ಶ್ರೀಲಂಕಾː ನಾಯಕತ್ವದಿಂದ ಕೆಳಗಿಳಿದ ಏಂಜೆಲೋ ಮ್ಯಾಥ್ಯೂಸ್

Posted By:
Subscribe to Oneindia Kannada

ಕೊಲಂಬೋ, ಜುಲೈ 12 : ಜಿಂಬಾಬ್ವೆ ವಿರುದ್ಧ ತವರು ನೆಲದಲ್ಲಿ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದ ಬಳಿಕ ಶ್ರೀಲಂಕಾ ತಂಡದ ನಾಯಕತ್ವದಿಂದ ಏಂಜೆಲೋ ಮ್ಯಾಥ್ಯೂಸ್ ಕೆಳಗಿಳಿದಿದ್ದಾರೆ.

5 ಪಂದ್ಯಗಳ ಏಕದಿನ ಸರಣಿಯನ್ನು 3-2ರಲ್ಲಿ ಗೆದ್ದ ಜಿಂಬಾವೆ ಐತಿಹಾಸಿಕ ಸಾಧನೆ ಮಾಡಿತ್ತು. ಐಸಿಸಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಜಿಂಬಾಬ್ವೆ ತಂಡದ ವಿರುದ್ಧ ಲಂಕಾ ಸೋಲು ಕಂಡಿದ್ದರಿಂದ ಮ್ಯಾಥ್ಯೂಸ್ ವಿರುದ್ಧ ಟೀಕೆಗಳು ಕೇಳಿ ಬಂದಿತ್ತು.

Angelo Mathews quits as Sri Lanka captain

ಸರಣಿ ಸೋಲಿನ ಬಳಿಕ ಮಾತನಾಡಿದ ಮ್ಯಾಥ್ಯೂಸ್,ಝಿಂಬಾಬ್ವೆ ವಿರುದ್ಧ ಸೋಲು ನನ್ನ ವೃತ್ತಿಜೀವನದ ಅತ್ಯಂತ ಕಹಿ ವಿಷಯ. ಈ ಕಹಿ ನುಂಗಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ನಮ್ಮ ವಿರುದ್ಧವಾಗಿದ್ದವು. ನಮ್ಮ ತಪ್ಪಿಗೆ ಕ್ಷಮೆಯಿಲ್ಲ. ಝಿಂಬಾಬ್ವೆಯನ್ನು ಸೋಲಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ಆ ತಂಡ ಉತ್ತಮ ಕ್ರಿಕೆಟ್ ಆಡಿತ್ತು. ನಾಯಕತ್ವ ತ್ಯಜಿಸುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಸ್ವಲ್ಪ ಯೋಚಿಸಿ, ಆಯ್ಕೆಗಾರರೊಂದಿಗೆ ಮಾತನಾಡಿದ ಬಳಿಕ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದರು.

ಆದರೆ, ಮಂಗಳವಾರ(ಜುಲೈ 11)ದಂದು ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದಾರೆ. ಶ್ರೇಯಾಂಕ ಪಟ್ಟಿಯಲ್ಲಿ ಐರ್ಲೆಂಡ್ ಗಿಂತ ಮೇಲಿರುವ ಜಿಂಬಾಬ್ವೆ, ವಿದೇಶಿ ನೆಲದಲ್ಲಿ 2009ರ ನಂತರ ಗೆಲುವು ಸಾಧಿಸಿರಲಿಲ್ಲ. ಕೀನ್ಯಾದಲ್ಲಿ ಸರಣಿ ಜಯ ದಾಖಲಿಸಿದ್ದ ಜಿಂಬಾಬ್ವೆ ಈಗ ಶ್ರೀಲಂಕಾಕ್ಕೆ ಆಘಾತಕಾರಿ ಸೋಲುಣಿಸಿತು.

ಚಾಪಿಯನ್ಸ್ ಟ್ರೋಫಿಯಲ್ಲಿ ಬೇಗನೆ ನಿರ್ಗಮನದ ಜತೆ ಕೋಚ್ ಮಧ್ಯದಲ್ಲೇ ಲಂಕಾ ತಂಡವನ್ನು ತೊರೆದಿದ್ದು, ಆಟಗಾರರ ಫಿಟ್ನೆಸ್ ಸಮಸ್ಯೆ ಹೀಗೆ ಶ್ರೀಲಂಕಾ ಏಕದಿನ ತಂಡ ಸಮಸ್ಯೆಗಳ ಸುಳಿಯಲ್ಲಿದೆ. ಶುಕ್ರವಾರದಂದು ಜಿಂಬಾಬ್ವೆ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಲಂಕಾ ಸಜ್ಜಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Angelo Mathews on Tuesday (July 11) stepped down as the captain of Sri Lanka from all formats after 3-2 ODI series loss against Zimbabwe.
Please Wait while comments are loading...