ಉದ್ದೀಪನ ಮದ್ದು ಸೇವನೆ, ಅಲ್ ರೌಂಡರ್ ರಸೆಲ್ ಗೆ ನಿಷೇಧ

Posted By:
Subscribe to Oneindia Kannada

ಕಿಂಗ್ಸ್ ಟನ್(ಜಮೈಕಾ), ಫೆಬ್ರವರಿ 01: ವೆಸ್ಟ್ ಇಂಡೀಸ್ ನ ಸ್ಫೋಟಕ ಆಲ್ ರೌಂಡರ್ ಆಂಡ್ರೆ ರಸೆಲ್ ಅವರನ್ನು ಒಂದು ವರ್ಷ ಮಟ್ಟಿಗೆ ಕ್ರಿಕೆಟ್ ನಿಂದ ನಿಷೇಧ ಹೇರಲಾಗಿದೆ. ರಸೆಲ್ ಅವರು ಉದ್ದೀಪನ ಮದ್ದು ಸೇವನೆ ಆರೋಪ ಹೊತ್ತಿದ್ದಾರೆ.

28 ವರ್ಷ ವಯಸಿನ ರಸೆಲ್ ಅವರು 12 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ದೂರ ಇರಬೇಕಾಗಿದ್ದು, ಜನವರಿ 31ರಿಂದ ಆದೇಶ ಜಾರಿಯಾಗಿದೆ. ಇದು ವಾಡಾ ನಿಯಮದ ಪ್ರಕಾರ ತೆಗೆದುಕೊಂಡ ನಿರ್ಣಯ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.

Andre Russell banned for 1 year, will miss IPL 2017

ವಾಡಾ ನಿಯಮದ ಪ್ರಕಾರ ಆರೋಪ ಹೊತ್ತ ಆಟಗಾರರು ತಮ್ಮ ಇರುವಿಕೆ ಬಗ್ಗೆ ಸಮಿತಿಗೆ ತಿಳಿಸಬೇಕಾಗುತ್ತದೆ. ಅದರೆ, ರಸೆಲ್ ಅವರು ಈ ನಿಯಮ ಮೀರಿದ್ದಾರೆ. ಒಂದು ಟೆಸ್ಟ್ ಪಂದ್ಯ, 53 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 43 ಟ್ವೆಂಟಿ 20 ಪಂದ್ಯಗಳನ್ನಾಡಿದ್ದಾರೆ. 2016ರಲ್ಲಿ ಐಸಿಸಿ ವಿಶ್ವ ಟಿ20 ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ರಸೆಲ್ ಅವರು ಐಪಿಎಲ್ 10ರಲ್ಲಿ ಆಡಲು ಆಗುತ್ತಿಲ್ಲ ಎಂಬ ಸುದ್ದಿ ಆಘಾತಕಾರಿ ಎಂದು ತಂಡದ ಸಿಇಒ ವೆಂಕಿ ಮೈಸೂರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
West Indies' big-hitting all-rounder Andre Russell has been banned from cricket for a period of one year for a doping code violation, media reports said on Tuesday (January 31).
Please Wait while comments are loading...