ವಿಂಡೀಸ್ ಪ್ರವಾಸಕ್ಕೆ ಹೊರಟ ಟೀಂ ಇಂಡಿಯಾ, ಕುಂಬ್ಳೆ ಮಿಸ್ಸಿಂಗ್?

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುಂಚಿತವಾಗಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಕಿತ್ತಾಟ ಭುಗಿಲೆದ್ದಿತ್ತು. ಈಗ ಅದು ಇನ್ನಷ್ಟು ಸ್ಫೋಟಗೊಂಡಿದೆ.

ಲಭ್ಯ ಮಾಹಿತಿ ಪ್ರಕಾರ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿರುವ ಟೀಂ ಇಂಡಿಯಾ ಜತೆ ಕೋಚ್ ಅನಿಲ್ ಕುಂಬ್ಳೆ ಕಾಣಿಸಿಕೊಂಡಿಲ್ಲ.

ಕುಂಬ್ಳೆ ಅವರು ತಡವಾಗಿ ಕೆರಿಬಿಯನ್ ದ್ವೀಪಕ್ಕೆ ತೆರಳುತ್ತಾರೋ ಅಥವಾ ಇಲ್ಲವೋ ಇನ್ನೂ ಮಾಹಿತಿ ಇರಲಿಲ್ಲ. ಆದರೆ, ತಂಡದಲ್ಲಿನ ಹುಳುಕನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿ ಕುಂಬ್ಳೆ ಅವರ ಕಾರ್ಯಕ್ರಮ ವಿವರ ನೀಡಿದೆ.

ಟೀಂ ಇಂಡಿಯಾದ ಎಲ್ಲಾ ಸದಸ್ಯರು ಚಾಂಪಿಯನ್ಸ್ ಟ್ರೋಫಿ ಮುಗಿಸಿಕೊಂಡು ಲಂಡನ್ನಿನಿಂದ ವಿಮಾನವೇರಿ ಕೆರಿಬಿಯನ್ ದ್ವೀಪಕ್ಕೆ ಹಾರಿದ್ದಾರೆ. ಆದರೆ, ತಂಡದ ಸದಸ್ಯರ ಜತೆ ಅನಿಲ್ ಕುಂಬ್ಳೆ ಕಾಣಿಸಿಕೊಂಡಿಲ್ಲ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ ನಂತರ ಅನಿಲ್ ಕುಂಬ್ಳೆ ಅವರ ಕೋಚ್ ಅವಧಿ ಮುಗಿಯಲಿದ್ದು, ಹೊಸ ಕೋಚ್ ಹುಡುಕಾಟ ಜಾರಿಯಲ್ಲಿದೆ. ಈ ನಡುವೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕುಂಬ್ಳೆ ಅವರೇ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ದೃಢ ಪಡಿಸಿದೆ.

ಕುಂಬ್ಳೆ ವಿಂಡೀಸ್ ವಿಮಾನ ಹತ್ತಲಿಲ್ಲ

ಕುಂಬ್ಳೆ ವಿಂಡೀಸ್ ವಿಮಾನ ಹತ್ತಲಿಲ್ಲ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದು, ಐದು ಏಕದಿನ ಪಂದ ಹಾಗೂ ಒಂದು ಟಿ20 ಪಂದ್ಯಗಳನ್ನಾಡಲಿದೆ. ರಿಷಬ್ ಪಂತ್ ಹಾಗೂ ಕುಲದೀಪ್ ಯಾದವ್ ಹೊಸ ಮುಖಗಳಾಗಿವೆ. ರೋಹಿತ್ ಶರ್ಮರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಗೂ ಅನಿಲ್ ಕುಂಬ್ಳೆ ಅವರೇ ಮುಖ್ಯ ಕೋಚ್ ಆಗಿದ್ದಾರೆ.

ಟೀಂ ಇಂಡಿಯಾ

ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಟೀಂ ಇಂಡಿಯಾದ ಆಟಗಾರರ ಪೈಕಿ, ಆರಂಭಿಕ ಆಟಗಾರ ಶಿಖರ್ ಧವನ್ ಅವರು ವಿಮಾನ್ದಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.

ಕುಂಬ್ಳೆ ಏಕೆ ಹೋಗುತ್ತಿಲ್ಲ

ಲಂಡನ್ನಿನಿಂದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿರುವ ಟೀಂ ಇಂಡಿಯಾದ ಜತೆ ಕೋಚ್ ಅನಿಲ್ ಕುಂಬ್ಳೆ ಅವರು ತೆರಳುತ್ತಿಲ್ಲ ಎಂದು ವರದಿ ಮಾಡಿದ ಎಬಿಪಿ ನ್ಯೂಸ್

ಬಿಸಿಸಿಐನಿಂದ ಸ್ಪಷ್ಟನೆ

ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ, ಟೀಂ ಇಂಡಿಯಾದ ಸದಸ್ಯರ ಜತೆ ಕುಂಬ್ಳೆ ಅವರು ತೆರಳಲು ಆಗಲಿಲ್ಲ. ನಂತರ ಅವರು ತಂಡವನ್ನು ಸೇರುತ್ತಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Amid reports of relationship between Virat Kohli and head coach Anil Kumble reaching 'beyond the repair stage', the latter did not join the Indian Team on the flight to West Indies.
Please Wait while comments are loading...