ಕೆಕೆಆರ್ ಗೆ ಕಮ್ ಬ್ಯಾಕ್ ಮಾಡಿದ ವೇಗಿ ರಸೆಲ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 25 : ಕಾಲಿನ ಗಾಯಕ್ಕೆ ಒಳಗಾಗಿ ಎರಡು ಪಂದ್ಯದಿಂದ ಹೊರಗುಳಿದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಆಂಡ್ರೆ ರಸೆಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 25 ರಂದು ದೆಹಲಿಯಲ್ಲಿ ನಡೆಯಲಿರುವ ಎಲಿಮಿನೇಟರ್ ನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ರಸೆಲ್ ಕಣಕ್ಕಿಳಿಯಲಿದ್ದಾರೆ. ಪ್ರಮುಖ ಪಂದ್ಯಕ್ಕೆ ಮರಳಿರುವುದರಿಂದ ಕೆಕೆಆರ್ ಗೆ ಆನೆ ಬಲ ಬಂತಾಗಿದೆ. [ಗುಜರಾತ್ ಮಣಿಸಿ ಫೈನಲಿಗೆ ಲಗ್ಗೆ ಇಟ್ಟ ಆರ್ ಸಿಬಿ]

Andre Russel back for KKR to strengthen the side ahead of eliminator

ಇತ್ತೀಚೆಗೆ ರಸೆಲ್ ಕಾಲಿಗೆ ಗಾಯ ಮಾಡಿಕೊಂಡು ಕಳೆದ ಎರಡು ಪಂದ್ಯಗಳಿಂದ ದೂರ ಉಳಿದಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ರಸೆಲ್ ತಂಡಕ್ಕೆ ವಾಪಸ್ಸು ಆಗಿದ್ದರಿಂದ ಕೆಕೆಆರ್ ಗೆ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ.

ರಸೆಲ್ ಆಲ್ ರೌಂಡರ್ ಆಟದಿಂದ ಕೆಲ ಪಂದ್ಯಗಳಲ್ಲಿ ಕೋಲ್ಕತ್ತಾ ಗೆಲವು ಪಡೆದುಕೊಂಡು ಪ್ಲೇ ಆಫ್ ಸುತ್ತಿಗೆ ಬಂದು ತಲುಪಿದೆ.

ರಸೆಲ್ ಆಡಿರುವ 12 ಪಂದ್ಯಗಳಲ್ಲಿ 188 ರನ್ ಗಳಿಸಿರುವ ಜೊತೆ 15 ವಿಕೆಟ್ ಕಬಳಿಸಿ ಆಲ್ ರೌಂಡರ್ ಆಟ ಪ್ರದರ್ಶನದಿಂದ ಕೆಲ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದಾರೆ. ಈಗಾಗಲೇ ಎರಡು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Knight Riders were under some pressure in that final game and were short of quality at times but managed to get over the line. However, for the eliminator, it is understood that star all-rounder Andre Russel will be back fit and available
Please Wait while comments are loading...