವಾಗಿತ್ತು.74 ರನ್ ನೀಡಿದ ಅನಿಲ್ ಕುಂಬ್ಳೆ ಪಾಕಿಸ್ತಾನದ 10ಕ್ಕೆ 10 ವಿಕೆಟ್ ಗಳನ್ನು ಕಬಳಿಸಿ ದಾಖಲೆ ಬರೆದರು.

 ತಲೆಗೆ ಬ್ಯಾಂಡೇಜ್

ತಲೆಗೆ ಬ್ಯಾಂಡೇಜ್

ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ಕುಂಬ್ಳೆ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಮೈದಾನಕ್ಕೆ ಇಳಿದಿದ್ದರು. 14 ಓವರ್ ಗಳನ್ನು ಎಸೆದ ಕುಂಬ್ಳೆ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ವಿಕೆಟ್ ಸಹ ಕಬಳಿಸಿದ್ದರು. ಇದು 2002ರ ಘಟನೆ.

ಹಿರೋ ಕಪ್

ಹಿರೋ ಕಪ್

ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀರೋ ಕಪ್ ಫೈನಲ್ ಪಂದ್ಯ. 12 ರನ್ ನೀಡಿ ವೆಸ್ಟ್ ಇಂಡೀಸ್ ನ ಆರು ವಿಕೆಟ್ ಕಿತ್ತ ಕುಂಬ್ಳೆ ಭಾರತಕ್ಕೆ 102 ರನ್ ಜಯ ತಂದಿಟ್ಟರು.(1993, ನವೆಂಬರ್ 27)

ಬ್ಯಾಟ್ ಬೀಸಿದ ಕುಂಬ್ಳೆ

ಬ್ಯಾಟ್ ಬೀಸಿದ ಕುಂಬ್ಳೆ

2007ರಲ್ಲಿ ಕುಂಬ್ಳೆ ತಮ್ಮ ಟೆಸ್ಟ್ ಜೀವನದ ಶತಕ ದಾಖಲಿಸಿದರು. ಇಂಗ್ಲೆಂಡ್ ನ ಕೇವಿನ್ ಪೀಟರ್ಸ ಸ್ ಬೌಲಿಂಗ್ ನಲ್ಲಿ ಶತಕ ಬಾರಿಸಿದ ಕುಂಬ್ಳೆ ಮಕ್ಕಳಂತೆ ಕುಣಿದಾಡಿದ್ದರು.

ಸರಣಿ ಸಮಬಲ

ಸರಣಿ ಸಮಬಲ

2002ರಲ್ಲಿ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್ ಕಿತ್ತ ಕುಂಬ್ಳೆ ಕೈತಪ್ಪಿ ಹೋಗುತ್ತಿದ್ದ ಸರಣಿಯಲ್ಲಿ ಭಾರತ ಸಮಬಲ ಸಾಧಿಸುವಂತೆ ಮಾಡಿದರು. ಭಾರತದ ಮುಂದಾಳತ್ವ ವಹಿಸಿಕೊಂಡಿದ್ದ ಕುಂಬ್ಳೆ ಜಾಣ್ಮೆ ಮತ್ತು ಬೌಲಿಂಗ್ ಗೆ ಪ್ರಪಂಚ ಮತ್ತೊಮ್ಮೆ ಚಪ್ಪಾಳೆ ತಟ್ಟಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Astute knowledge of the game, dogged determination and commitment to excellence were some of the hallmarks of Anil Kumble's playing days, qualities he will now expect from Virat Kohli and his boys as he takes over as the chief coach of the Indian cricket team.
Please Wait while comments are loading...