ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ

Posted By:
Subscribe to Oneindia Kannada

ಧರ್ಮಶಾಲ, ಜೂನ್ 23: ಟೀಂ ಇಂಡಿಯಾದ ಮುಂದಿನ ಕೋಚ್ ಯಾರಾಗಲಿದ್ದಾರೆ? ಎಂಬ ಕುತೂಹಲದ ಪ್ರಶ್ನೆಗೆ ಗುರುವಾರ ಸಂಜೆ ಉತ್ತರ ಸಿಕ್ಕಿದೆ. ಸ್ಪಿನ್ ಮಾಂತ್ರಿಕ, ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಪ್ರಕಟಿಸಿದ್ದಾರೆ.

ಧರ್ಮಶಾಲದಲ್ಲಿ ಗುರುವಾರ ನಡೆದ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ರವಿಶಾಸ್ತ್ರಿ ಹಾಗೂ ಅನಿಲ್ ಕುಂಬ್ಳೆ ನಡುವಿನ ರೇಸಿನಲ್ಲಿ ಅನಿಲ್ ಕುಂಬ್ಳೆ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಗೆ ಮಾತ್ರ ಕೋಚ್ ಆಗಿ ನೇಮಿಸಲಾಗಿದೆ. ಅನಿಲ್ ಕುಂಬ್ಳೆ ಅವರು ಈಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. [2016-17: 13 ಟೆಸ್ಟ್, 8 ಒಡಿಐ, 3 ಟಿ20 ಟೀಂ ಇಂಡಿಯಾ ವೇಳಾಪಟ್ಟಿ]

Anil Kumble appointed as Team India head coach BCCI

956 ಅಂತಾರಾಷ್ಟ್ರೀಯ ವಿಕೆಟ್ (ಟೆಸ್ಟ್ ನಲ್ಲಿ 619 ಹಾಗೂ ಒಡಿಐ 337) ಪಡೆದಿರುವ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಈ ಹಿಂದೆ ಕೆಎಸ್ ಸಿಎಯಲ್ಲಿ ಆಡಳಿತಗಾರರಾಗಿ ಅನುಭವ ಹೊಂದಿದ್ದಾರೆ. ಕುಂಬ್ಳೆ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. [ಬೌಲಿಂಗ್ ಕೋಚ್ ಆಗಲು ಅರ್ಜಿ ಹಾಕಿದ ವೆಂಕಟೇಶ್ ಪ್ರಸಾದ್]

ಟೀಂ ಇಂಡಿಯಾದಲ್ಲಿ ಪ್ರಸಕ್ತ ಕ್ರಿಕೆಟ್ ಋತುವಿನಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ವಿರುದ್ಧ 13 ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ. [ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ರವಿಶಾಸ್ತ್ರಿ, ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್ ಅಲ್ಲದೆ, ಮಾಜಿ ಬ್ಯಾಟ್ಸ್ ಮನ್ ಹೃಷಿಕೇಶ್ ಕಾನಿಟ್ಕರ್, ಮಾಜಿ ವೇಗಿ ಬಲ್ವಿಂದರ್ ಸಿಂಗ್ ಸಂಧು ಸೇರಿದಂತೆ 57 ಜನ ಸ್ಪರ್ಧೆಯಲ್ಲಿದ್ದರು. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ರವಿ ಶಾಸ್ತ್ರಿ ಹಾಗೂ ಅನಿಲ್ ಕುಂಬ್ಳೆ ಹೆಸರನ್ನು ಅಂತಿಮಗೊಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India captain Anil Kumble is appointed as new head coach of Indian cricket team announced by the Board of Control for Cricket in India (BCCI) President Anurag Thakur today in Dharmashala.
Please Wait while comments are loading...